ಚಕಮ ಜನಾಂಗದ ನಿರಾಶ್ರಿತರನ್ನು ಅಸ್ಸಾಂನ ಜನತೆ ಸ್ವೀಕರಿಸುವುದಿಲ್ಲ ! – ವಿರೋಧ ಪಕ್ಷ

೧ ಲಕ್ಷ ಚಕಮ ಜನಾಂಗದ ನಿರಾಶ್ರಿತರನ್ನು ಅರುಣಾಚಲ ಪ್ರದೇಶದಿಂದ ಅಸ್ಸಾಂಗೆ ಸ್ಥಳಾಂತರಿಸುವ ಕಿರೇನ್ ರಿಜಿಜು ಇವರ ಹೇಳಿಕೆಯ ಪ್ರಕರಣ

ಗೋಹಾಟಿ (ಅಸ್ಸಾಂ) – ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಕಿರಣ್ ರಿಜಿಜು ಇವರು ಅರುಣಾಚಲ ಪ್ರದೇಶದಲ್ಲಿ ವಾಸಿಸುತ್ತಿರುವ ಒಂದು ಲಕ್ಷ ಚಕಮ ಮತ್ತು ಹಾರ್ಜೋಗ್ ಜನಾಂಗದ ನಿರಾಶ್ರಿತರನ್ನು ಚುನಾವಣೆಯ ನಂತರ ಅಸ್ಸಾಂಗೆ ಸ್ಥಳಾಂತರಿಸಲಾಗುವುದೆಂದು, ಹೇಳಿಕೆ ನೀಡಿದ್ದರು. ಈ ಕ್ರಮ ಪೌರತ್ವ ತಿದ್ದುಪಡಿ ಕಾನೂನಿನ ಅಂತರ್ಗತ ನಡೆಯುವುದು ಎಂದು ಕೂಡ ಅವರು ಹೇಳಿದ್ದರು. ಇದರ ಬಗ್ಗೆ ವಿರೋಧ ಪಕ್ಷ ಟೀಕೆಸುತ್ತಿದೆ. ಅಸ್ಸಾಂ ಜಾತಿಯ ಪರಿಷತ್ ಮತ್ತು ಕಾಂಗ್ರೆಸ್ ಈ ಬಗ್ಗೆ, ನಿರಾಶ್ರಿತರಿಗೆ ರಾಜ್ಯದಲ್ಲಿ ವಾಸಿಸಲು ಬಿಡುವುದಿಲ್ಲ. ರಾಯಜೊರ ತಂಡದ ಸಂಸದ ಅಖಿಲ್ ಗೋಗೋಯಿ ಇವರು, ರಾಜ್ಯದ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು ಕೇಂದ್ರ ಸರಕಾರದ ಮುಂದೆ ಶರಣಾಗತಿ ಸ್ವೀಕರಿಸಿದ್ದಾರೆ. ಅಸ್ಸಾಂನ ಜನರು ಚಕಮದ ಸ್ಥಳಾಂತರ ಸ್ವೀಕರಿಸಲಾರರು ಎಂದು ಹೇಳಿದರು.

ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು, ಕೇಂದ್ರ ಸರಕಾರವು ಇದರ ಬಗ್ಗೆ ಇಲ್ಲಿಯವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇನ್ನೊಂದು ಕಡೆಗೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ೨೦೨೧ ರಲ್ಲಿ ಅರುಣಾಚಲ ಪ್ರದೇಶಕ್ಕೆ ಕೇವಲ ಚಕಮ ಮತ್ತು ಹಾಜೊಂರ್ಗ ಇವರ ಜನಗಣತಿ ನಿಲ್ಲಿಸಲು ಆದೇಶ ನೀಡಿತ್ತು ಎಂದು ಹೇಳಿದರು.

(ಸೌಜನ್ಯ – Prag News)