ಮುಸ್ಲಿಮರು ಎರಡನೇ ಮದುವೆಯಾದರೆ ಜೈಲಿಗೆ ತಳ್ಳುವೆವು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿಕೆ!
ಗೌಹಾಟಿ (ಅಸ್ಸಾಂ) – ಲೋಕಸಭೆ ಚುನಾವಣೆ ಬಳಿಕ ಅಸ್ಸಾಂನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದ್ದು, ಮುಸ್ಲಿಮರು ಮರುಮದುವೆ ಮಾಡಿಕೊಳ್ಳುವಂತಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರನ್ನು ಉದ್ದೇಶಿಸಿ ಮಾತನಾಡುವಾಗ ಮುಖ್ಯಮಂತ್ರಿ ಶರ್ಮಾ ಈ ಮಾಹಿತಿ ನೀಡಿದರು.
(ಸೌಜನ್ಯ – Oneindia Hindi)
1. ಬಿಜೆಪಿ ಮುಸ್ಲಿಮರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಎಂದು ಬದ್ರುದ್ದೀನ್ ಅಜ್ಮಲ್ ಈ ಹಿಂದೆ ಹೇಳಿದ್ದರು. ಮುಸ್ಲಿಮರು ಮರುಮದುವೆಯಾಗಲು ಬಯಸಿದರೆ, ಯಾರೂ ಅವರನ್ನು ತಡೆಯಲು ಸಾಧ್ಯವಿಲ್ಲ; ಏಕೆಂದರೆ ಅವರ ಧರ್ಮವು ಹಾಗೆ ಮಾಡಲು ಅವಕಾಶ ನೀಡುತ್ತದೆ ಎಂದಿದ್ದರು.
2. ಅಸ್ಸಾಂನ ಉದಲಗಿರಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಶರ್ಮಾ, ಅಜ್ಮಲ್ ಮರುಮದುವೆಯಾಗಲು ಬಯಸಿದರೆ, ಈಗಲೇ ಅವಕಾಶವಿದೆ; ಏಕೆಂದರೆ ಚುನಾವಣೆಯ ನಂತರ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲಿದೆ. ಆಗ ನೀವು ಎರಡನೇ ಅಥವಾ ಮೂರನೇ ಮದುವೆಯಾದರೆ, ನೀವು ಜೈಲಿಗೆ ಹೋಗುತ್ತೀರಿ ಎಂದು ಎಚ್ಚರಿಸಿದರು.