ಕಲಬುರಗಿಯಲ್ಲಿ ಮಹಿಳೆಗೆ ಬೆದರಿಕೆ ಹಾಕಿದ್ದ ಪೊಲೀಸ್ ಪೇದೆಯ ವಿರುದ್ಧ ದೂರು ದಾಖಲು !

ನಗರದ ಕಮಲಾಪುರ ಪೊಲೀಸ್ ಠಾಣೆಯ ಹವಾಲ್ದಾರ್ ಬಸವರಾಜ ಇವರು ದೂರು ನೀಡಲು ಬಂದಿದ್ದ ಮಹಿಳೆಯನ್ನು ಮಾನಸಿಕವಾಗಿ ಪೀಡಿಸಿ, ಅವಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಅವನ ವಿರುದ್ಧ ದೂರನ್ನು ದಾಖಲಿಸಲಾಗಿದೆ.

‘ಭಾಜಪದವರು ಅಯೋಧ್ಯೆಯಲ್ಲಿ ೨ ಗೊಂಬೆಗಳನ್ನು ಇಟ್ಟು ಅವನ್ನು ‘ರಾಮ‘ ಎಂದು ಕರೆಯಲು ಪ್ರಾರಂಭಿಸಿದರಂತೆ’ !- ಕಾಂಗ್ರೆಸ್ ಸಚಿವ ಕೆ.ಎನ್. ರಾಜಣ್ಣ

ಕಾಂಗ್ರೆಸ್ ಸಚಿವ ಕೆ.ಎನ್. ರಾಜಣ್ಣ ನವರ ಖೇದಕರ ಹೇಳಿಕೆ !

ಪುತ್ತೂರಿನಲ್ಲಿ ಅಕ್ಷತೆ ವಿತರಣೆ ಮಾಡುವ ಹಿಂದುತ್ವನಿಷ್ಠರ ಮೇಲೆ ದಾಳಿ !

ಕೋಟ್ಯಾಂತರ ರಾಮಭಕ್ತ ಹಿಂದೂಗಳ ದೇಶದಲ್ಲಿ ಅವರ ಮೇಲೆ ದಾಳಿ ಮಾಡುವವರ ಮೇಲೆ ಪ್ರಭಾವಿ ಹಿಂದೂ ಸಂಘಟನೆ ಮಾಡುವುದು ಏಕೈಕ ಉಪಾಯವಾಗಿದೆ, ಇದನ್ನು ತಿಳಿಯಿರಿ !

ಮಂಡ್ಯದಲ್ಲಿ 15 ವರ್ಷದ ಹಿಂದೂ ಹುಡುಗಿಯೊಂದಿಗೆ ಮುಸ್ಲಿಂ ಯುವಕ ಪರಾರಿಯಾದ !

ಲವ್ ಜಿಹಾದ್ ತಡೆಯಲು ಕಠಿಣ ಕಾನೂನುಗಳು ಅತ್ಯಗತ್ಯವಾಗಿವೆ; ಆದರೆ ಇದರೊಂದಿಗೆ ಹಿಂದೂ ಹುಡುಗಿಯರಿಗೆ ಧರ್ಮ ಶಿಕ್ಷಣ ನೀಡುವುದು ಎಷ್ಟು ಆವಶ್ಯಕವಾಗಿದೆಯೆಂದು ಇಂತಹ ಘಟನೆಗಳಿಂದ ಕಂಡುಬರುತ್ತದೆ !

ಹಾವೇರಿಯಲ್ಲಿ ಮುಸಲ್ಮಾನ ಯುವಕನಿಂದ ಕಾಲೇಜು ವಿದ್ಯಾರ್ಥಿನಿಯ ಅಪಹರಣ

ಕೆಲವು ದಿನಗಳ ಹಿಂದೆ ಹಾವೇರಿಯ ಹಾನಗಲ್ ಇಲ್ಲಿ ೭ ಮುಸಲ್ಮಾನ ಯುವಕರು ವಿವಾಹಿತ ಮುಸಲ್ಮಾನ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಆಕೆಗೆ ಬೆದರಿಸಿದ್ದರು.

ಮಕ್ಕಳ ಹೆಸರನ್ನು ಇಡುವಾಗ ಹಿಂದೂ ಧರ್ಮಗ್ರಂಥಗಳಲ್ಲಿರುವ ಹೆಸರುಗಳನ್ನು ಆಯ್ದುಕೊಳ್ಳಬೇಕು ! – ಸ್ವಾಮಿ ವಿಶ್ವಪ್ರಸನ್ನ ತೀರ್ಥ, ಪೇಜಾವರ ಮಠ

ನಾವು (ಹಿಂದೂ)ಇಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ. ಇದರಿಂದ ನಾವು ನಮ್ಮ ಮಕ್ಕಳ ಮೇಲೆ ಸನಾತನ ಧರ್ಮದ ಸಂಸ್ಕಾರವನ್ನು ಮಾಡುವುದು ಆವಶ್ಯಕವಾಗಿದೆ. ಮುಂಬರುವ ಸಂತತಿಯ ಮೇಲೆ ಸಂಸ್ಕೃತಿಯ ಸಂಸ್ಕಾರವನ್ನು ಮಾಡಿದರೆ, ಹಿಂದೂ ಧರ್ಮದ ರಕ್ಷಣೆಯಾಗುವುದು ಎಂದು ಪೇಜಾವರ ಮಠದ ಸ್ವಾಮಿ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.

ಹಿಂದೂ ಅಥವಾ ಮುಸಲ್ಮಾನರಿಗೆ ಕಾನೂನು ಕೈಗೆತ್ತಿಕೊಳ್ಳುವ ಅನುಮತಿ ಇಲ್ಲ ! – ಮುಖ್ಯಮಂತ್ರಿ ಸಿದ್ಧರಾಮಯ್ಯ

ಯಾರೇ ಹಿಂದೂ ಅಥವಾ ಮುಸ್ಲಿಂ ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ನಡೆದ ಹಿಂಸಾಚಾರದ ೩ ಘಟನೆಗಳ ಕುರಿತ ಪ್ರಶ್ನೆಗೆ ಉತ್ತರಿಸುವಾಗ ಈ ಹೇಳಿಕೆ ನೀಡಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರಕಾರದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಭಕ್ತರಿಗಾಗಿ ಯಾತ್ರಿ ನಿವಾಸ !

ರಾಜ್ಯದ ಕಾಂಗ್ರೆಸ್ ಸರಕಾರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ದರ್ಶನಕ್ಕಾಗಿ ಹೋಗುವ ರಾಜ್ಯದ ಭಕ್ತರಿಗಾಗಿ ಅಯೋಧ್ಯೆಯಲ್ಲಿ ‘ಕರ್ನಾಟಕ ಯಾತ್ರಿ ನಿವಾಸ’ ನಿರ್ಮಿಸುವುದಾಗಿ ಘೋಷಿಸಿದೆ.

ಶ್ರೀರಾಮಮಂದಿರದ ಉದ್ಘಾಟನೆಗೆ ಹೋಗದಂತೆ ಕಾಂಗ್ರೆಸ್ ತೆಗೆದುಕೊಂಡಿರುವ ತೀರ್ಮಾನ, ಇದು ಅಕ್ಷಮ್ಯ ಅಪರಾಧ ! – ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ

ಶ್ರೀರಾಮಮಂದಿರದ ಉದ್ಘಾಟನೆಗೆ ಹೋಗದಿರುವ ಕಾಂಗ್ರಸ್ಸಿನ ನಿರ್ಧಾರ, ಅಕ್ಷಮ್ಯ ಅಪರಾಧ ಎಂದು ಶ್ರೀರಾಮಸೇನೆ ಅಧ್ಯಕ್ಷ ಶ್ರೀ ಪ್ರಮೋದ್ ಮುತಾಲಿಕ್ ಖೇದ ವ್ಯಕ್ತಪಡಿಸಿದ್ದಾರೆ. ಅವರು ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಅನ್ನಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಿನಲ್ಲಿ ಮನೆಮನೆಗೆ ಅಕ್ಷತೆ ಕೊಡುತ್ತಿದ್ದಾರೆ. – ಸಚಿವ ಹೆಚ್.ಸಿ ಮಹಾದೇವಪ್ಪ

ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಅಕ್ಕಿ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರೂ ಕೇಂದ್ರದವರು ಅಕ್ಕಿ ನೀಡುತ್ತಿಲ್ಲ ಮತ್ತು ಇದೇ ಜನರು ಧರ್ಮದ ಹೆಸರಿನಲ್ಲಿ ಮನೆ ಮನೆಗೆ ಅಕ್ಷತೆ ಕೊಡುತ್ತಿದ್ದಾರೆ, ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹಾದೇವಪ್ಪ ಇವರು ಕಿಡಿ ಕಾರಿದರು.