ಚೀನಾ ಮಾಡುವುದನ್ನು ಭಾರತವು ಏಕೆ ಮಾಡುವುದಿಲ್ಲ? ಚೀನಾದಂತೆ ಭಾರತವು ಕೂಡ ಅದೇ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ !
ಬೀಜಿಂಗ್ (ಚೀನಾ) – ಚೀನಾ ಸರಕಾರವು ೧೮ ವರ್ಷಗಳ ಕೆಳಗಿನ ಮಕ್ಕಳಿಗೆ ಆನ್‌ಲೈನ್ ನಲ್ಲಿ ಆಟವಾಡಲು ಸಮಯದ ನಿರ್ಬಂಧವನ್ನು ಹೇರಿದೆ. ಅದೇ ರೀತಿ ಆಟಗಳನ್ನು ತಯಾರಿಸುವ ಸಂಸ್ಥೆಗಳಿಗೂ ನಿಯಮ ಹಾಗೂ ನಿರ್ಬಂಧಗಳನ್ನು ಅನ್ವಯಿಸಿದೆ. ಹೊಸ ನಿಯಮಗಳಿಗೆ ಅನುಸಾರ ಈಗ ಮಕ್ಕಳು ವಾರದಲ್ಲಿ ೩ ದಿನಗಳಲ್ಲಿ ಕೇವಲ ೧ ಗಂಟೆ ಮಾತ್ರ ಆನ್ ಲೈನ್ ಆಟಗಳನ್ನು ಆಡಬಹುದು. ಶುಕ್ರವಾರ, ಶನಿವಾರ, ರವಿವಾರ ಹಾಗೂ ಸಾರ್ವಜನಿಕ ರಜಾ ದಿನದಂದು ಮಕ್ಕಳು ರಾತ್ರಿ ೮ ರಿಂದ ೯ ರ ಸಮಯದಲ್ಲಿ ಮಾತ್ರ ಆನ್ ಲೈನ್ ಆಟಗಳನ್ನು ಆಡಬಹುದು.
China imposes gaming curfew for minors https://t.co/1q2NylIvEx
— BBC News (World) (@BBCWorld) November 6, 2019
1. ಈ ಹೊಸ ನಿಯಮಗಳನ್ನು ಅನ್ವಯಿಸುವ ಮೊದಲು ಮಕ್ಕಳಿಗೆ ಪ್ರತಿದಿನ ೯೦ ನಿಮಿಷಗಳಷ್ಟು ಹಾಗೂ ರಜಾ ದಿನಗಳಂದು ೩ ತಾಸು ಆನ್ ಲೈನ್ ಆಟಗಳನ್ನು ಆಡಲು ಅವಕಾಶವಿತ್ತು. ಖಚಿತ ಪಡಿಸಿದ ಸಮಯಮಿತಿಗಿಂತ ಹೆಚ್ಚು ಸಮಯ ಮಕ್ಕಳು ಲೈನ್ ಆಟಗಳನ್ನು ಆಡುವುದು ಕಂಡುಬಂದರೆ, ಅದಕ್ಕೆ ಸಂಬಂಧಪಟ್ಟ ಕಂಪನಿಗಳನ್ನೆ ಜವಾಬ್ದಾರರು ಎಂದು ಹೇಳಲಾಗಿದೆ. ‘ನಿಗದಿತ ಸಮಯಕ್ಕಿಂತ ಮೊದಲು ಹಾಗೂ ನಂತರ ಆನ್ ಲೈನ್ ನಲ್ಲಿ ಆಟವಾಡದಂತೆ ಮಕ್ಕಳನ್ನು ತಡೆಯಿರಿ, ಎಂದೂ ಈ ಸಂಸ್ಥೆಗಳಿಗೆ ಆದೇಶವನ್ನು ನೀಡಲಾಗಿದೆ.
2. ಒಂದು ತಿಂಗಳ ಹಿಂದೆ ಚೀನಾ ಸರಕಾರ ಸಂಚಾಲಿತ ‘ಇಕಾನಾಮಿಕ್ ಇನ್‌ಫಾರ್ಮೇಶನ್ ಡೇಲಿಯು ಪ್ರಸಿದ್ಧ ಪಡಿಸಿದ ಒಂದು ಲೇಖನದಲ್ಲಿ ೧೮ ವರ್ಷಗಳ ಕೆಳಗಿನ ಅನೇಕ ಮಕ್ಕಳಿಗೆ ಆನ್ ಲೈನ್ ಆಟಗಳ ವ್ಯಸನವಿದ್ದು ಅದರಿಂದ ಅವರ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತಿದೆ ಎಂದು ದಾವೆಯನ್ನು ಮಾಡಲಾಗಿತ್ತು.