ಅಸ್ಸಾಂನ ಗೃಹಸಚಿವ ಆತ್ಮಹತ್ಯೆ

ತನ್ನ ಪತ್ನಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರು !

ಅಸ್ಸಾಂನ ಗೃಹ ಮತ್ತು ರಾಜಕೀಯ ಕಾರ್ಯದರ್ಶಿ ಶಿಲಾದಿತ್ಯ ಚೇಟಿಯಾ

ಗೌಹಾಟಿ – ಅಸ್ಸಾಂನ ಗೃಹ ಮತ್ತು ರಾಜಕೀಯ ಕಾರ್ಯದರ್ಶಿ ಶಿಲಾದಿತ್ಯ ಚೇಟಿಯಾ ತನ್ನ ಹೆಂಡತಿಯ ಮರಣದ ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅವರ ಪತ್ನಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳಿಂದ ಗೌಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. (ಶಿಕ್ಷಣದಲ್ಲಿ ಸಾಧನೆಯ ವಿಷಯ ಸೇರಿಸದೇ ಇದ್ದರಿಂದ ಉನ್ನತ ಶಿಕ್ಷಣ ಪಡೆದವರೂ ಕಷ್ಟದ ಸಂದರ್ಭಗಳನ್ನು ಧೈರ್ಯದಿಂದ ಎದುರಿಸಲಾರರು ಎಂಬುದನ್ನು ಈ ಘಟನೆ ತೋರಿಸುತ್ತದೆ ! ಇದು ಶಿಕ್ಷಣದಲ್ಲಿ ಸಾಧನೆ ಕಲಿಸುವ ಮಹತ್ವವನ್ನು ಎತ್ತಿ ತೋರಿಸುತ್ತದೆ ! – ಸಂಪಾದಕರು)

ಜೂನ್ 18 ರಂದು ಶಿಲಾದಿತ್ಯ ಚೇಟಿಯಾ ಅವರ 40 ವರ್ಷದ ಪತ್ನಿ ಕ್ಯಾನ್ಸ್‌ರ್‍‌ನಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಸಾವಿನ 10 ನಿಮಿಷಗಳಲ್ಲಿ, 44 ವರ್ಷದ ಚೇಟಿಯಾ ತಮ್ಮ ಸ್ವಂತ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಅನಾರೋಗ್ಯದ ಕಾರಣ ಕಳೆದ 4 ತಿಂಗಳಿಂದ ಚೇಟಿಯಾ ರಜೆಯಲ್ಲಿದ್ದರು. ಚೇಟಿಯಾ ಇವರಿಗೆ ರಾಷ್ಟ್ರಪತಿಗಳಿಂದ ಶೌರ್ಯ ಪದಕವೂ ಸಿಕ್ಕಿದೆ.