ಬೆಳಗಾವಿ – ಶ್ರೀರಾಮಮಂದಿರದ ಉದ್ಘಾಟನೆಗೆ ಹೋಗದಿರುವ ಕಾಂಗ್ರಸ್ಸಿನ ನಿರ್ಧಾರ, ಅಕ್ಷಮ್ಯ ಅಪರಾಧ ಎಂದು ಶ್ರೀರಾಮಸೇನೆ ಅಧ್ಯಕ್ಷ ಶ್ರೀ ಪ್ರಮೋದ್ ಮುತಾಲಿಕ್ ಖೇದ ವ್ಯಕ್ತಪಡಿಸಿದ್ದಾರೆ. ಅವರು ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮುಂದೆ ಮಾತನಾಡುತ್ತಾ, ಎಲ್ಲರೂ ಭಾಜಪ ಮತ್ತು ರಾ.ಸ್ವಂಘದವರಲ್ಲ, ಆದರೆ ಎಲ್ಲರೂ ಶ್ರೀರಾಮನ ದರ್ಶನಕ್ಕಾಗಿ ಹೋಗಬೇಕು. ೫೦೦ ವರ್ಷಗಳ ನಂತರ ನಡೆಯಲಿರುವ ಶ್ರೀರಾಮಮೂರ್ತಿಯ ಪ್ರಾಣ ಪ್ರತಿಷ್ಟಾಪನೆಯ ಸಮಾರಂಭಕ್ಕೆ ಹೋಗದಿರುವುದು ಕಾಂಗ್ರೆಸ್ಸಿನ ದೌರ್ಭಾಗ್ಯವೇ ಆಗಿದೆ. ನಿಮಗೆ ನಿಜವಾಗಿಯೂ ಹಿಂದೂಗಳ, ಶ್ರೀರಾಮನ ಶಾಪ ತಗಲುವುದು. ನೀವು ಈ ಸಮಾರಂಭದಲ್ಲಿ ಸಹಭಾಗಿಯಾಗಿ ಹಿಂದೂ ಸಮಾಜದಲ್ಲಿ ಒಂದಾಗಿದ್ದರೆ, ಶ್ರೀರಾಮನ ಕೃಪೆಯಿಂದ ಲಾಭವಾಗುತ್ತಿತ್ತು. ದೇಶಕ್ಕೆ ಸ್ವಾತಂತ್ಯ್ರ ಬಂದಾಗಿನಿಂದಲೂ ಕಾಂಗ್ರೆಸ್ ಹಿಂದೂಗಳ ಪರವಾಗಿ ನಿಲ್ಲದೆ ಮುಸಲ್ಮಾನರ ಓಲೈಕೆ ಮಾಡುವುದರಲ್ಲಿಯೇ ಮಗ್ನವಾಗಿದೆ ಎಂದರು.