ಶಾಹಿದ್ ಅಲಿ ಎಂಬ ಪೊಲೀಸ್ ಅಧಿಕಾರಿಯು ಧರ್ಮದ ಆಧಾರದ ಮೇಲೆ ಮಾನಸಿಕ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರ ಆರೋಪ
ಇಲಾಖಾ ವಿಚಾರಣೆ ಚಾಲ್ತಿಯಲ್ಲಿದೆ !

ಬದಾಯೂ (ಉತ್ತರ ಪ್ರದೇಶ) – ಇಲ್ಲಿ ನ್ಯಾಯಾಲಯದ ಭದ್ರತೆಯಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮೇಘಶ್ಯಾಮ್ ಗೌತಮ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಅವರು ಆತ್ಮಹತ್ಯೆಗೂ ಮುನ್ನ ಯಾವುದೇ ಪತ್ರ ಬರೆದಿಲ್ಲ; ಆದರೆ ಕುಟುಂಬಸ್ಥರು ‘ಪೊಲೀಸ ಇನ್ಸ್‌ಪೆಕ್ಟರ್ ಶಾಹಿದ್ ಅಲಿ ಅವರು ಮೇಘಶ್ಯಾಮ್ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದುದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ. ಈ ಆರೋಪದ ನಂತರ ಇಲಾಖಾ ವಿಚಾರಣೆಗೆ ಆದೇಶ ನೀಡಲಾಗಿದೆ.
ಧಾರ್ಮಿಕ ಕಾರಣಗಳಿಂದ ಕಿರುಕುಳ ನೀಡಲಾದ ಆರೋಪ
ಮೇಘಶ್ಯಾಮ್ ಅವರ ಮಗ ತಿಳಿಸಿರುವಂತೆ, ಮೇಘಶ್ಯಾಮ್ ಅವರು ಅತ್ಯಂತ ಧಾರ್ಮಿಕ ಪ್ರವೃತ್ತಿಯವರಾಗಿದ್ದರು. ಅವರು ಗುರುಗಳಿಂದ ದೀಕ್ಷೆ ಪಡೆದಿದ್ದರು ಮತ್ತು ಅವರಿಗೆ ಭಗವಾನ್ ಶ್ರೀರಾಮ ಹಾಗೂ ಶ್ರೀಕೃಷ್ಣನ ಮೇಲೆ ಶ್ರದ್ಧೆಯಿತ್ತು. ಅವರು ಕೆಲಸಕ್ಕೂ ತಿಲಕ ಇಟ್ಟುಕೊಂಡು ಹೋಗುತ್ತಿದ್ದರು, ಇದಕ್ಕೆ ಶಾಹಿದ್ ಅಲಿ ಅವರ ಆಕ್ಷೇಪವಿತ್ತು. ಶಾಹಿದ್ ಅಲಿ ಅವರು, ‘ಏನು ನೀವು ಪಂಡಿತರು ಈ ತಿಲಕ ಗಿಲಕ ಇಟ್ಟುಕೊಳ್ಳುತ್ತೀರಾ?’ ಎಂದು ಹೇಳುತ್ತಿದ್ದರು. ಇದಕ್ಕೆ ಮೇಘಶ್ಯಾಮ್ ಅವರು, ನೀವು ನಂಬದಿದ್ದರೆ ಏನಾಯಿತು, ನಾವು ನಂಬುತ್ತೇವೆ ಎಂದು ಉತ್ತರವನ್ನೂ ನೀಡಿದ್ದರು. (ಇದೇ ರೀತಿ ಯಾರಾದರೂ ಅಲ್ಪಸಂಖ್ಯಾತ ಹಿಂದೂ ಅಧಿಕಾರಿಯು ಪಾಕಿಸ್ತಾನದಲ್ಲಿ ಮುಸ್ಲಿಂ ಅಧಿಕಾರಿಗೆ ಹೇಳಿದ್ದರೆ ಏನಾಗುತ್ತಿತ್ತು ಎಂಬುದನ್ನು ಯೋಚಿಸಿ! ಭಾರತದಲ್ಲಿ ಮಾತ್ರ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರು ಹಿಂದೂಗಳ ಮೇಲೆ ಧರ್ಮದ ಆಧಾರದ ಮೇಲೆ ಸವಾರಿ ಮಾಡುತ್ತಾರೆ ಮತ್ತು ಹಿಂದೂಗಳು ಅದನ್ನು ಮೂಕಪ್ರೇಕ್ಷಕರಾಗಿ ಸಹಿಸಿಕೊಳ್ಳುತ್ತಾರೆ! ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡು! – ಸಂಪಾದಕರು)
ಕುಟುಂಬಸ್ಥರಿಂದ ಅತ್ಯಂತ ಗಂಭೀರ ಆರೋಪ!
ಕಚೇರಿಯಲ್ಲಿ ನಡೆದ ಇಂತಹ ಘಟನೆಗಳು ಮತ್ತು ಮಾನಸಿಕ ಒತ್ತಡದಿಂದಾಗಿ ತಂದೆಯವರು ಹಲವು ಬಾರಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು ಹಾಗೂ ರಜೆ ತೆಗೆದುಕೊಳ್ಳುತ್ತಿದ್ದರು ಎಂದು ಮಗ ಹೇಳಿದ್ದಾನೆ. ಅವರು ಕಳೆದ 15 ದಿನಗಳಿಂದ ತೀವ್ರ ಒತ್ತಡದಲ್ಲಿದ್ದರು ಮತ್ತು ವರ್ಗಾವಣೆ ಮಾಡಿಸಿಕೊಳ್ಳುವ ಬಗ್ಗೆ ಮಾತನಾಡುತ್ತಿದ್ದರು. ಒಂದು ವೇಳೆ ತಮ್ಮ ವರ್ಗಾವಣೆಯಾಗದಿದ್ದರೆ, ಅಲ್ಲಿ ತಮ್ಮೊಂದಿಗೆ ಏನಾದರೂ ಅಹಿತಕರ ಘಟನೆ ಸಂಭವಿಸಬಹುದು ಎಂದು ಅವರು ಕುಟುಂಬಕ್ಕೆ ತಿಳಿಸಿದ್ದರು.
ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು! – ಪೊಲೀಸ್ ಸೂಪರಿಂಟೆಂಡೆಂಟ್
ಪೊಲೀಸ್ ಸೂಪರಿಂಟೆಂಡೆಂಟ್ ಅಂಕಿತಾ ಶರ್ಮಾ ಅವರು, ಸಂಬಂಧಿಕರಿಂದ ದೂರು ಬಂದಿದೆ ಎಂದು ತಿಳಿಸಿದ್ದಾರೆ. ಸಂಬಂಧಿಕರು ಕೆಲವು ‘ಕಾಲ್ ರೆಕಾರ್ಡಿಂಗ್ಸ್’ ಮತ್ತು ಇತರ ಪುರಾವೆಗಳು ಇರುವುದಾಗಿ ಹೇಳಿಕೊಂಡಿದ್ದಾರೆ, ಇವುಗಳನ್ನು ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುವುದು. ಇಲಾಖೆಯ ದಾಖಲೆಗಳಲ್ಲಿ ಈ ಹಿಂದೆ ಇಂತಹ ಯಾವುದೇ ದೂರು ದಾಖಲಾಗಿರಲಿಲ್ಲ; ಆದರೆ ಸಂಬಂಧಿಕರು ನೀಡುವ ಎಲ್ಲಾ ಪುರಾವೆಗಳನ್ನು ಪರಿಶೀಲಿಸಲಾಗುವುದು ಮತ್ತು ತನಿಖೆಯಲ್ಲಿ ಹೊರಬರುವ ಸತ್ಯಾಂಶಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!