ತಾನು 'ಹಿಂದೂ' ಎಂದು ಗುರುತಿಸಿಕೊಂಡು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ !

ಮುಂಬಯಿ, ಜೂನ್ ೫ (ವಾರ್ತೆ) – ನವಿ ಮುಂಬಯಿನ ಖಾರ್ಘರ್‌ನಲ್ಲಿ ‘ಹೇರ್ ಸ್ಪಾ’ (ಕೂದಲಿನ ಸೌಂದರ್ಯವರ್ಧಕ ಚಿಕಿತ್ಸೆ) ಗಾಗಿ ಬಂದಿದ್ದ ಹಿಂದೂ ಮಹಿಳೆಗೆ ಕೂದಲಿನ ಚಿಕಿತ್ಸೆ ನೀಡುವಾಗ ಕಣ್ಣು ಮುಚ್ಚಲು ಹೇಳಿ, ಸಮೀರ್ ಖಾನ್ ಎಂಬ ಮುಸ್ಲಿಂ ಯುವಕ ಆಕೆಯ ತುಟಿಗೆ ಮುತ್ತಿಕ್ಕಿದ್ದಾನೆ. ಈ ಘಟನೆಯ ನಂತರ ಹಿಂದೂ ಮಹಿಳೆ ತಕ್ಷಣವೇ ಕೂದಲಿನ ಚಿಕಿತ್ಸೆಯನ್ನು ನಿಲ್ಲಿಸಲು ಹೇಳಿದರು. ಹಿಂದೂ ಮಹಿಳೆ ಈ ವಿಷಯವನ್ನು ತನ್ನ ಪತಿಗೆ ತಿಳಿಸಿ ಖಾರ್ಘರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮೀರ್ ಖಾನ್‌ನನ್ನು ಬಂಧಿಸಿದ್ದಾರೆ.
ಖಾರ್ಘರ್‌ನ ಸೆಕ್ಟರ್ ನಂ. ೨ ರಲ್ಲಿರುವ ‘ಸಿಎಮ್‌ಸಿ ಸಲೂನ್’ಗೆ ತನ್ನ ತಂಗಿಯ ಪರಿಚಯದ ಸಮೀರ್ ಖಾನ್‌ನ ಬ್ಯೂಟಿ ಪಾರ್ಲರ್‌ಗೆ ಈ ಹಿಂದೂ ಮಹಿಳೆ ಕೂದಲಿನ ಚಿಕಿತ್ಸೆಗಾಗಿ ಹೋಗಿದ್ದರು. ಇದರ ನಂತರ ಚಿಕಿತ್ಸೆಯ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಹಿಂದೂ ಮಹಿಳೆ ಅಲ್ಲಿಂದ ಹೊರಟುಹೋದರು.
ಹೆಸರು ‘ಶಮೀಮ್’; ಆದರೆ ಹೇಳುವುದು ‘ಸಮೀರ್’ !
ಹಿಂದೂ ಮಹಿಳೆಯ ಲೈಂಗಿಕ ಕಿರುಕುಳ ಮಾಡಿದ ಈ ಯುವಕ ತನ್ನ ಹೆಸರನ್ನು ‘ಸಮೀರ್’ ಎಂದು ಹೇಳಿಕೊಳ್ಳುತ್ತಾನೆ. ಹಿಂದೂ ಮಹಿಳೆ ಆನ್‌ಲೈನ್‌ನಲ್ಲಿ ಹಣವನ್ನು ಕಳುಹಿಸಿದಾಗ ಆತನ ಹೆಸರು ‘ಶಮೀಮ್ ಶಕೀರ್ ಸಲ್ಮಾನಿ’ ಎಂದು ಬಂದಿದೆ. ಇದರರ್ಥ ‘ಶಮೀಮ್ ಸಲ್ಮಾನಿ’ ತನ್ನ ಹೆಸರನ್ನು ‘ಸಮೀರ್’ ಎಂದು, ಅಂದರೆ ‘ಹಿಂದೂ’ ಎಂದು ಬಿಂಬಿಸಿಕೊಂಡು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾನೆ.
ಇತರ ಮಹಿಳೆಯರಿಗೆ ಕಿರುಕುಳ ಆಗಬಾರದು ಎಂಬ ಕಾರಣಕ್ಕೆ ದೂರು! – ಸಂತ್ರಸ್ತ ಮಹಿಳೆ
ಸಂತ್ರಸ್ತ ಮಹಿಳೆ ‘ಸನಾತನ ಪ್ರಭಾತ’ ಪ್ರತಿನಿಧಿಯೊಂದಿಗೆ ಮಾತನಾಡುವಾಗ, “ಈ ಘಟನೆಯ ನಂತರ ನನಗೆ ತುಂಬಾ ಭಯವಾಗಿತ್ತು; ಆದರೆ ನಡೆದ ವಿಷಯವನ್ನು ಪತಿಗೆ ತಿಳಿಸಿದಾಗ ಅವರು ‘ಪೊಲೀಸರಿಗೆ ದೂರು ನೀಡೋಣ’ ಎಂದು ಹೇಳಿದರು. ನನ್ನೊಂದಿಗೆ ನಡೆದ ಘಟನೆ ಇತರ ಯುವತಿಯರು ಅಥವಾ ಮಹಿಳೆಯರೊಂದಿಗೂ ನಡೆಯಬಹುದು. ಹಾಗೆ ಆಗಬಾರದು ಎಂಬ ಕಾರಣಕ್ಕಾಗಿ ನಾನು ಪೊಲೀಸರಿಗೆ ದೂರು ನೀಡುವ ಧೈರ್ಯ ಮಾಡಿದೆ,” ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!