
ಅಮೃತಸರ (ಪಂಜಾಬ್) – ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರನ್ನು ‘ಅಕಾಲ ತಖ್ತ್’ ‘ಗುರು ದ್ರೋಹಿ’ (ಗುರುಗಳ ವಿರೋಧಿ) ಮತ್ತು ‘ಖಾಲ್ಸಾ ಪಂಥ ವಿರೋಧಿ’ ಎಂದು ಘೋಷಿಸಿದೆ. ಅಕಾಲ ತಖ್ತ್ ಸಿಖ್ಖರ ಅತ್ಯುನ್ನತ ಧಾರ್ಮಿಕ ಮತ್ತು ಅತ್ಯುನ್ನತ ಪೀಠವಾಗಿದೆ. ಅಕಾಲ ತಖ್ತ್ ರಾಜ್ಯದ ಎಲ್ಲಾ ಸಿಖ್ ಶಾಸಕರು ಮತ್ತು ಪಂಜಾಬ್ ಸರಕಾರದ ಮಂತ್ರಿಮಂಡಲಕ್ಕೆ ಧರ್ಮನಿಂದನೆ ವಿರೋಧಿ ಕಾನೂನಿನ ಹಿನ್ನೆಲೆಯಲ್ಲಿ ಜೂನ್ 29 ರಂದು ಅಕಾಲ ತಖ್ತ್ ಮುಂದೆ ಹಾಜರಾಗುವಂತೆ ಸಮನ್ಸ್ ಹೊರಡಿಸಿದೆ. ಅಮೃತಸರದಲ್ಲಿ ‘ಪಾಂಚ್ ಸಿಂಗ್ ಸಾಹಿಬಾನ್’ (ಸಿಖ್ ಧರ್ಮಗುರುಗಳು) ನಡುವೆ ಸಭೆ ನಡೆದ ನಂತರ ಅಕಾಲ ತಖ್ತ್‌ನ ಜಥೇದಾರ್ ಜ್ಞಾನಿ ಕುಲದೀಪ್ ಸಿಂಗ್ ಗರ್ಗಜ್ ಅವರು ‘ಫಸೀಲ್’ನಿಂದ (ಅಕಾಲ ತಖ್ತ್ ವೇದಿಕೆಯಿಂದ) ಈ ಆದೇಶವನ್ನು ಓದಿದರು.
ಪ್ರಕರಣವೇನು?
ಅಕಾಲ ತಖ್ತ್ ಪ್ರಕಾರ ಒಂದು ವಿಡಿಯೋದಲ್ಲಿ ಮುಖ್ಯಮಂತ್ರಿ ಮಾನ್ ಸಿಖ್ ಗುರುಗಳ ಚಿತ್ರಗಳ ಮೇಲೆ ಮದ್ಯ ಚಿಮುಕಿಸುತ್ತಿರುವುದು ಕಂಡುಬರುತ್ತದೆ. ಇದನ್ನು ಸಿಖ್ ಧಾರ್ಮಿಕ ಭಾವನೆಗಳಿಗೆ ಅವಮಾನ ಎಂದು ಪರಿಗಣಿಸಲಾಗಿದೆ. ಮುಖ್ಯಮಂತ್ರಿ ಮಾನ್ ಅವರು ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ (ಎಐ) ಬಳಸಿ ತಯಾರಿಸಲಾಗಿದೆ ಎಂದು ಹೇಳಿದ್ದಾರೆ. ಅಕಾಲ ತಖ್ತ್ ಅವರಿಗೆ ಈ ಹೇಳಿಕೆಯ ಪುರಾವೆಯನ್ನು ಕೇಳಿತು; ಆದರೆ ‘ಅಗತ್ಯ ಮಾಹಿತಿ ಅಥವಾ ಪ್ರಯೋಗಾಲಯಗಳ ಹೆಸರುಗಳನ್ನು ಅವರು ನೀಡಲಿಲ್ಲ’, ಎಂದು ಅಕಾಲ ತಖ್ತ್ ಹೇಳುತ್ತದೆ.
ಅಕಾಲ ತಖ್ತ್ ಭಾರತ ಸರಕಾರದಿಂದ ಮಾನ್ಯತೆ ಪಡೆದ ಎರಡು ಪ್ರಯೋಗಾಲಯಗಳಿಂದ ಪರಿಶೀಲನೆ ನಡೆಸಿದಾಗ, ವಿಡಿಯೋ ನಕಲಿ ಅಥವಾ ಎಐ ನಿರ್ಮಿತವಲ್ಲ ಎಂದು ತಿಳಿದುಬಂದಿದೆ ಎಂದು ತಿಳಿಸಿತು. ನಂತರ ಮಾನ್ ಅವರು ಅಕಾಲ ತಖ್ತ್ ಮುಂದೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ತೀರ್ಮಾನಿಸಲಾಯಿತು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ