ಕೊಲಕಾತಾದಲ್ಲಿ ಜೂನ್ 21 ರಂದು ನಡೆಯಲಿರುವ ಪ್ರಧಾನಿ ಮೋದಿಯವರ ಕಾರ್ಯಕ್ರಮದ ಕುರಿತು ಮುಸಲ್ಮಾನರಿಂದ ಟೀಕೆ

ಕೊಲಕಾತಾ (ಬಂಗಾಳ) – ಮುಂಬರುವ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಕೊಲಕಾತಾದ ರೆಡ್ ರೋಡನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮೋದಿಯವರೊಂದಿಗೆ ಸುಮಾರು 30 ಸಾವಿರ ಜನರು ಯೋಗ ಮಾಡಲಿದ್ದಾರೆ. ಆಡಳಿತವು ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರೆಡ್ ರೋಡ ಸೇರಿದಂತೆ ನಗರದ 7 ಪ್ರಮುಖ ರಸ್ತೆಗಳನ್ನು ಮಧ್ಯರಾತ್ರಿಯಿಂದ ಕಾರ್ಯಕ್ರಮ ಮುಗಿಯುವವರೆಗೆ ಮುಚ್ಚಲು ನಿರ್ಧರಿಸಿದೆ. ಇದಕ್ಕೆ ಮುಸಲ್ಮಾನರಿಂದ ವಿರೋಧ ವ್ಯಕ್ತವಾಗುತ್ತಿದೆ.
ಬಂಗಾಳದ ಜಲಪಾಯಿಗುಡಿ ಮಸೀದಿಯ ಇಮಾಮರಾದ (ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವವರು) ಹಫೀಜ ಮಹಮ್ಮದ ನಯೀಮುದ್ದೀನ ಗಾಜಿಯವರು ಮಾತನಾಡಿ, ನಾನು ಭಾರತದ ನಾಗರಿಕನಾಗಿದ್ದೇನೆ ಮತ್ತು ಸಂವಿಧಾನದ 15ನೇ ವಿಧಿಯು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಸಂಚಾರದ ಸಮಸ್ಯೆಯನ್ನು ಮುಂದಿಟ್ಟುಕೊಂಡು ರಸ್ತೆಯ ಮೇಲೆ ನಮಾಜ್ ಮಾಡುವುದನ್ನು ನಿಲ್ಲಿಸಿರುವಾಗ, ರೆಡ್ ರೋಡನಲ್ಲಿ ಯೋಗ ದಿನದ ಕಾರ್ಯಕ್ರಮಕ್ಕೆ ಹೇಗೆ ಅನುಮತಿ ನೀಡಲಾಯಿತು ? ರಸ್ತೆಗಳನ್ನು ಮುಚ್ಚುವುದರಿಂದ ಜನರಿಗೆ ತೊಂದರೆಯಾಗುವುದಾದರೆ, ಈ ನಿಯಮ ಎಲ್ಲರಿಗೂ ಸಮಾನವಾಗಿರಬೇಕು ಎಂದಿದ್ದಾರೆ.
“If namaz on roads is not allowed, then why Yoga Day?”
Some Muslim leaders have questioned the decision to permit a large-scale #YogaDay event on Kolkata’s Red Road, arguing that public-road namaz has faced restrictions in the recent past.
Do these religious fanatics, who… pic.twitter.com/QSKqlYXQ6R
— Sanatan Prabhat (@SanatanPrabhat) June 16, 2026
ಕಾನೂನು ಮತ್ತು ನಿಯಮಗಳು ಎಲ್ಲಾ ಧರ್ಮಗಳಿಗೂ ಸಮಾನವಾಗಿರಬೇಕು ! (ಅಂತೆ)
ಖಾತಿಮ ಮಹಮ್ಮದ ರವರೂ ಆಡಳಿತದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಅವರು ಮಾತನಾಡಿ, ಮುಸಲ್ಮಾನ ಸಮಾಜವು ಆಡಳಿತದ ಸೂಚನೆಗಳನ್ನು ಪಾಲಿಸಿ ರೆಡ್ ರೋಡನಲ್ಲಿ ನಮಾಜ್ ಮಾಡಲಿಲ್ಲ; (ಅಂದರೆ ಅವರು ಆಡಳಿತ ಮತ್ತು ಸಾರ್ವಜನಿಕರ ಮೇಲೆ ಯಾವುದೇ ಉಪಕಾರ ಮಾಡುತ್ತಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ! – ಸಂಪಾದಕರು) ಆದರೆ ಈಗ ಯೋಗ ದಿನಕ್ಕಾಗಿ ಅದೇ ಸ್ಥಳದಲ್ಲಿ ಇಷ್ಟೊಂದು ದೊಡ್ಡ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುತ್ತಿದೆ. ಕಾನೂನು ಮತ್ತು ನಿಯಮಗಳು ಎಲ್ಲಾ ಧರ್ಮಗಳಿಗೂ ಸಮಾನವಾಗಿರಬೇಕು ಎಂದಿದ್ದಾರೆ. (ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುವವರು ಸಮಾನ ನಿಯಮಗಳಿಗಾಗಿ ಒತ್ತಾಯಿಸುವುದು ಒಂದು ಹಾಸ್ಯಾಸ್ಪದ ಸಂಗತಿಯೇ ಸರಿ ! – ಸಂಪಾದಕರು)
ಪ್ರಧಾನಿಯವರ ಕಾರ್ಯಕ್ರಮವು ಒಂದು ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮವಾಗಿದೆ ! – ಸಚಿವ ದಿಲೀಪ ಘೋಷ
ಭಾಜಪದ ನಾಯಕ ಹಾಗೂ ಬಂಗಾಳ ಸರಕಾರದಲ್ಲಿ ಸಚಿವರಾಗಿರುವ ದಿಲೀಪ ಘೋಷ ರವರು ಮಾತನಾಡಿ, ಹಲವು ವರ್ಷಗಳಿಂದ ರೆಡ್ ರೋಡ ಸೇರಿದಂತೆ ಕೊಲಕಾತಾದ ಹಲವು ರಸ್ತೆಗಳಲ್ಲಿ ನಮಾಜು ಮಾಡುವುದರಿಂದ ದೀರ್ಘಕಾಲದವರೆಗೆ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಪ್ರಧಾನಿಯವರ ಕಾರ್ಯಕ್ರಮವು ಒಂದು ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಪ್ರಧಾನಮಂತ್ರಿಯವರ ಭದ್ರತೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ; ಆದ್ದರಿಂದಲೇ ಕೆಲವು ರಸ್ತೆಗಳನ್ನು ಕೆಲವು ಗಂಟೆಗಳ ಕಾಲ ಮುಚ್ಚುವುದು ಅತ್ಯಗತ್ಯವಾಗಿದೆ. ಈ ಹಿಂದೆ ಅನೇಕ ಮಸೀದಿಗಳು ಲಭ್ಯವಿದ್ದರೂ ಹಲವು ವರ್ಷಗಳ ಕಾಲ ರೆಡ್ ರೋಡನಲ್ಲೇ ನಮಾಜು ಮಾಡಲಾಗುತ್ತಿತ್ತು. ಆದರೆ ಇಂದು ಪ್ರಧಾನಿಯವರ ಕಾರ್ಯಕ್ರಮದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಪ್ರಧಾನಿಯವರ ಕಾರ್ಯಕ್ರಮವು ಜನರ ಓಡಾಟ ತುಲನಾತ್ಮಕವಾಗಿ ಕಡಿಮೆ ಇರುವ ಸ್ಥಳದಲ್ಲಿ ನಡೆಯಬೇಕು. ಈ ಆಯೋಜನೆಯು ಯಾವುದಾದರೂ ಮೈದಾನದಲ್ಲಿ ನಡೆದಿದ್ದರೂ ಸಹ, ಭದ್ರತೆಯ ಕಾರಣಗಳಿಗಾಗಿ ಸುತ್ತಮುತ್ತಲಿನ ಪ್ರದೇಶವನ್ನು ಮುಚ್ಚಬೇಕಾಗುತ್ತಿತ್ತು. ಏನೇ ನಡೆಯುತ್ತಿದ್ದರೂ ಅದು ಸಾರ್ವಜನಿಕ ಹಿತಾಸಕ್ತಿಗಾಗಿಯೇ ನಡೆಯುತ್ತಿದೆ ಮತ್ತು ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನಲ್ಲಿ ಬದುಕುವುದನ್ನು ಕಲಿಯಬೇಕು ಎಂದು ಹೇಳಿದ್ದಾರೆ.
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ
ಅಶ್ಲೀಲತೆ ಹರಡುವ ‘ಸ್ಟ್ಯಾಂಡ್-ಅಪ್ ಕಾಮಿಡಿ’ ಕಾರ್ಯಕ್ರಮಗಳಿಗೆ ಸೆನ್ಸಾರ್ ಮಂಡಳಿಯ ಪೂರ್ವಾನ್ಮತಿ ಕಡ್ಡಾಯಗೊಳಿಸಿ!
‘ಭಾರತವು ಹಿಂದೂ ಬಹುಸಂಖ್ಯಾತವಾಗಿರುವುದರಿಂದ ಜಾತ್ಯತೀತವಾಗಿದೆ, ಯಾವುದಾದರೂ ಇಸ್ಲಾಮಿಕ್ ದೇಶ ಜಾತ್ಯತೀತವಾಗಿದ್ದರೆ ತಿಳಿಸಿ !’ – ರಾಜಾ ಭಯ್ಯಾ, ಶಾಸಕರು, ಉತ್ತರ ಪ್ರದೇಶ
ಚಿಕ್ಕ ಮಕ್ಕಳಿಗೆ ಗೋಮಾಂಸ ತಿನ್ನಲು ಸಲಹೆ ನೀಡುವವರ ವಿರುದ್ಧ ಮೊಕದ್ದಮೆ ದಾಖಲಿಸಿ ! – ವಿಶ್ವ ಹಿಂದೂ ಪರಿಷತ್
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !