ಐಐಟಿ ಗುವಾಹಟಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರಲ್ಲಿ ಸಂದೇಹ !

ಮಗನ ಮೇಲೆ ರಾಗಿಂಗ್ ಮಾಡಿ ಹತ್ಯೆ ಮಾಡಲಾಗಿದೆಯೆಂದು ಕುಟುಂಬದವರ ಆರೋಪ !

ಗುವಾಹಟಿ (ಅಸ್ಸಾಂ) – ಐಐಟಿ ಗುವಾಹಟಿಯಲ್ಲಿ 20 ವರ್ಷದ ವಿದ್ಯಾರ್ಥಿಯ ಶವ ಆತನ ನಿವಾಸದಲ್ಲಿ ಪತ್ತೆಯಾಗಿದೆ. ಪೊಲೀಸರು ಇದು ಆತ್ಮಹತ್ಯೆಯಾಗಿದೆಯೆಂದು ಸಂದೇಹ ಪಟ್ಟಿದ್ದಾರೆ. ಕುಟುಂಬಸ್ಥರು, ಮಗನ ಮೇಲೆ ರಾಗಿಂಗ ಮಾಡಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ವಿದ್ಯಾರ್ಥಿ ಬಿಹಾರದ ಸಮಸ್ತಿಪುರ ಜಿಲ್ಲೆಯ ಮೋಹನ್‌ಪುರ ಗ್ರಾಮದ ನಿವಾಸಿಯಾಗಿದ್ದನು.

1. ಪೊಲೀಸರು, ಏಪ್ರಿಲ್ 10 ರಂದು ಸಂಜೆ 5.30 ರ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಮೃತನ ಸ್ನೇಹಿತ ಕಾಲೇಜಿಗೆ ಹೋಗಿದ್ದಾಗ, ಅವನು ಈ ನಿರ್ಣಯವನ್ನು ತೆಗೆದುಕೊಂಡನು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಬಂದ ನಂತರ ಹಲವು ವಿಷಯಗಳು ಸ್ಪಷ್ಟವಾಗಲಿವೆ.

2. ಮೃತ ಹುಡುಗನ ತಂದೆ ಮಾತ್ರ ಇದು ಕೊಲೆಯಾಗಿದೆಯೆಂದು ಹೇಳಿದ್ದು, ಐಐಟಿಯ ನಿರ್ಲಕ್ಷ್ಯದಿಂದ ಇಂತಹ ಘಟನೆಗೆ ನಡೆದಿದೆಯೆಂದು ಹೇಳುತ್ತಾ, ಐಐಟಿ ವಿರುದ್ಧ ದೂರು ದಾಖಲಿಸಿದ್ದಾರೆ. ಅವರು, ಇದು ಸ್ಪಷ್ಟವಾಗಿ ಕೊಲೆಯಾಗಿದೆ; ಆದರೆ ಐಐಟಿ ಆಡಳಿತ ಇದನ್ನು ಆತ್ಮಹತ್ಯೆಯಾಗಿ ಪರಿವರ್ತಿಸಲು ಯತ್ನಿಸುತ್ತಿದೆ. ನನ್ನ ಮಗನ ಮೇಲೆ ಹಲವಾರು ಬಾರಿ ರಾಗಿಂಗ ನಡೆದಿತ್ತು. ಈ ವಿಷಯದಲ್ಲಿ ಅವನು ದೂರು ನೀಡಿದ್ದನು; ಆದರೆ ಸಂಸ್ಥೆಯು ಅದನ್ನು ನಿರ್ಲಕ್ಷಿಸಿದೆ.

3. ಸಂಸ್ಥೆಯು ಇದುವರೆಗೂ ಆರೋಪಗಳಿಗೆ ಉತ್ತರಿಸಿಲ್ಲ; ಆದರೆ ವಿದ್ಯಾರ್ಥಿಯ ಸಾವಿಗೆ ಸಂತಾಪ ಸೂಚಿಸಿದ್ದು, ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

4. ಜನವರಿ ತಿಂಗಳಲ್ಲಿ ಐಐಟಿ ಗುವಾಹಟಿಯ ನಾಲ್ಕನೇ ವರ್ಷದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳೂ ಒಂದು ಹೊಟೇಲ್‌ನಲ್ಲಿ ಅನುಮಾನಾಸ್ಪದವಾಗಿ ಮರಣ ಹೊಂದಿರುವುದು ಬಹಿರಂಗವಾಗಿತ್ತು.