ಚೀನಾದಿಂದ ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರ ಸಾವಿನ ಸಂಖ್ಯೆಯ ಮೇಲೆ ಸಂದೇಹ ಪಟ್ಟಿದ್ದ ಬ್ಲಾಗರ್ ನ ಬಂಧನ

ಕಳೆದ ವರ್ಷ ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯಲ್ಲಿ ಮೃತಪಟ್ಟ ಚೀನಾದ ಸೈನಿಕರ ಸಂಖ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬ್ಲಾಗರ್ ನನ್ನು ಚೀನಾ ಬಂಧಿಸಿದೆ. ಆತನಿಗೆ ೮ ತಿಂಗಳು ಶಿಕ್ಷೆ ವಿಧಿಸಲಾಗಿದೆ.

ಚೀನಾದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು

ಕೊರೊನಾ ಆರಂಭವಾದ ಚೀನಾದಲ್ಲಿ ಕೊರೋನಾ ಸೋಂಕು ಮತ್ತೆ ಹರಡುತ್ತಿದೆ. ಕೊರೋನಾ ರೋಗಿಗಳು ಮತ್ತೆ ಕಾಣಿಸಿಕೊಂಡಿದ್ದರಿಂದ ಚೀನಾದ ಗ್ವಾಂಗದೊಂಗ ಪ್ರದೇಶದಲ್ಲಿ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ.

ಚೀನಾದ ಸೇನೆಯಿಂದ ಟಿಬೆಟ್‍ನಲ್ಲಿ ರಹಸ್ಯವಾಗಿ ಹೊಸ ಕಮಾಂಡರ್ ನ ನೇಮಕ

ಚೀನಾ ವಿಶ್ವಾಸದ್ರೋಹಿ ಆಗಿರುವುದರಿಂದ, ಭಾರತವು ಅದರ ಪ್ರತಿಯೊಂದು ಕೃತಿಯ ಮೇಲೆ ನಿಗಾವಿಟ್ಟು ಜಾಗರೂಕರಾಗಿರುವುದು ಯೋಗ್ಯವಾಗಿದೆ ! ಚೀನಾವು ಧೂರ್ತತನ ತೋರಿಸಿದರೆ, ಅದಕ್ಕೆ ಪ್ರತ್ಯುತ್ತರ ನೀಡಲು ಭಾರತವು ಸಿದ್ಧವಾಗಿರಬೇಕು !

ಚೀನಾವು ತೈವಾನ್ ಮೇಲೆ ಆಕ್ರಮಣ ಮಾಡುವ ಸಾಧ್ಯತೆಯನ್ನು ಮನಗಂಡು ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವ ಆಸ್ಟ್ರೇಲಿಯಾ !

ಮುಂದಿನ ಐದು ವರ್ಷಗಳಲ್ಲಿ ಚೀನಾವು ತೈವಾನ್ ಮೇಲೆ ಆಕ್ರಮಣ ಮಾಡುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯಾವು ಚೀನಾದೊಂದಿಗೆ ಯುದ್ಧಕ್ಕೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಒಂದು ರಣತಂತ್ರವನ್ನು ರೂಪಿಸಲಾಗುತ್ತಿದೆ. ಇದೇ ವಾರದಲ್ಲಿ ಚೀನಾವು ೨೫ ಯುದ್ಧವಿಮಾನಗಳ ಒಂದು ದಂಡನ್ನು ತೈವಾನ್‌ನ ವಾಯುಪ್ರದೇಶಕ್ಕೆ ಕಳುಹಿಸಿತ್ತು.