|
ಗೌಹಾಟಿ – ಅಸ್ಸಾಂನಲ್ಲಿ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ, 1 ಕೋಟಿ 25 ಲಕ್ಷ ಬಾಂಗ್ಲಾದೇಶಿಗಳು ಇದ್ದಾರೆ. ನುಸುಳುಕೋರರಾಗಿದ್ದಾರೆ ಮತ್ತು 126 ರಲ್ಲಿ 40 ಶಾಸಕರು ನುಸುಳುಕೋರರಾಗಿದ್ದಾರೆ. ರಾಜ್ಯದಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಶಾಸಕರು, ಸಚಿವರು, ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳಾಗುತ್ತಾರೆ ಎನ್ನುವ ಆಘಾತಕಾರಿ ಮಾಹಿತಿಯನ್ನು ಆಸ್ಸಾಮ್ ನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರಮಾ ಇವರು ಝಾರಖಂಡನ ರಾಂಚಿಯಲ್ಲಿ ಒಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ತಿಳಿಸಿದರು. ಅವರ ಈ ಹೇಳಿಕೆಯಿಂದ ಆಸ್ಸಾಂನಲ್ಲಿ ವಿವಾದ ನಿರ್ಮಾಣವಾಗಿದೆ. ಬಾಂಗ್ಲಾದೇಶಿ ನುಸುಳುಕೋರರು ಜಾರಖಂಡನ ಬುಡಕಟ್ಟು ಜನಾಂಗದವರಿಗೆ ಅಪಾಯಕಾರಿಯಾಗಿದ್ದಾರೆ ಎಸಂ್ಉ೬ದು ಅವಲರು ಹೇಳಿದರು.
ಮುಖ್ಯಮಂತ್ರಿ ಸರಮಾ ಮಾತು ಮುಂದುವರಿಸಿ, “ ಆಸ್ಸಾಂನಲ್ಲಿ 40 ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಒಳನುಸುಳುವಿಕೆ ಪ್ರಾರಂಭವಾಯಿತು. ಈಗ ಅಸ್ಸಾಂನಲ್ಲಿ ನುಸುಳುಕೋರರ ಸಂಖ್ಯೆ 1 ಕೋಟಿ 25 ಲಕ್ಷವಾಗಿದೆ. ರಾಜ್ಯದಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದ್ದು, ಅಸ್ಸಾಂ ಜನತೆ ತಮ್ಮ ಗುರುತನ್ನು ಕಳೆದುಕೊಂಡಿದ್ದಾರೆ. ನಮ್ಮಂತಹ ತಪ್ಪನ್ನು ಝಾರಖಂಡನಲ್ಲಿ ಮಾಡಬೇಡಿರಿ. 40 ವರ್ಷಗಳ ಹಿಂದೆ ನಾವು ತಪ್ಪು ಮಾಡಿದ್ದೇವೆ. ನಾವು ನಮ್ಮ ಗಡಿಯನ್ನು ರಕ್ಷಿಸಲಿಲ್ಲ. ನೀವು ರೋಹಿಂಗ್ಯಾಗಳನ್ನು ಬರಲು ಬಿಡಬೇಡಿರಿ. ಬಂಗಾಳ ಮತ್ತು ಅಸ್ಸಾಂ ತಪ್ಪು ಮಾಡಿವೆ. ಆ ಸಮಯದಲ್ಲಿ ಏನು ಮಾಡಬೇಕಿತ್ತೋ, ಅದನ್ನು ನಾವು ಮಾಡಲಿಲ್ಲ.
ಕಾಂಗ್ರೆಸ್ ಮತ್ತು ಎಐಯುಡಿಎಫ್. ಈ ಪಕ್ಷಗಳಿಂದ ಮುಖ್ಯಮಂತ್ರಿಗಳ ಮೇಲೆ ಟೀಕೆ !
ಮುಖ್ಯಮಂತ್ರಿ ಸರಮಾ ಅವರ ಈ ಹೇಳಿಕೆಗಳು ನಂತರ, ಮುಸ್ಲಿಂ ನಾಯಕ ಮತ್ತು ಎಐಯುಡಿಎಫ್ ಪಕ್ಷದ ಕಾರ್ಯದರ್ಶಿ ಅಮಿನುಲ್ ಇಸ್ಲಾಂ ಅವರು ಮುಖ್ಯಮಂತ್ರಿ ಸರಮಾ ಅವರ ಈ ಹೇಳಿಕೆಯನ್ನು ನಿರಾಕರಿಸುತ್ತಾ, ಸರಮಾ ಇವರು ಚುನಾವಣೆಯ ಹಿನ್ನೆಲೆಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್‌ನ ಅಸ್ಸಾಂ ರಾಜ್ಯಾಧ್ಯಕ್ಷ ಭೂಪೇನ ಬೋರಾ ಅವರು ಸರಮಾ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸಂಪಾದಕೀಯ ನಿಲುವುಸ್ವಾತಂತ್ರ್ಯದ ನಂತರ ಆರು ದಶಕಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ದೇಶದ ಗಡಿಯನ್ನು ರಕ್ಷಿಸಲಿಲ್ಲ ಮತ್ತು ಆದ್ದರಿಂದ ನುಸುಳುವಿಕೆ ನಡೆಯಿತು ಇದು ವಸ್ತುಸ್ಥಿತಿಯಾಗಿದೆ. ಇದು ಕಾಂಗ್ರೆಸ್ ನ ಅಕ್ಷಮ್ಯ ಅಪರಾಧ ! |