ವಾಯುಪಡೆಯ ಅಧಿಕಾರಿಯ ಪತ್ನಿಯ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳಿಗೆ 5 ದಿನಗಳ ಪೊಲೀಸ್ ಕಸ್ಟಡಿ!

  • ತಲೆಮರೆಸಿಕೊಂಡಿರುವ ಮೂರನೇ ಮತಾಂಧನ ಪತ್ತೆಗೆ ಶೋಧ ಕಾರ್ಯ ಚುರುಕು!

  • ಸಹಪಾಠಿ ಎಂಬುದನ್ನು ದುರುಪಯೋಗಪಡಿಸಿಕೊಂಡು, ಭೇಟಿಯಾಗುವ ನೆಪದಲ್ಲಿ ಹೋಟೆಲ್‌ಗೆ ಕರೆಸಿ ದೌರ್ಜನ್ಯ!

ನಾಗ್ಪುರ – ಭಾರತೀಯ ವಾಯುಪಡೆಯ 24 ವರ್ಷದ ಅಧಿಕಾರಿಯೊಬ್ಬರ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ, ಅಶ್ಲೀಲ ವಿಡಿಯೋ ಮೂಲಕ ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಮತ್ತು ಆಕೆಯನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಖ್ಯ ಆರೋಪಿ ಅಯ್ಯಾಜ್ ತಾಜ್ ಮದಾರೆ ಮತ್ತು ಅಮೀನ್ ಶೇಖ್ ಎಂಬುವವರನ್ನು ಬಂಧಿಸಿದ್ದಾರೆ. ನ್ಯಾಯಾಲಯ ಅವರಿಗೆ 5 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ. ಮೂರನೇ ಆರೋಪಿ ಹಜರತ್ ಮೌಲಾನಾ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಈ ಪ್ರಕರಣದಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

1. ಮುಖ್ಯ ಆರೋಪಿ ಅಯ್ಯಾಜ್ ತಾಜ್ ಮದಾರೆ (26 ವರ್ಷ) ಸಂತ್ರಸ್ತೆಯ ಹಳೆಯ ಸಹಪಾಠಿಯಾಗಿದ್ದನು. ಆತ ಕೆಲಸದ ನೆಪದಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಲು ಹೋಟೆಲ್‌ಗೆ ಕರೆಸಿದ್ದನು. ಅಲ್ಲಿ ಆಕೆಗೆ ತಂಪು ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ನೀಡಿ, ಅತ್ಯಾಚಾರ ಎಸಗಿದ್ದನು. ಅಲ್ಲದೆ ಆಕೆಯ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ತೆಗೆದಿದ್ದನು.

2. ಅಶ್ಲೀಲ ವಿಡಿಯೋಗಳನ್ನು ತೋರಿಸಿ ಬೆದರಿಸುವ ಮೂಲಕ ಆರೋಪಿಯು ಸಂತ್ರಸ್ತೆಯನ್ನು ಪದೇ ಪದೇ ಲೈಂಗಿಕ ಶೋಷಣೆಗೆ ಒಳಪಡಿಸಿದ್ದನು. ಫೋಟೋಗಳನ್ನು ಹರಡುವುದಾಗಿ ಬೆದರಿಸಿ ಆಕೆಯಿಂದ 3 ಲಕ್ಷದ 9 ಸಾವಿರ ರೂಪಾಯಿಗಳನ್ನು ವಸೂಲಿ ಮಾಡಿದ್ದನು.

3. ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಆಕೆಯ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿತ್ತು. ಸಂತ್ರಸ್ತೆಯು ತನ್ನನ್ನು ಬಿಟ್ಟುಬಿಡುವಂತೆ ಪದೇ ಪದೇ ವಿನಂತಿಸಿದರೂ, ಆರೋಪಿ ಅಯ್ಯಾಜ್ ಆಕೆಯ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದನು. ಆತ ಧಾರ್ಮಿಕ ಮಂತ್ರಗಳನ್ನು ಪಠಿಸುತ್ತಾ ಆಕೆಯ ಮೇಲೆ ಪದೇ ಪದೇ ಊದುತ್ತಿದ್ದನು.

4. ಮತಾಂತರದ ನಂತರ ಆರೋಪಿಗಳು ಮತ್ತೊಮ್ಮೆ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು.

5. ಮೂರು ದಿನಗಳ ನಂತರ ಸಂತ್ರಸ್ತೆಯ ಪತಿ ಮನೆಗೆ ಬಂದಾಗ, ಆಕೆ ನಡೆದ ಸಂಪೂರ್ಣ ಘಟನೆಯನ್ನು ಪತಿಗೆ ತಿಳಿಸಿದ್ದಾಳೆ. ತದನಂತರ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂಪಾದಕೀಯ ನಿಲುವು

  • ಮತಾಂಧರ ದೃಷ್ಟಿಯಲ್ಲಿ ಸ್ನೇಹ ಏನು ಇರುವುದಿಲ್ಲ, ಇದನ್ನು ಮಹಿಳೆಯರು ಗಮನದಲ್ಲಿಟ್ಟುಕೊಂಡು ಅವರನ್ನು ಏಕಾಂತದಲ್ಲಿ ಭೇಟಿಯಾಗುವುದನ್ನು ತಪ್ಪಿಸಬೇಕು !
  • ಮಹಿಳೆಯರನ್ನು ವಂಚಿಸುವ ಮತಾಂಧ ಮುಸಲ್ಮಾನರಿಗೆ ಕಠಿಣ ಶಿಕ್ಷೆ ವಿಧಿಸಬೇಕು!