‘ತರಕಾರಿಗಳನ್ನು ಹೆಚ್ಚುವ ಯೋಗ್ಯ ಪದ್ಧತಿಯ ಬಗ್ಗೆ ಸಂಶೋಧನೆ

‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯದ ವತಿಯಿಂದ ಅಡುಗೆಯಲ್ಲಿನ ಆಚಾರಗಳು, ಅಡುಗೆಯಲ್ಲಿನ ಘಟಕಗಳು, ಅಡುಗೆಯನ್ನು ತಯಾರಿಸುವ ಪದ್ಧತಿ ಇತ್ಯಾದಿಗಳ ಸಂದರ್ಭದಲ್ಲಿ ಬಹಳಷ್ಟು ಸಂಶೋಧನೆಗಳನ್ನು ಮಾಡಲಾಗುತ್ತಿದೆ.

‘ಆಭರಣದಿಂದ ವ್ಯಕ್ತಿಯ ಮೇಲಾಗುವ ಪರಿಣಾಮ’ ಎಂಬ ವಿಷಯದ ಕುರಿತು ಫ್ರಾನ್ಸ್‌ನಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ !

ಆಧ್ಯಾತ್ಮಿಕ ದೃಷ್ಟಿಯಿಂದ ಸಕಾರಾತ್ಮಕ ವಿನ್ಯಾಸದ ಆಭರಣಗಳು ಸಕಾರಾತ್ಮಕ (ಸಾತ್ವಿಕ) ಸ್ಪಂದನಗಳನ್ನು ಆಕರ್ಷಿಸುತ್ತವೆ ಮತ್ತು ಮಹಿಳೆಯ ಆಧ್ಯಾತ್ಮಿಕ ಪ್ರಗತಿಯಲ್ಲಿ ಸಹಾಯಕವಾಗಬಲ್ಲವು ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ನಕಾರಾತ್ಮಕ ವಿನ್ಯಾಸದ ಆಭರಣಗಳು ನಕಾರಾತ್ಮಕ (ರಜ-ತಮ) ಸ್ಪಂದನಗಳನ್ನು ಆಕರ್ಷಿಸುತ್ತವೆ ಮತ್ತು ಮಹಿಳೆಯ ಪ್ರಭಾವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.

೧೧.೬.೨೦೨೨ ರಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಧರ್ಮಧ್ವಜದ ಪೂಜೆಯ ಕುರಿತು ಕು. ಮಧುರಾ ಭೋಸಲೆಯವರು ಮಾಡಿದ ಸೂಕ್ಷ್ಮ ಪರೀಕ್ಷಣೆ !

ಧರ್ಮಧ್ವಜದ ಪಂಚೋಪಚಾರ ಪೂಜೆಯಿಂದ ಪ್ರಭು ಶ್ರೀರಾಮನ ತತ್ವವು ಧರ್ಮತತ್ತ್ವದೊಂದಿಗೆ ಏಕರೂಪವಾಯಿತು. ತದನಂತರ ಈ ಧರ್ಮತತ್ತ್ವವು ಪೃಥ್ವಿ, ಆಪ, ತೇಜ, ವಾಯು, ಮತ್ತು ಆಕಾಶ ಈ ಪಂಚಮಹಾಭೂತಗಳ ಸ್ವರೂಪದಲ್ಲಿ ಧರ್ಮಧ್ವಜದಿಂದ ಪ್ರಕ್ಷೇಪಿತವಾಗಿ ಸಂಪೂರ್ಣ ಪೃಥ್ವಿಯ ಮೇಲೆ ಕಾರ್ಯನಿರತವಾಯಿತು.

ತುಳಸಿ ವಿವಾಹ (ಆರಂಭ ೫ ನವೆಂಬರ್)

ಭಗವಂತನಿಗೆ ಪುರುಷಸೂಕ್ತದಿಂದಲೂ ಮತ್ತು ತುಳಸಿ ದೇವಿಗೆ ಶ್ರೀಸೂಕ್ತದಿಂದಲೂ ಅರ್ಚನೆಯನ್ನು ಮಾಡಬೇಕು ತುಳಸಿಯ ಎದುರಿಗೆ ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ ಮಧ್ಯದಲ್ಲಿ ಅಂತರಪಟವನ್ನು ಹಿಡಿದು ಮದುವೆ ಮಾಡಿಸುತ್ತಾರೆ. ಪ್ರಾತಃಕಾಲದಲ್ಲಿ ಪೂಜೆ ಮತ್ತು ಸಂಜೆ ತುಳಸಿ ವಿವಾಹವನ್ನು ಮಾಡುತ್ತಾರೆ.

ದೇವಸ್ಥಾನಗಳಲ್ಲಿ ಪ್ರಸ್ತುತ ಪಡಿಸಿದ ಸಂಗೀತ ಮತ್ತು ನೃತ್ಯಗಳು ಆಧ್ಯಾತ್ಮಿಕ ಪ್ರಗತಿಗೆ ಚಾಲನೆ ನೀಡಬಲ್ಲವು ! – ಸಂಶೋಧನೆಯ ನಿಷ್ಕರ್ಷ

ಪ್ರಾಚೀನ ಕಾಲದಲ್ಲಿ ದೇವಸ್ಥಾನಗಳಲ್ಲಿ ದೇವತೆಗಳೆದುರು ಕಲಾವಿದರು ಕಲೆಯನ್ನು ಪ್ರಸ್ತುತ ಪಡಿಸಿದಾಗ ಭಕ್ತರಿಗೆ ಭಾವದ ಅನುಭೂತಿಗಳು ಬರುತ್ತಿದ್ದವು ಮತ್ತು ಅಲ್ಲಿ ಆಯಾ ದೇವತೆಗಳ ತತ್ತ್ವವು ದೊಡ್ಡ ಪ್ರಮಾಣದಲ್ಲಿ ಆಕರ್ಷಿತವಾಗುತ್ತಿತ್ತು. ಆದುದರಿಂದಲೇ ಭಾರತದ ದೇವಸ್ಥಾನಗಳು ಇಡೀ ಸಮಾಜದ ಆಧ್ಯಾತ್ಮಿಕ ಪ್ರಗತಿಯ ಮತ್ತು ಕಲ್ಯಾಣದ ಸಾಧನವಾಗಿದ್ದವು.

ವಿಭೂತಿಯನ್ನು ಹಚ್ಚಿಕೊಂಡ ನಂತರ ವ್ಯಕ್ತಿಯ ನಕಾರಾತ್ಮಕ ಊರ್ಜೆ ಕಡಿಮೆಯಾಗುವುದು, ಸಕಾರಾತ್ಮಕ ಊರ್ಜೆ ಹೆಚ್ಚಾಗುವುದು ಮತ್ತು ವಿಭೂತಿಯ ಪರಿಣಾಮವು ೩೦ ನಿಮಿಷ ಉಳಿಯುವುದು

ವಿಭೂತಿಯನ್ನು ಹಚ್ಚಿಕೊಳ್ಳುವುದರಿಂದ ವಿವಿಧ ಪ್ರಕಾರದ ವ್ಯಕ್ತಿಗಳ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡಲು, ಸಾಧ್ಯವಾಗಬೇಕೆಂದು ಆಧ್ಯಾತ್ಮಿಕ ಮಟ್ಟ ಮತ್ತು ಆಧ್ಯಾತ್ಮಿಕ ತೊಂದರೆ ಈ ಘಟಕಗಳ ವಿಚಾರ ಮಾಡಿ ಆಯ್ದ ಒಟ್ಟು  ೬ ಜನರ ಮೇಲೆ ಈ ಪರೀಕ್ಷಣೆಯನ್ನು ಮಾಡಲಾಯಿತು.

ಸಹೋದರ ಬಿದಿಗೆ (ಯಮದ್ವಿತೀಯಾ) ಕಾರ್ತಿಕ ಶುಕ್ಲ ಬಿದಿಗೆ (ಅಕ್ಟೋಬರ್ ೨೬)

ಅಪಮೃತ್ಯು ಬರಬಾರದೆಂದು ಧನತ್ರಯೋದಶಿ, ನರಕ ಚತುರ್ದಶಿ ಮತ್ತು ಯಮದ್ವಿತೀಯಾ ಈ ದಿನಗಳಂದು ಮೃತ್ಯುವಿನ ದೇವತೆಯಾದ ‘ಯಮಧರ್ಮ’ನ ಪೂಜೆ ಮಾಡುತ್ತಾರೆ. ಈ ದಿನ ಯಮರಾಜನು ನರಕದಲ್ಲಿ ಸಿಲುಕಿ ತೊಂದರೆಗೊಳಗಾದ ಜೀವಗಳನ್ನು ಒಂದು ದಿನದ ಮಟ್ಟಿಗೆ ಮುಕ್ತಗೊಳಿಸುತ್ತಾನೆ.’

ಬಲಿಪಾಡ್ಯ (ಅಕ್ಟೋಬರ್ ೨೬)

ಬಲಿಪಾಡ್ಯದಂದು ೫ ಬಣ್ಣಗಳ ರಂಗೋಲಿಯಿಂದ ಬಲಿ ಮತ್ತು ಅವನ ಪತ್ನಿ ವಿಂಧ್ಯಾವಲಿಯ ಚಿತ್ರಗಳನ್ನು ಬಿಡಿಸಿ ಅವರ ಪೂಜೆಯನ್ನು ಮಾಡುತ್ತಾರೆ. ನಂತರ ಬಲಿ ಪ್ರೀತ್ಯರ್ಥ ದೀಪ ಮತ್ತು ವಸ್ತ್ರಗಳ ದಾನವನ್ನು ಮಾಡುತ್ತಾರೆ.

ಲಕ್ಷ್ಮಿಪೂಜೆ (ಅಕ್ಟೋಬರ್ ೨೪)

ಈ ದಿನ ‘ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮಿ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆ ಮಾಡುತ್ತಾರೆ.

ನರಕ ಚತುರ್ದಶಿ (ಅಕ್ಟೋಬರ್ ೨೪)

ಆಕಾಶದಲ್ಲಿ ನಕ್ಷತ್ರಗಳಿರುವಾಗ ಬ್ರಾಹ್ಮೀ ಮುಹೂರ್ತದಲ್ಲಿ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ. ಉತ್ತರಣೆಯ ಗೆಲ್ಲಿನಿಂದ ತಲೆಯಿಂದ ಕಾಲುಗಳ ವರೆಗೆ ಮತ್ತು ಪುನಃ ಕಾಲುಗಳಿಂದ ತಲೆಯ ವರೆಗೆ ನೀರನ್ನು ಸಿಂಪಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಬೇರಿರುವ ಉತ್ತರಣೆಯನ್ನು ಉಪಯೋಗಿಸುತ್ತಾರೆ.