ಲಡಾಖ್ ಗಡಿಯಲ್ಲಿ ಬೀಡುಬಿಟ್ಟಿದ್ದ ಶೇಕಡಾ ೯೦ ರಷ್ಟು ಸೈನಿಕರು ಹೆಪ್ಪುಗಟ್ಟುವಂತಹ ಚಳಿಯಿಂದ ಅನಾರೋಗ್ಯಪೀಡಿತರಾದ ಕಾರಣ ಅವರನ್ನು ವಾಪಾಸು ಕರೆಸಿಕೊಂಡ ಚೀನಾ

ಬೀಜಿಂಗ್ – ಹೆಪ್ಪುಗಟ್ಟುವಂತಹ ಚಳಿಯಿಂದ ಲಡಾಖ್ ಗಡಿಯಲ್ಲಿ ಬೀಡುಬಿಟ್ಟಿರುವ ಚೀನಾದ ಶೇ. ೯೦ ರಷ್ಟು ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷದ ನಂತರ ಚೀನಾ ೫೦೦೦೦ ಕ್ಕೂ ಹೆಚ್ಚು ಸೈನಿಕರನ್ನು ಅಲ್ಲಿ ನಿಯೋಜಿಸಿತ್ತು. ವಾಪಸ ಕರೆಸಲಾದ ಸೈನಿಕರ ಜಾಗದಲ್ಲಿ ಇತರ ಸ್ಥಳಗಳಲ್ಲಿ ಬೀಡುಬಿಟ್ಟಿರುವ ಸೈನಿಕರನ್ನು ಲಡಾಖ್ ಗಡಿಗೆ ಕರೆತರಲಾಗಿದೆ. ಹೊಸದಾಗಿ ಸೇರ್ಪಡೆಗೊಂಡ ಸೈನಿಕರು ಸಹ ಇಲ್ಲಿನ ಚಳಿಗೆ ಹೊಂದಿಕೊಳ್ಳುವುದು ಕಷ್ಟಕರವಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ಕಾರಣಕ್ಕಾಗಿ, ಪ್ಯಾಂಗೊಂಗ್ ಸರೋವರದಲ್ಲಿ ಬೀಡುಬಿಟ್ಟಿದ್ದಾಗ, ಚೀನಾವು ಪ್ರತಿದಿನ ಬೆಟ್ಟಗಳ ಮೇಲಿರುವ ತನ್ನ ಸೈನ್ಯವನ್ನು ಬದಲಾಯಿಸುತ್ತಿತ್ತು. ಈ ಸೈನಿಕರ ಚಲನವಲನಗಳು ಬಹಳ ಮಂದವಾಗಿದ್ದವು.

ಚೀನಾದ ಸೈನ್ಯದ ಸ್ಥಿತಿ ಹೀಗಿರುವಾಗ, ಮತ್ತೊಂದೆಡೆ, ಭಾರತೀಯ ಸೇನೆಯು ಕಳೆದ ಎರಡು ವರ್ಷಗಳಿಂದ ಲಡಾಖ್ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ. ಈ ಸೈನಿಕರು ಇನ್ನೂ ಅಲ್ಲಿಯೇ ಬೀಡುಬಿಟ್ಟಿದ್ದಾರೆ.