ಪುತ್ತೂರು (ಕರ್ನಾಟಕ) – ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ಉದ್ಘಾಟನೆಯ ಪ್ರಯುಕ್ತ ಮನೆ ಮನೆಗೆ ಅಕ್ಷತೆ ವಿತರಣೆಯ ಕಾರ್ಯಕ್ರಮ ಉತ್ಸಾಹದಿಂದ ನಡೆಯುವಾಗ ಇಲ್ಲಿ ಅಕ್ಷತೆ ವಿತರಣೆ ಸಂಚಾಲಕರ ಮೇಲೆ ಇತ್ತೀಚಿಗೆ ದಾಳಿ ನಡೆದಿರುವ ಘಟನೆ ಘಟಿಸಿದೆ.
(ಸೌಜನ್ಯ – News Arrow)
ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಅಕ್ಷತೆ ವಿತರಣಾ ಸಂಚಾಲಕ ಸಂತೋಷ ಇವರು ಮುಂಡೂರುದಲ್ಲಿ ಮನೆ ಮನೆಗೆ ಅಕ್ಷತೆ ವಿತರಣೆ ಮಾಡುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಅಕ್ಷತೆ ವಿತರಣೆಗೆ ವಿರೋಧಿಸುವ ಗುಂಪಿನಿಂದ ಅವರ ಮೇಲೆ ದಾಳಿ ನಡೆಸಿದ್ದಾರೆ. ಸಂತೋಷ ಇವರನ್ನು ರಕ್ಷಿಸಲು ಬಂದಿರುವ ಅವರ ತಾಯಿಯ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಅವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಥಳೀಯ ನಿವಾಸಿ ಧನಂಜಯ ಮತ್ತು ಅವರ ಗುಂಪಿನಿಂದ ಈ ಕೃತ್ಯ ನಡೆದಿದೆ. ಪುತ್ತೂರಿನ ಮಾಜಿ ಸಂಸದ ಸಂಜೀವ ಮಠಂದೂರು ಇವರು ಈ ದಾಳಿಯನ್ನು ಖಂಡಿಸಿದ್ದು, ಇದು ರಾಜಕೀಯ ಪ್ರೇರಿತ ದಾಳಿಯಾಗಿದ್ದು ಪೊಲೀಸರು ದಾಳಿಕೋರರನ್ನು ತಕ್ಷಣ ಬಂಧಿಸಬೇಕು, ಎಂದು ಒತ್ತಾಯಿಸಿದ್ದಾರೆ. ಪೊಲೀಸರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಕೋಟ್ಯಾಂತರ ರಾಮಭಕ್ತ ಹಿಂದೂಗಳ ದೇಶದಲ್ಲಿ ಅವರ ಮೇಲೆ ದಾಳಿ ಮಾಡುವವರ ಮೇಲೆ ಪ್ರಭಾವಿ ಹಿಂದೂ ಸಂಘಟನೆ ಮಾಡುವುದು ಏಕೈಕ ಉಪಾಯವಾಗಿದೆ, ಇದನ್ನು ತಿಳಿಯಿರಿ ! |