ಚೀನಾದ ಸೇನೆಯಿಂದ ಟಿಬೆಟ್‍ನಲ್ಲಿ ರಹಸ್ಯವಾಗಿ ಹೊಸ ಕಮಾಂಡರ್ ನ ನೇಮಕ

ಮತ್ತೆ ಭಾರತದ ವಿರುದ್ಧ ಆಕ್ರಮಣಕಾರಿ ಕ್ರಮ ಕೈಗೊಳ್ಳುವ ಸಾಧ್ಯತೆ !

ಚೀನಾ ವಿಶ್ವಾಸದ್ರೋಹಿ ಆಗಿರುವುದರಿಂದ, ಭಾರತವು ಅದರ ಪ್ರತಿಯೊಂದು ಕೃತಿಯ ಮೇಲೆ ನಿಗಾವಿಟ್ಟು ಜಾಗರೂಕರಾಗಿರುವುದು ಯೋಗ್ಯವಾಗಿದೆ ! ಚೀನಾವು ಧೂರ್ತತನ ತೋರಿಸಿದರೆ, ಅದಕ್ಕೆ ಪ್ರತ್ಯುತ್ತರ ನೀಡಲು ಭಾರತವು ಸಿದ್ಧವಾಗಿರಬೇಕು !

ಬೀಜಿಂಗ್ (ಚೀನಾ) – ಭಾರತವು ಹೆಚ್ಚುತ್ತಿರುವ ಕೊರೋನಾ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಚೀನಾವು ರಹಸ್ಯವಾಗಿ ಟಿಬೆಟ್‍ನಲ್ಲಿ ಹೊಸ ಕಮಾಂಡರ್ ನನ್ನು ನೇಮಿಸಿದೆ. ಚೀನಾದ ಪಶ್ಚಿಮ ಥಿಯೇಟರ್ ಕಮಾಂಡ್ ಅಡಿಯಲ್ಲಿ ಬರುವ ಟಿಬೆಟ್‍ನ ಕಮಾಂಡರ್ ನ ಹೆಸರು ಲೆಫ್ಟಿನೆಂಟ್ ಜನರಲ್ ವಾಂಗ್ ಕಾಇ ಎಂದಾಗಿದೆ. ಕಾಇ ಇವರು ಈ ಮೊದಲು ಚೀನಾದ ಸೈನ್ಯದಲ್ಲಿನ ಅತ್ಯಂತ ಕ್ರೂರ ಎಂದು ಪರಿಗಣಿಸಲಾಗುವ ಎಲೀಟ್ ೧೩ ನೇ ಗುಂಪಿನ ಸೈನ್ಯದ ಕಮಾಂಡರ್ ಆಗಿದ್ದರು, ಈ ಹಿಂದೆ ಎಂದು ಪರಿಗಣಿಸಲಾಗಿತ್ತು. ಈ ಎಲೀಟ್ ಗುಂಪನ್ನು ‘ಟೈಗರ್ಸ್ ಇನ್ ದಿ ಮೌಂಟೆನ್ಸ್’ ಎಂದು ಕರೆಯಲಾಗುತ್ತದೆ. ಈ ಗುಂಪು ಪರ್ವತ ಯುದ್ಧದಲ್ಲಿ ಪರಿಣತಿಯನ್ನು ಪಡೆದಿದೆ. ಆದ್ದರಿಂದ ‘ಕಾಇ ಅವರ ಹೊಸ ನೇಮಕಾತಿಯ ಹಿಂದೆ ಚೀನಾವು ಮತ್ತೊಮ್ಮೆ ಭಾರತಕ್ಕೆ ದ್ರೋಹ ಬಗೆಯಲು ಯೋಚಿಸುತ್ತಿದೆಯೇ ?’ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕುತ್ತದೆ.

. ಈಗಲೂ ಚೀನಾ ಲಡಾಖ್‍ನಲ್ಲಿ ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಯೋಚಿಸುತ್ತಿಲ್ಲ ಎಂಬ ಚಿತ್ರಣವಿದೆ. ಭಾರತ ಮತ್ತು ಚೀನಾದ ನಡುವೆ ಹಲವಾರು ಸುತ್ತಿನ ಮಿಲಿಟರಿ ಚರ್ಚೆಗಳ ಹೊರತಾಗಿಯೂ, ಚೀನಾವು ತನ್ನ ಸೈನ್ಯವನ್ನು ಗಡಿಯಿಂದ ಹಿಂತೆಗೆದುಕೊಳ್ಳಲು ಸಿದ್ಧವಿಲ್ಲ. ಹಾಗಾಗಿ ‘ಕಮಾಂಡರ್ ವಾಂಗ್ ಕಾಇ ಅವರ ನೇಮಕದ ಹಿಂದೆ ಯಾವುದಾದರು ಪಿತೂರಿ ಇದೆಯೇ ?’ ಎಂಬ ಪ್ರಶ್ನೆಯು ಉದ್ಭವಿಸುತ್ತಿದೆ.

೨. ಚೀನಾದ ಮಾಜಿ ಮಿಲಿಟರಿ ತರಬೇತುಗಾರ ಸಾಂಗ್ ಝೊಂಗ್‍ಪಿಂಗ್ ಅವರು, ಟಿಬೆಟ್‍ನ ವಿಷಯವು ಇಂದಿಗೂ ಚಿಂತಾಜನಕವಿದೆ. ಇದಕ್ಕಾಗಿಯೇ ವಾಂಗ್ ಕಾಇ ಅವರಲ್ಲಿರುವ ಅನುಭವದಿಂದಾಗಿಯೇ ಇಲ್ಲಿ ಅವರನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.