ಕಪ್ಪು ಹಣದಿಂದ ನಿರ್ಮಿಸಲಾಗಿತ್ತು 2 ಕೋಟಿ ರೂಪಾಯಿ ಮೌಲ್ಯದ ಕಟ್ಟಡ !

ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು-ಕಾಶ್ಮೀರದಲ್ಲಿ ಮಾದಕ ಪದಾರ್ಥಗಳ ಅಕ್ರಮ ವ್ಯವಹಾರದ ವಿರುದ್ಧ ನಡೆಯುತ್ತಿರುವ ‘ನಶಾಮುಕ್ತ ಜಮ್ಮು-ಕಾಶ್ಮೀರ ಅಭಿಯಾನ’ದ ಅಡಿಯಲ್ಲಿ ಶ್ರೀನಗರ ಪೊಲೀಸರು ಭರ್ಜರಿ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಕಂದಾಯ ಇಲಾಖೆಯೊಂದಿಗೆ ಸೇರಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್‌ನ ಸುಮಾರು 2 ಕೋಟಿ ರೂಪಾಯಿ ಮೌಲ್ಯದ 3 ಅಂತಸ್ತಿನ ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಶೇಖ್ ತಸದುಕ್ ವಿರುದ್ಧ ‘ಎನ್.ಡಿ.ಪಿ.ಎಸ್.’ (ನಾರ್ಕೋಟಿಕ್ ಡ್ರಗ್ಸ್ ಆಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್) ಕಾಯ್ದೆಯಡಿ ಹಲವು ಪ್ರಕರಣಗಳು ದಾಖಲಾಗಿವೆ. ಅವನ ವಿರುದ್ಧ ಅವಂತಿಪೋರಾ ಮತ್ತು ಬಡಗಾಮ್ ಪೊಲೀಸ್ ಠಾಣೆಗಳಲ್ಲಿ ಮಾದಕ ಪದಾರ್ಥಗಳ ಸಾಗಾಣಿಕೆಗೆ ಸಂಬಂಧಿಸಿದ ಪ್ರಕರಣಗಳು ಈಗಾಗಲೇ ಬಾಕಿ ಇವೆ. ಹಾಗೆಯೇ ಅವನ ಪತ್ನಿ ಶೇಖ್ ಮಾರೂಫಾ ವಿರುದ್ಧವೂ ಪುಲ್ವಾಮಾದಲ್ಲಿ ‘ಎನ್.ಡಿ.批.ಎಸ್.’ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
1. ತನಿಖೆಯ ಸಮಯದಲ್ಲಿ ಪೊಲೀಸರಿಗೆ ಈ 3 ಅಂತಸ್ತಿನ ಕಟ್ಟಡವನ್ನು ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಿ ನಿರ್ಮಿಸಲಾಗಿದೆ ಎಂಬುದು ತಿಳಿದುಬಂದಿದೆ.
2. ಜಮ್ಮು-ಕಾಶ್ಮೀರ ಪೊಲೀಸರು, ಮಾದಕ ಪದಾರ್ಥಗಳ ವ್ಯವಹಾರದಿಂದ ಗಳಿಸಿದ ಆಸ್ತಿಯ ಮೇಲಿನ ಕ್ರಮವು ಮುಂದೆಯೂ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!