ಮದ್ರಾಸ ಉಚ್ಚ ನ್ಯಾಯಾಲಯದ ಮಹತ್ವದ ಆದೇಶ

ನವ ದೆಹಲಿ – ತಮಿಳುನಾಡಿನ ಅಪರಾಧಿಯೊಬ್ಬನಿಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ, ಹಾಗೂ ‘ಸ್ಫೋಟಕ ವಸ್ತುಗಳ ಕಾಯ್ದೆ’ಯಡಿ ಒಂದು ವರ್ಷದ ಹೆಚ್ಚುವರಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಎ. ಧನಪಾಲ ಎಂಬ ಹೆಸರಿನ ಈತ 21 ವರ್ಷಗಳಿಗಿಂತಲೂ ಹೆಚ್ಚು ಕಾಲವನ್ನು ಸೆರೆಮನೆಯಲ್ಲಿ ಕಳೆದಿದ್ದಾನೆ. ದೀರ್ಘಕಾಲದ ನಂತರ ಆತ ಅವಧಿಗೂ ಮುನ್ನ ಬಿಡುಗಡೆಗಾಗಿ ಅರ್ಜಿ ಸಲ್ಲಿಸಿದ್ದನು. ಆದಾಗ್ಯೂ, ದಂಡ ಪ್ರಕ್ರಿಯಾ ಸಂಹಿತೆಯ ಕಲಂ 435 ರ ಅಡಿಯಲ್ಲಿ ಕೇಂದ್ರ ಸರಕಾರದ ಅನುಮತಿ ಅಗತ್ಯವಿದೆ ಎಂದು ಹೇಳಿ ತಮಿಳುನಾಡು ಸರಕಾರವು ಆತನ ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ವಿರುದ್ಧ ಧನಪಾಲ ಅವರ ಪುತ್ರ ನಂಜಿಲ್ ಮುಗಿಲನ್ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕೇಂದ್ರೀಯ ಕಾಯ್ದೆಯಡಿ ವಿಧಿಸಲಾಗಿದ್ದ 1 ವರ್ಷದ ಶಿಕ್ಷೆಯನ್ನು ತನ್ನ ತಂದೆ ಈಗಾಗಲೇ ಪೂರ್ಣಗೊಳಿಸಿದ್ದಾರೆ, ಆದ್ದರಿಂದ ಈಗ ಕೇಂದ್ರ ಸರಕಾರದ ಸಮ್ಮತಿಯ ಶರತ್ತು ಅನ್ವಯಿಸಬಾರದು ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಈ ಕುರಿತು ಉಚ್ಚ ನ್ಯಾಯಾಲಯವು, ಒಂದು ವೇಳೆ ಆ ಶಿಕ್ಷೆಯು ಈಗಾಗಲೇ ಪೂರ್ಣಗೊಂಡಿದ್ದರೆ, ಕೇವಲ ಕೇಂದ್ರ ಸರಕಾರದ ಅನುಮತಿಯ ಕಾರಣವನ್ನು ಒಡ್ಡಿ ಕೈದಿಯೊಬ್ಬನನ್ನು ಅವಧಿಗೂ ಮುನ್ನ ಬಿಡುಗಡೆಯಾಗುವ ಲಾಭದಿಂದ ವಂಚಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನಿತಾ ಸುಮಂತ ಮತ್ತು ನ್ಯಾಯಮೂರ್ತಿ ಸುಂದರ ಮೋಹನ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.
ನಿರ್ದೇಶನಗಳ ದೂರಗಾಮಿ ಮಹತ್ವ!
ಧನಪಾಲ್ ಅವರ ಅರ್ಜಿಯನ್ನು ಮರುಪರಿಶೀಲಿಸುವಂತೆ ಮತ್ತು 4 ವಾರಗಳ ಒಳಗಾಗಿ ನಿರ್ಧಾರ ಕೈಗೊಳ್ಳುವಂತೆ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಈ ನಿರ್ದೇಶನವು ಸರಕಾರದ ಅಧಿಕಾರಗಳು ಮತ್ತು ಕಾನೂನಿನ ಚೌಕಟ್ಟಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಯತ್ನವಷ್ಟೇ ಅಲ್ಲದೆ, ಭಾರತೀಯ ಕಾರಾಗೃಹ ವ್ಯವಸ್ಥೆ, ಕೈದಿಗಳ ಹಕ್ಕುಗಳು ಮತ್ತು ಅವಧಿಗೂ ಮುನ್ನ ಬಿಡುಗಡೆ ಮಾಡುವ ಕಾನೂನಿನ ವ್ಯಾಖ್ಯಾನದಲ್ಲಿ ಈ ನಿರ್ಧಾರವು ಒಂದು ಮೈಲಿಗಲ್ಲಾಗಬಲ್ಲದು.
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished