ಬ್ರಹ್ಮಪುತ್ರ ನದಿಯಲ್ಲಿ ಪ್ರವಾಹ : ಅಸ್ಸಾಂನಲ್ಲಿ 46 ಜನರ ಸಾವು!

  • 16 ಲಕ್ಷಕ್ಕೂ ಅಧಿಕ ನೆರೆ ಪೀಡಿತರು !

  • ಅರುಣಾಚಲ ಪ್ರದೇಶದಲ್ಲಿಯೂ ಪ್ರವಾಹ ಪರಿಸ್ಥಿತಿ ಗಂಭೀರ !

ಗೌಹಾಟಿ (ಅಸ್ಸಾಂ) – ಬ್ರಹ್ಮಪುತ್ರ ನದಿಯಲ್ಲಿ ಪ್ರವಾಹ ಉಂಟಾಗಿ ಅಸ್ಸಾಂ ರಾಜ್ಯದಲ್ಲಿ ಹಾಹಾಕಾರವೆದ್ದಿದೆ. ಪ್ರವಾಹದಿಂದಾಗಿ ಇದುವರೆಗೆ 46 ಜನರು ಬಲಿಯಾಗಿದ್ದು, ಜುಲೈ 3ರಂದು ಪ್ರವಾಹದ ನೀರಿನಲ್ಲಿ ಮುಳುಗಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ. 16 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದ ನೀರಿನಿಂದ ತೊಂದರೆಗೀಡಾಗಿದ್ದಾರೆ. ಅಸ್ಸಾಂ ಆಡಳಿತವು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 515 ಸಹಾಯ ಶಿಬಿರಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ಸುಮಾರು 4 ಲಕ್ಷ ಜನರು ಆಶ್ರಯ ಪಡೆಯುತ್ತಿದ್ದಾರೆ. ರಾಜ್ಯದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 11 ಪ್ರಾಣಿಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದು, 65 ಪ್ರಾಣಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬ್ರಹ್ಮಪುತ್ರಾ ನದಿಯೊಂದಿಗೆ ರಾಜ್ಯದ ಇತರ ನದಿಗಳೂ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರು ರಾಜ್ಯದ ನೆರೆಹಾವಳಿ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಪತ್ರಕರ್ತರಿಗೆ ಮಾಹಿತಿ ನೀಡಿದರು. ಅವರು ಮಾತನಾಡುತ್ತಾ, ರಾಜ್ಯದಲ್ಲಿ ವಿನಾಶಕಾರಿ ಪ್ರವಾಹವು ಮುಖ್ಯವಾಗಿ ಅರುಣಾಚಲ ಪ್ರದೇಶದಲ್ಲಿನ ಮೇಘಸ್ಫೋಟದಿಂದ ಆಗಿದೆ. ಚೀನಾ, ಭೂತಾನ್ ಮತ್ತು ಅರುಣಾಚಲ ಪ್ರದೇಶದ ಮೇಲಿನ ಪ್ರದೇಶಗಳು ಅತಿವೃಷ್ಟಿಯಿಂದಾಗಿ ಜಲಾವೃತವಾಗಿವೆ. ಇದು ಭೌಗೋಳಿಕ ಕಾರಣವಾಗಿದ್ದು, ಇವುಗಳನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲಿ ಇರಲಿಲ್ಲ ಎಂದು ಹೇಳಿದರು.

ಅಸ್ಸಾಂನಲ್ಲಿ ಹಾನಿಯ ಅಂಕಿಅಂಶಗಳು

1. ರಾಜ್ಯದ 29 ಜಿಲ್ಲೆಗಳಲ್ಲಿನ ಕನಿಷ್ಠ 16.25 ಲಕ್ಷಕ್ಕಿಂತ ಅಧಿಕ ಜನರು ಪೀಡಿತರಾಗಿದ್ದಾರೆ!

2. 42 ಸಾವಿರದ 476 ಹೆಕ್ಟೇರ್ ಬೆಳೆ ಪ್ರದೇಶ ನೀರಿನಲ್ಲಿ ಮುಳುಗಿದೆ!

3. 2 ಸಾವಿರದ 800 ಗ್ರಾಮಗಳು ಪೀಡಿತ!

4. 100 ರಸ್ತೆಗಳು, 14 ಸೇತುವೆಗಳು ಮತ್ತು 11 ಒಡ್ಡುಗಳ ಹಾನಿ!

ಅರುಣಾಚಲ ಪ್ರದೇಶದಲ್ಲಿ 60 ಸಾವಿರ ಜನರು ಪೀಡಿತರು

ಅರುಣಾಚಲ ಪ್ರದೇಶದಲ್ಲಿಯೂ ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ. ಆಡಳಿತಾಧಿಕಾರಿಗಳು, ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ. ನಾಮಸಾಯಿ, ಲೋಹಿತ, ಚಾಂಗಲಾಂಗ ಮತ್ತು ಪೂರ್ವ ಸಿಯಾಂಗ್ ಈ 4 ಜಿಲ್ಲೆಗಳು ತೀವ್ರ ಪ್ರವಾಹುಂಟಾಗಿದೆ. ಕೆಲವೆಡೆ ಭೂಕುಸಿತ ಸಂಭವಿಸಿದೆ. ನಿರಂತರ ಮಳೆಯಿಂದಾಗಿ, ಮಣಿಪುರದ ಪಶ್ಚಿಮ ಇಂಫಾಲ್ ಮತ್ತು ಪೂರ್ವ ಇಂಫಾಲ್ ಜಿಲ್ಲೆಗಳಲ್ಲಿ ಅನೇಕ ಸ್ಥಳಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೇನಾಪತಿ ಜಿಲ್ಲೆಯ ಸೇನಾಪತಿ ನದಿಯಲ್ಲಿ 2 ಜನರು ಮುಳುಗಿ ಮರಣ ಹೊಂದಿದ್ದಾರೆ.