ಕೊರೊನಾದ ಉಗಮದ ಸಂಶೋಧನೆಯ ವಿಷಯದಲ್ಲಿ ಅಮೇರಿಕಾದ ಗುಪ್ತಚರರಿಂದ ರಾಷ್ಟ್ರಾಧ್ಯಕ್ಷರಿಗೆ ವರದಿ ಸಾದರ

ಆವೇಶಗೊಂಡ ಚೀನಾದಿಂದ ಅಮೇರಿಕಾದ ಮೇಲೆ ಟೀಕಾಪ್ರಹಾರ

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದಂತೆ !

ಬೀಜಿಂಗ್ (ಚೀನಾ) – ಅಮೇರಿಕಾದ ಗುಪ್ತಚರ ವಿಭಾಗವು ಕೊರೊನಾ ವೈರಾಣುವಿನ ಉಗಮ ಎಲ್ಲಿಂದ ಆಯಿತು, ಎಂಬುದರ ತಪಾಸಣೆಯ ವರದಿಯನ್ನು ರಾಷ್ಟ್ರ್ರಾಧ್ಯಕ್ಷರಿಗೆ ಸಾದರ ಪಡಿಸಿದೆ. ಈ ವರದಿಯು ಪೂರ್ಣವಾಗಿಲ್ಲ ಹಾಗೂ ಚೀನಾದ ಅಸಹಕಾರದಿಂದ ಅದರಲ್ಲಿ ಅದರ ಉಗಮವನ್ನು ಸ್ಪಷ್ಟಪಡಿಸಲು ಆಗಿಲ್ಲ. ಈ ವರದಿಯು ಸದ್ಯಕ್ಕೆ ಗೌಪ್ಯವಾಗಿದೆ; ಆದರೆ ಭವಿಷ್ಯದಲ್ಲಿ ಅದನ್ನು ಬಹಿರಂಗ ಪಡಿಸುವ ಸಾಧ್ಯತೆಯಿದೆ.

ಕೊರೊನಾದ ಉಗಮವು ಪ್ರಾಣಿಗಳ ಮೂಲಕ ಆಗಿದೆಯೇ ಅಥವಾ ಪ್ರಯೋಗಶಾಲೆಯಿಂದ ಎಂಬ ಎರಡು ಸಾಧ್ಯತೆಗಳ ಬಗ್ಗೆ ವಿಚಾರಣೆ ನಡೆಸಲಾಗಿದೆ. ಅಮೇರಿಕಾವು ನಡೆಸಿದ 90 ದಿನಗಳ ತಪಾಸಣೆಯಿಂದ ಇದರ ಬಗ್ಗೆ ಬಲವಾದ ನಿಷ್ಕರ್ಷ ತೆಗೆಯಲು ಸಾಧ್ಯವಾಗಲಿಲ್ಲ; ಆದರೆ ಈ ವರದಿಯ ಮೇಲೆ ಚೀನಾವು ಟೀಕೆ ಮಾಡಿದೆ. ‘ಚೀನಾದ ಮೇಲೆ ಆರೋಪ ಹೋರಿಸಲು ಕೊರೊನಾದ ಅಂಶದ ಮೇಲೆ ರಾಜಕಾರಣ ನಡೆಸಲಾಗುತ್ತಿದೆ. ಅಮೆರಿಕಾವು ಇದೇ ರೀತಿ ಆರೋಪ ಹೊರಿಸುತ್ತಿದ್ದರೆ ಚೀನಾದ ಪ್ರತ್ಯುತ್ತರಕ್ಕೆ ಕೂಡ ಅಮೇರಿಕಾ ಸಿದ್ಧವಾಗಿರಲಿ’, ಎಂದು ಚೀನಾವು ಅಮೆರಿಕಾವನ್ನು ಎಚ್ಚರಿಸಿದೆ

ಅಮೇರಿಕಾದ ಪ್ರಯೋಗಶಾಲೆಗಳ ವಿಚಾರಣೆಯಾಗಲಿ ! – ಚೀನಾ

ಚೀನಾದ ವಿದೇಶಾಂಗ ಮಂತ್ರಾಲಯದ ಮಹಾಸಂಚಾಲಕರಾದ ಫೂ ಕುಂಗರವರು ಇವರು ಇದರ ಬಗ್ಗೆ ಮುಂದಿನಂತೆ ಹೇಳಿದ್ದಾರೆ, ಚೀನಾವನ್ನು ಬಲಿ ನೀಡಿ ಅಮೇರಿಕಾಕ್ಕೆ ನಿರಾಳವಾಗಿರಲು ಸಾಧ್ಯವಿಲ್ಲ. ‘ವೈರಾಣುಗಳ ಉಗಮ ಪ್ರಯೋಗಶಾಲೆಯಿಂದ ಆಗಿದೆ’ ಎಂದು ಇತರ ದೇಶಗಳ ಹೇಳಿಕೆಯಿದ್ದರೂ ಕೂಡ ಜಾಗತಿಕ ಆರೋಗ್ಯ ಸಂಘಟನೆಯ ಪಡೆಯು ಅಮೇರಿಕಾದ ಮೆರಿಲ್ಯಾಂಡನಲ್ಲಿನ ಫೋರ್ಟ್ ಡೆಟ್ರಿಕ ಪ್ರಯೋಗಶಾಲೆಗೂ ಭೇಟಿ ನೀಡಲಿ. ಈ ಪ್ರಯೋಗಶಾಲೆಯಲ್ಲಿ ಸಹ ಕೊರೊನಾದ ಅಭ್ಯಾಸ ನಡೆಯುತ್ತಿದೆ.

ಕೊರೊನಾವು ಚೀನಾದ ವುಹಾನ ಪ್ರಯೋಗಶಾಲೆಯಲ್ಲಿ ಉಗಮವಾಯಿತು ಹಾಗೂ ಅಲ್ಲಿಂದಲೇ ವೈರಾಣು ಹಬ್ಬಿದೆ ಎಂದು ಅಮೇರಿಕಾದ ಅಂದಿನ ರಾಷ್ಟ್ರಾಧ್ಯಕ್ಷರಾದ ಡೊನಾಲ್ಡ್ ಟ್ರಂಪ್‍ರು ಆರೋಪಿಸಿದ್ದರು, ಆದರೆ ಚೀನಾವು ಈ ಆರೋಪವನ್ನು ತಳ್ಳಿಹಾಕಿತ್ತು. ಬೈಡನ್ ರಾಷ್ಟ್ರಾಧ್ಯಕ್ಷರಾದ ಬಳಿಕ ಅವರು ‘ಕೊರೊನಾ ವೈರಾಣುಗಳ ಉಗಮ ಹೇಗೆ ಆಯಿತು?’ ಇತ್ಯಾದಿ ವಿಷಯಗಳ ವಿಚಾರಣೆ ನಡೆಸುವಂತೆ ಆದೇಶ ನೀಡಿದ್ದರು.