ಅನ್ನಭಾಗ್ಯಕ್ಕೆ ಅಕ್ಕಿ ಇಲ್ಲ, ಧರ್ಮದ ಹೆಸರಿನಲ್ಲಿ ಮನೆಮನೆಗೆ ಅಕ್ಷತೆ ಕೊಡುತ್ತಿದ್ದಾರೆ. – ಸಚಿವ ಹೆಚ್.ಸಿ ಮಹಾದೇವಪ್ಪ

ರಾಜ್ಯದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ ಇವರ ಹಿಂದೂ ದ್ವೇಷಿ ಹೇಳಿಕೆ

ಬೆಂಗಳೂರು – ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಅಕ್ಕಿ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರೂ ಕೇಂದ್ರದವರು ಅಕ್ಕಿ ನೀಡುತ್ತಿಲ್ಲ ಮತ್ತು ಇದೇ ಜನರು ಧರ್ಮದ ಹೆಸರಿನಲ್ಲಿ ಮನೆ ಮನೆಗೆ ಅಕ್ಷತೆ ಕೊಡುತ್ತಿದ್ದಾರೆ, ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹಾದೇವಪ್ಪ ಇವರು ಕಿಡಿ ಕಾರಿದರು. (ಅಕ್ಷತೆ ವಿತರಣೆ ಕಾರ್ಯಕ್ರಮ ಇದು ವಿಶ್ವ ಹಿಂದೂ ಪರಿಷತ್ತಿನದ್ದಾಗಿದೆ. ಆದರೆ ಕಾಂಗ್ರೆಸ್ಸಿನ ಸಚಿವರು ಭಾಜಪ ದ್ವೇಷದಿಂದ ಕೇಂದ್ರ ಸರಕಾರವನ್ನು ಟಿಕಿಸುತ್ತಿದ್ದಾರೆ ಇದು ಹಾಸ್ಪದವಾಗಿದೆ ! – ಸಂಪಾದಕರು)

ಹಸಿವು ಮುಕ್ತ ಕರ್ನಾಟಕ ಈ ಉದ್ದೇಶದಿಂದ ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರವು ಬಡತನ ರೇಖೆಯ ಕೆಳಗಿನ ಜನರಿಗಾಗಿ ಅನ್ನ ಭಾಗ್ಯ ಯೋಜನೆ ಆರಂಭಿಸಿದರು. ಈ ಯೋಜನೆಗಾಗಿ ಅಕ್ಕಿ ಪಡೆಯಲು ರಾಜ್ಯ ಸರಕಾರ ನಿಧಿ ನೀಡಿ ಕೇಂದ್ರ ಸರಕಾರದಿಂದ ಅಕ್ಕಿ ಖರೀದಿಸುತ್ತಿದೆ. ಕೇಂದ್ರ ಸರಕಾರ ಮಾತ್ರ ಧರ್ಮದ ಹೆಸರಿನಲ್ಲಿ ಅಕ್ಷತೆಯ ಪೊಟ್ಟಣ ಮನೆಮನೆಗೆ ತಲುಪಿಸುತ್ತಿದೆ. ಇದು ಧರ್ಮದ ವಿರುದ್ಧವಾಗಿದೆ. ಬಡವರಿಗೆ ಮತ್ತು ಹಸಿದವರಿಗೆ ಅನ್ನ ಪೂರೈಸುವುದು, ಇದಕ್ಕಿಂತ ದೊಡ್ಡ ಧರ್ಮವಿದೆಯೆ ? ಹೀಗೆ ಪ್ರಶ್ನೆ ಕೂಡ ಅವರು ಕೇಳಿದರು. ಬಡವರಿಗೆ ಅನ್ನ ಪೂರೈಸುವ ಸಂದರ್ಭದಲ್ಲಿ ಕೂಡ ರಾಜಕಾರಣ ಮಾಡುವ ಅಮಾನವೀಯ ಪ್ರವೃತ್ತಿ ತೋರಿಸುವರು ಧರ್ಮದ ಬಗ್ಗೆ ಮಾತನಾಡುವಾಗ ಅಳಬೇಕೋ ನಗಬೇಕೋ ತಿಳಿಯದು ? ಎಂದೂ ಸಹ ಅವರು ಹೇಳಿದರು. (ಕಾಂಗ್ರೆಸ್ ಬಹಳಷ್ಟು ಸಮಯ ಭಾರತದಲ್ಲಿ ಅಧಿಕಾರದಲ್ಲಿ ಇದ್ದರೂ ಕೂಡ ಬಡತನ ನಿರ್ಮೂಲನೆ ಏಕೆ ಆಗಲಿಲ್ಲ? ಮೊದಲು ಇದರ ಉತ್ತರ ಕಾಂಗ್ರೆಸ್ಸಿಗರು ನೀಡಬೇಕು ! – ಸಂಪಾದಕರು)