‘ತರಕಾರಿಗಳನ್ನು ಹೆಚ್ಚುವ ಯೋಗ್ಯ ಪದ್ಧತಿಯ ಬಗ್ಗೆ ಸಂಶೋಧನೆ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್. ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಿಸುತ್ತಿರುವ ಶ್ರೀ. ರೂಪೇಶ ರೆಡಕರ

‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯದ ವತಿಯಿಂದ ಅಡುಗೆಯಲ್ಲಿನ ಆಚಾರಗಳು, ಅಡುಗೆಯಲ್ಲಿನ ಘಟಕಗಳು, ಅಡುಗೆಯನ್ನು ತಯಾರಿಸುವ ಪದ್ಧತಿ ಇತ್ಯಾದಿಗಳ ಸಂದರ್ಭದಲ್ಲಿ ಬಹಳಷ್ಟು ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಈ ಸಂಶೋಧನೆಯ ನಿಷ್ಕರ್ಷಗಳಿಂದ ಹಿಂದೂ ಧರ್ಮದಲ್ಲಿ ಅಡುಗೆಯ ಆಚಾರ ಗಳ ಕುರಿತು ಹಾಕಿಕೊಟ್ಟಿರುವ ನಿಯಮಗಳು, ಹಾಗೆಯೇ ಹೇಳಿದ ಇತರ ಅಂಶಗಳು ಎಷ್ಟು ಯೋಗ್ಯವಾಗಿವೆ, ಹಾಗೆಯೇ ಅವು ಇಂದಿನ ಆಧುನಿಕ ಕಾಲದಲ್ಲಿಯೂ ಎಷ್ಟು ಸರಿಯಾಗಿಯೇ ಅನ್ವಯಿಸುತ್ತವೆ, ಎಂಬುದು ಗಮನಕ್ಕೆ ಬರುತ್ತದೆ. ಇಂತಹ ಒಂದು ಸಂಶೋಧನೆಯನ್ನು ಮುಂದೆ ಕೊಡಲಾಗಿದೆ.

ಸಾಮಾನ್ಯ ಗೃಹಿಣಿಯು ಪ್ರತಿನಿತ್ಯ ಅಡುಗೆಯನ್ನು ಮಾಡುವಾಗ ಚಪಾತಿ, ಪಲ್ಯ, ಸಾರು, ಅನ್ನ, ಚಟ್ನಿ, ಕೊಸಂಬರಿ ಈ ಪದಾರ್ಥಗಳನ್ನು ತಯಾರಿಸುತ್ತಾಳೆ. ಪೇಟೆಯಿಂದ ಅಡುಗೆಗಾಗಿ ಬೇಕಾಗುವ ಧಾನ್ಯ, ತರಕಾರಿ ಇತ್ಯಾದಿಗಳನ್ನು ಮನೆಯಲ್ಲಿ ತಂದನಂತರ ಅವುಗಳನ್ನು ಆರಿಸುವುದು, ಸ್ವಚ್ಛ ಮಾಡುವುದು ಇತ್ಯಾದಿ ಕೃತಿಗಳನ್ನು ಅವಳು ನಿತ್ಯನೇಮದಿಂದ ಮಾಡುತ್ತಿರುತ್ತಾಳೆ. ಆಹಾರ ಪದಾರ್ಥಗಳನ್ನು ತಯಾರಿಸುವಾಗ ಮಾಡಲಾಗುವ ಕೃತಿಗಳಿಂದ ಆ ಆಹಾರಪದಾರ್ಥಗಳ ಮೇಲೆ ಪರಿಣಾಮವಾಗುತ್ತದೆ. ಆದುದರಿಂದ ತರಕಾರಿಗಳನ್ನು ಹೆಚ್ಚುವುದು, ಮುರಿಯುವುದು, ಬೇಯಿಸುವುದು ಇಂತಹ ಎಲ್ಲ ಕೃತಿಗಳನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಯೋಗ್ಯ ಪದ್ಧತಿಯಿಂದ ಮಾಡುವುದು ಆವಶ್ಯಕವಾಗಿದೆ.
ಇತ್ತೀಚೆಗೆ ತರಕಾರಿಗಳನ್ನು ಹೆಚ್ಚಲು ಅನೇಕ ಗೃಹಿಣಿಯರು ಚಾಕುವನ್ನು ಉಪಯೋಗಿಸುತ್ತಾರೆ, ಕೆಲವರು ಈಳಿಗೆಮಣೆಯನ್ನು ಉಪಯೋಗಿಸುತ್ತಾರೆ. ಕೆಲವು ತರಕಾರಿಗಳನ್ನು ಕೈಯಿಂದ ಮುರಿಯ ಬಹುದು, ಉದಾ. ಅವರೆಕಾಯಿ ಮುಂತಾದವುಗಳು. ‘ತರಕಾರಿಗಳನ್ನು ಹೆಚ್ಚಲು ಚಾಕು ಅಥವಾ ಈಳಿಗೆಮಣೆಯನ್ನು ಉಪಯೋಗಿಸುವುದು ಅಥವಾ ತರಕಾರಿಗಳನ್ನು ಕೈಯಿಂದ ಮುರಿಯುವುದು ಈ ಕೃತಿಗಳಿಂದ ತರಕಾರಿಗಳ ಮೇಲೆ, ಹಾಗೆಯೇ ಅವುಗಳನ್ನು ಹೆಚ್ಚುವವರ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ಏನು ಪರಿಣಾಮವಾಗುತ್ತದೆ ?, ಎಂಬುದರ ಅಧ್ಯಯನಕ್ಕಾಗಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರದ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಹೆಚ್ಚಿನ ಗೃಹಿಣಿಯರು ತರ ಕಾರಿಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತರುತ್ತಾರೆ. ಕೆಲವು ಗೃಹಿಣಿಯರು ಮನೆಯ ಹಿಂದಿನ ಖಾಲಿ ಜಾಗದಲ್ಲಿ (ಹಿತ್ತಲಿನಲ್ಲಿ), ಇನ್ನು ಕೆಲವರು ಅಡುಗೆಮನೆಯ ಹತ್ತಿರ ಇರುವ ಚಿಕ್ಕ ಬಾಲ್ಕನಿಯಲ್ಲಿ ಕೆಲವೊಂದು ತರಕಾರಿಗಳನ್ನು ಬೆಳೆಸುತ್ತಾರೆ. ಈ ಪರೀಕ್ಷಣೆಗಾಗಿ ಓರ್ವ ಸಾಧಕಿಯ ಅಪ್ತರ ಮನೆಯ ಹಿತ್ತಲಿನಲ್ಲಿ ಬೆಳೆಸಿದ್ದ ಅವರೆಕಾಯಿ ಗಳನ್ನು ತೆಗೆದುಕೊಳ್ಳಲಾಯಿತು. ತುಲನೆಗಾಗಿ ಪೇಟೆಯಿಂದ ಖರೀದಿಸಿ ತಂದ ಅವರೆಕಾಯಿಗಳ ನಿರೀಕ್ಷಣೆಯನ್ನೂ ಮಾಡಲಾಯಿತು.

೨. ಪೇಟೆಯಲ್ಲಿನ ಅವರೆಕಾಯಿಗಳಲ್ಲಿ ತುಂಬಾ ನಕಾರಾತ್ಮಕ ಊರ್ಜೆ ಮತ್ತು ಮನೆಯಲ್ಲಿ ಬೆಳೆದ ಅವರೆಕಾಯಿಗಳಲ್ಲಿ ತುಂಬಾ ಸಕಾರಾತ್ಮಕ ಊರ್ಜೆ ಇರುವುದು

ಪೇಟೆಯಲ್ಲಿನ ಅವರೆಕಾಯಿಗಳಲ್ಲಿ ಸಕಾರಾ ತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಆದರೆ ೧೨ ರಿಂದ ೧೬ ಮೀಟರ್, ಅಂದರೆ ತುಂಬಾ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಇತ್ತು. ಬದಲಾಗಿ ಮನೆಯ ಹಿತ್ತಲಿನಲ್ಲಿನ ಅವರೆ ಕಾಯಿಗಳಲ್ಲಿ ನಕಾರಾತ್ಮಕ ಊರ್ಜೆಯೇ ಇರಲಿಲ್ಲ, ಅಲ್ಲದೇ ೭.೨೨ ಮೀಟರ್, ಅಂದರೆ ತುಂಬಾ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇತ್ತು. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಪೇಟೆಯಿಂದ ತಂದಿರುವ ಇತರ ಕೆಲವು ತರಕಾರಿಗಳನ್ನೂ ಸಹ, ಉದಾ. ಈರುಳ್ಳಿ, ಆಲೂಗಡ್ಡೆ, ಸೌತೆಕಾಯಿ, ಟೊಮೆಟೊ, ಹಸಿಸುಂಟಿ, ಬೆಳ್ಳುಳ್ಳಿ, ಪಾಲಕ ಇತ್ಯಾದಿಗಳ ನಿರೀಕ್ಷಣೆಗಳನ್ನೂ ಮಾಡಲಾಗಿದೆ. ಈ ನಿರೀಕ್ಷಣೆ ಗಳಿಂದ ಪೇಟೆಯಲ್ಲಿನ ತರಕಾರಿಗಳಲ್ಲಿ ೪ ರಿಂದ ೧೧ ಮೀಟರ್ ನಕಾರಾತ್ಮಕ ಊರ್ಜೆ, ೦.೮ ರಿಂದ ೨ ಮೀಟರ್ ಸಕಾರಾತ್ಮಕ ಊರ್ಜೆ ಇರುವುದು ಕಂಡು ಬಂದಿತು. ಅಲ್ಲದೇ ಆ ತರಕಾರಿಗಳನ್ನು ಚಾಕುವಿನಿಂದ ಕೊಯ್ದ ನಂತರ ಅವುಗಳಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗಿ ಅವುಗಳಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆ ಅಥವಾ ಇಲ್ಲವಾಗಿರುವುದು ಕಂಡು ಬಂದಿತು.

೨ ಅ. ವಿಶ್ಲೇಷಣೆ : ಪೇಟೆಯಲ್ಲಿನ ತರಕಾರಿಗಳಲ್ಲಿ ನಕಾರಾತ್ಮಕ ಊರ್ಜೆ ಹೆಚ್ಚು ಪ್ರಮಾಣದಲ್ಲಿ ಕಂಡುಬರಲು ವಿವಿಧ ಕಾರಣಗಳಿವೆ, ಉದಾ. ಪೇಟೆಯಲ್ಲಿನ ವಾತಾವರಣ ರಜ-ತಮಪ್ರಧಾನ ಇರುವುದು, ತರಕಾರಿಗಳನ್ನು ಸಂಗ್ರಹಿಸುವ ಸ್ಥಳ, ತರಕಾರಿಗಳನ್ನು ನಿರ್ವಹಿಸುವ ಪದ್ಧತಿ ಸರಿ ಇಲ್ಲದಿರುವುದು ಮುಂತಾದವುಗಳು. ಇವು ಗಳಿಂದ ಪೇಟೆಯಲ್ಲಿನ ತರಕಾರಿಗಳು ರಜ-ತಮದಿಂದ ತುಂಬಿಕೊಳ್ಳುತ್ತವೆ, ಹಾಗೆಯೇ ಅವುಗಳ ಸುತ್ತಲೂ ತೊಂದರೆದಾಯಕ ಸ್ಪಂದನಗಳ ಆವರಣ ನಿರ್ಮಾಣವಾಗುತ್ತದೆ. ತರಕಾರಿಗಳ ಮೇಲಿನ ತೊಂದರೆದಾಯಕ ಆವರಣವನ್ನು ದೂರಗೊಳಿಸಲು ಅವುಗಳನ್ನು ಮನೆಗೆ ತಂದನಂತರ ಕೈಯಿಂದ ಬಿಡಿಸುವುದು, ನೀರಿನಿಂದ ತೊಳೆದು ಸ್ವಚ್ಛ ಮಾಡುವುದು ಇದರೊಂದಿಗೆ ಅವುಗಳ ಮೇಲೆ ವಿಭೂತಿ ಊದುವುದು ಅಥವಾ ವಿಭೂತಿಯ ನೀರಿನಿಂದ ಸ್ವಚ್ಛ ಮಾಡುವುದು ಇತ್ಯಾದಿ ಕೃತಿಗಳನ್ನು ಮಾಡಬೇಕು, ಈ ಕೃತಿಗಳನ್ನು ಮಾಡುವಾಗ ಪ್ರಾರ್ಥನೆ ಮತ್ತು ನಾಮಜಪ ಮಾಡುವುದು ಮಹತ್ವದ್ದಾಗಿದೆ. ಇದರಿಂದ ತರಕಾರಿಗಳು ಸ್ಥೂಲದಲ್ಲಿ ಸ್ವಚ್ಛವಾಗುವವು, ಹಾಗೆಯೇ ಅವುಗಳ ಮೇಲಿನ ಆವರಣ ದೂರವಾಗಿ ಅವು ನಮ್ಮ ಆರೋಗ್ಯಕ್ಕಾಗಿ ಹಿತಕರವಾಗುವವು.

೩. ಅವರೆಕಾಯಿಗಳನ್ನು ವಿವಿಧ ರೀತಿಯಲ್ಲಿ ಹೆಚ್ಚಿದ್ದರಿಂದ ಅವುಗಳ ಮೇಲಾದ ಪರಿಣಾಮ

ಈ ಪರೀಕ್ಷಣೆಯಲ್ಲಿ ಸಾಧಕಿಯು ಮನೆಯ ಹಿತ್ತಲಿನಲ್ಲಿನ ಅವರೆಕಾಯಿಗಳನ್ನು ಮುಂದಿನ ೩ ಪದ್ಧತಿಯಿಂದ ಹೆಚ್ಚಿದ ನಂತರ ಆ ತರಕಾರಿಗಳ ಪರೀಕ್ಷಣೆಯನ್ನು ಮಾಡಲಾಯಿತು.

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ

ಅ. ಚಾಕುವಿನಿಂದ ಕೊಯ್ದ ಅವರೆಕಾಯಿಗಳಲ್ಲಿ ತುಂಬಾ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಮತ್ತು ಅತ್ಯಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು.

ಆ. ಈಳಿಗೆಮಣೆಯಿಂದ ಹೆಚ್ಚಿದ ಅವರೆಕಾಯಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಮತ್ತು ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು.

ಇ. ಕೈಯಿಂದ ಮುರಿದ ಅವರೆಕಾಯಿಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ, ಅವು ಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಸಕಾರಾತ್ಮಕ ಊರ್ಜೆ ಕಂಡುಬಂದಿತು.
ಇದರಿಂದ ‘ತರಕಾರಿಗಳನ್ನು ಚಾಕುವಿನಿಂದ ಕೊಯ್ಯುವುದಕ್ಕಿಂತ ಈಳಿಗೆಮಣೆಯಿಂದ ಹೆಚ್ಚು ವುದು ಅಥವಾ ಕೈಯಿಂದ ಮುರಿಯುವುದು ಲಾಭದಾಯಕವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ.

೩ ಅ. ವಿಶ್ಲೇಷಣೆ : ತರಕಾರಿಗಳನ್ನು ಹೆಚ್ಚುವ ಕೃತಿಯನ್ನು ಮಾಡುವಾಗ ಉಂಟಾಗುವ ನಾದ ದಿಂದ ವಾಯುಮಂಡಲದಲ್ಲಿ ತೊಂದರೆದಾಯಕ ಸ್ಪಂದನಗಳು ನಿರ್ಮಾಣವಾಗುತ್ತವೆ. ಆದುದರಿಂದ ತರಕಾರಿಗಳು ತೊಂದರೆದಾಯಕ ಸ್ಪಂದನಗಳಿಂದ ತುಂಬಿಕೊಳ್ಳುತ್ತವೆ. ಇದಕ್ಕಾಗಿ ತರಕಾರಿಗಳನ್ನು ಹೆಚ್ಚುವಾಗ ಪ್ರಾರ್ಥನೆ ಮತ್ತು ನಾಮಜಪವನ್ನು ಮಾಡುತ್ತಾ ಹಾಗೂ ಸಾತ್ತ್ವಿಕ ಪದ್ಧತಿಯಿಂದ (ಟಿಪ್ಪಣಿ) ಹೆಚ್ಚುವುದು ಆವಶ್ಯಕವಾಗಿದೆ.

ಟಿಪ್ಪಣಿ – ಸಾತ್ತ್ವಿಕ ಪದ್ಧತಿಯಿಂದ ತರಕಾರಿಗಳನ್ನು ಹೆಚ್ಚುವುದೆಂದರೆ ತರಕಾರಿಗಳನ್ನು ಹೆಚ್ಚುವಾಗ ಅವುಗಳ ಹೋಳುಗಳ ಆಕಾರ ಹೇಗಿರಬೇಕು ಮತ್ತು ಎಷ್ಟಿರಬೇಕು ? ತರಕಾರಿ ದುಂಡಗೆ, ಉದ್ದ ಅಥವಾ ಡೊಂಕ ಆಕಾರದಲ್ಲಿ ಹೆಚ್ಚುವುದರಿಂದ ಪಲ್ಯದ ಮೇಲೆ ಹಾಗೆಯೇ ಅದನ್ನು ಸೇವಿಸುವವರ ಮೇಲಾಗುವ ಪರಿಣಾಮ ಇತ್ಯಾದಿಗಳ ಸಂದರ್ಭದಲ್ಲಿನ ಸಂಶೋಧನೆ ಯನ್ನು ಇತರ ಲೇಖನಗಳಲ್ಲಿ ಕೊಡಲಾಗಿದೆ.

೪. ವಿವಿಧ ಪದ್ಧತಿಯಿಂದ ಅವರೆಕಾಯಿಗಳನ್ನು ಹೆಚ್ಚಿದ ನಂತರ ಸಾಧಕಿಯ ಮೇಲೆ ಆಗಿರುವ ಪರಿಣಾಮ

ಅವರೆಕಾಯಿಗಳನ್ನು ವಿವಿಧ ಪದ್ಧತಿಗಳಿಂದ ಹೆಚ್ಚುವ ಮೊದಲು ಮತ್ತು ಹೆಚ್ಚಿದ ನಂತರ ಸಾಧಕಿಯ ಪರೀಕ್ಷಣೆಗಳನ್ನು ಮಾಡಲಾಯಿತು.

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು

ಅ. ಸಾಧಕಿ ಅವರೆಕಾಯಿಗಳನ್ನು ಚಾಕುವಿನಿಂದ ಕೊಯ್ದ ನಂತರ ಅವುಗಳಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಶೇ. ೨೫ ಕ್ಕಿಂತಲೂ ಹೆಚ್ಚಾಗಿ, ಅವುಗಳಲ್ಲಿನ ಸಕಾರಾತ್ಮಕ ಊರ್ಜೆ ಶೇ. ೪೦ ಕ್ಕಿಂತಲೂ ಕಡಿಮೆಯಾಯಿತು.

ಅ ೧. ವಿಶ್ಲೇಷಣೆ : ತರಕಾರಿಗಳನ್ನು ಚಾಕುವಿನಿಂದ ಕೊಯ್ಯುವಾಗ ಚಾಕು ವನ್ನು ಮುಂದಿನಿಂದ ಹಿಂದೆ ಎಳೆದು ಕೊಯ್ಯಲಾಗುತ್ತದೆ. ಅದರಿಂದ ನಿರ್ಮಾಣವಾಗುವ ತೊಂದರೆದಾಯಕ ಸ್ಪಂದನಗಳಿಂದ ವಾಯುಮಂಡಲವು ಕಲುಷಿತವಾಗುತ್ತದೆ, ಹಾಗೆಯೇ ಚಾಕು ವಿನಿಂದ ತರಕಾರಿಗಳನ್ನು ಕೊಯ್ಯುವಾಗ ಅವುಗಳನ್ನು ಹೆಚ್ಚಾಗಿ ನಿಂತುಕೊಂಡು ಕೊಯ್ಯುವುದರಿಂದ ತರಕಾರಿಗಳನ್ನು ಕೊಯ್ಯು ವಾಗ ವ್ಯಕ್ತಿಯ ದೇಹದ ಯಾವುದೇ ಸಂರಕ್ಷಣೆಯ ಮುದ್ರೆ ನಿರ್ಮಾಣವಾಗುವುದಿಲ್ಲ. ಆದುದರಿಂದ ಅವಳ ಮನಸ್ಸಿನ ರಜೋಗುಣಿ ವಿಚಾರಗಳಿಗೆ ವೇಗ ಪ್ರಾಪ್ತವಾಗುತ್ತದೆ. ತರಕಾರಿಗಳನ್ನು ಹೆಚ್ಚುವವರ ಮೇಲೆ ಇದರಿಂದ ವಿಪರೀತ ಪರಿಣಾಮವಾಗುತ್ತದೆ.

ಆ. ಅವರೆಕಾಯಿಗಳನ್ನು ಈಳಿಗೆಮಣೆಯಿಂದ ಹೆಚ್ಚಿದ ನಂತರ ಸಾಧಕಿಯಲ್ಲಿನ ನಕಾರಾತ್ಮಕ ಊರ್ಜೆ ಶೇ. ೮೦ ರಷ್ಟು ಕಡಿಮೆಯಾಗಿ ಅವಳಲ್ಲಿನ ಸಕಾರಾತ್ಮಕ ಊರ್ಜೆ ಶೇ. ೨೫ ರಷ್ಟು ಹೆಚ್ಚಾಯಿತು.

ಆ ೧. ವಿಶ್ಲೇಷಣೆ : ತರಕಾರಿಗಳನ್ನು ಹೆಚ್ಚುವಾಗ ಈಳಿಗೆಮಣೆಯ ಮೇಲೆ ಕುಳಿತು, ಬಲಮೊಣಕಾಲನ್ನು ಹೊಟ್ಟೆಯ ಹತ್ತಿರ, ಅಂದರೆ ಮೇಲೆ ತೆಗೆದುಕೊಂಡು ತರಕಾರಿಗಳನ್ನು ಹೆಚ್ಚುತ್ತಾರೆ. ಈಳಿಗೆಮಣೆಯ ಮೇಲೆ ಬಲಮಂಡಿಯನ್ನು ಮೇಲೆ ತೆಗೆದು ಕೊಂಡು ಕುಳಿತುಕೊಳ್ಳುವುದರಿಂದ ಆಗುವ ಮುದ್ರೆಯಿಂದ ಸ್ತ್ರೀಯರ ರಜೋಗುಣಿ ವಿಚಾರಗಳ ಮೇಲೆ ನಿಯಂತ್ರಣ ಬಂದು ತರಕಾರಿಗಳನ್ನು ಹೆಚ್ಚುವ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ದಾಯಕ ಸ್ಪಂದನಗಳು ನಿರ್ಮಾಣವಾಗುವುದಿಲ್ಲ. ತರಕಾರಿಗಳನ್ನು ಹೆಚ್ಚುವಾಗ ಯಾವಾಗಲೂ ಮೇಲಿನಿಂದ ಕೆಳಗಿನ ದಿಶೆಯಲ್ಲಿ ಹೆಚ್ಚಬೇಕು, ಇದರಿಂದ ತರಕಾರಿಗಳನ್ನು ಹೆಚ್ಚುವ ನಾದದಿಂದ ಉತ್ಪನ್ನವಾಗುವ ತೊಂದರೆದಾಯಕ ಸ್ಪಂದನಗಳು ಭೂಮಿಯಲ್ಲಿ ಕೂಡಲೇ ವಿಸರ್ಜನೆಯಾಗುತ್ತವೆ.

ಇ. ಅವರೆಕಾಯಿಗಳನ್ನು ಕೈಯಿಂದ ಮುರಿದ ನಂತರ ಸಾಧಕಿ ಯಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ, ಅವಳಲ್ಲಿನ ಸಕಾರಾತ್ಮಕ ಊರ್ಜೆ ಶೇ. ೩೦ ರಷ್ಟು ಹೆಚ್ಚಾಯಿತು.

ಇ ೧. ವಿಶ್ಲೇಷಣೆ : ಚಾಕುವಿನಿಂದ ತರಕಾರಿಗಳನ್ನು ಕೊಯ್ಯುವಾಗ ಯಾವ ರೀತಿಯ ತೊಂದರೆದಾಯಕ ಸ್ಪಂದನಗಳು ನಿರ್ಮಾಣ ವಾಗುತ್ತವೆಯೋ, ಹಾಗೆ ಕೈಯಿಂದ ತರಕಾರಿಗಳನ್ನು ಮುರಿಯು ವಾಗ ಆಗುವುದಿಲ್ಲ. ಆದುದರಿಂದ ತರಕಾರಿಗಳಲ್ಲಿ, ಹಾಗೆಯೇ ತರಕಾರಿಗಳನ್ನು ಹೆಚ್ಚುವ ವ್ಯಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ವಾಗುವುದಿಲ್ಲ. ಎಲ್ಲ ತರಕಾರಿಗಳನ್ನು ಕೈಯಿಂದ ಮುರಿ ಯಲು ಬರುವುದಿಲ್ಲ. ಕೆಲವೊಂದು ತರಕಾರಿಗಳನ್ನು ಕೈಯಿಂದ ಮುರಿಯ ಬಹುದು. ಆದುದರಿಂದ ಕನಿಷ್ಟಪಕ್ಷ ಕೈಯಿಂದ ಮುರಿಯಲು ಸಾಧ್ಯ ವಿರುವ ತರಕಾರಿಗಳನ್ನು ಅವಶ್ಯ ಕೈಯಿಂದ ಮುರಿಯ ಬೇಕು, ಹಾಗೆಯೇ ಈ ಕೃತಿಯ ಸಮಯದಲ್ಲಿ ಪ್ರಾರ್ಥನೆ ಮತ್ತು ನಾಮ ಜಪವನ್ನು ಮಾಡಬೇಕು.

ಸಂಕ್ಷಿಪ್ತವಾಗಿ ಹೇಳುವುದಾದರೆ ‘ಸ್ತ್ರೀಯರು ಚಾಕುವಿನಿಂದ ತರಕಾರಿಗಳನ್ನು ಕೊಯ್ಯುವ ಬದಲು ಈಳಿಗೆಮಣೆಯಿಂದ ಮೇಲೆ ಹೆಚ್ಚುವುದು ಅಥವಾ ಕೈಯಿಂದ ತರಕಾರಿಗಳನ್ನು ಮುರಿಯುವುದು ಹೆಚ್ಚು ಲಾಭದಾಯಕವಾಗಿದೆ’, ಎಂಬುದು ಇದರಿಂದ ಗಮನಕ್ಕೆ ಬಂದಿತು. ಕೆಲವು ಸ್ತ್ರೀಯರಿಗೆ ಮೊಣಕಾಲು ನೋವು ಅಥವಾ ಇತರ ರೋಗಗಳಿಂದಾಗಿ ಕೆಳಗೆ ಭೂಮಿಯ ಮೇಲೆ ಕುಳಿತು ಈಳಿಗೆಮಣೆಯ ಮೇಲೆ ತರಕಾರಿಗಳನ್ನು ಹೆಚ್ಚಲು ಸಾಧ್ಯವಾಗುವುದಿಲ್ಲ. ಆದುದರಿಂದ ಅವರು ತರಕಾರಿಗಳನ್ನು ನಿಂತುಕೊಂಡು ಚಾಕುವಿನಿಂದ ಕೊಯ್ಯುತ್ತಾರೆ. ಇಂತಹ ಸಮಯದಲ್ಲಿ ಅವರು ಪ್ರಾರ್ಥನೆಯನ್ನು ಮಾಡಿ ನಾಮಜಪ ಮಾಡುತ್ತ ತರಕಾರಿಗಳನ್ನು ಕೊಯ್ಯಬೇಕು; ಇದರಿಂದ ಅವರ ಸುತ್ತಲೂ ನಾಮಜಪದ ಸಂರಕ್ಷಣಾಕವಚ ನಿರ್ಮಾಣವಾಗಿ ತೊಂದರೆದಾಯಕ ಸ್ಪಂದನಗಳಿಂದ ಅವರ ರಕ್ಷಣೆಯಾಗುವುದು. ಯಾರಿಗೆ ಕೆಳಗೆ ಕುಳಿತುಕೊಂಡು ಈಳಿಗೆಮಣೆಯ ಮೇಲೆ ತರಕಾರಿಗಳನ್ನು ಹೆಚ್ಚಲು ಸಾಧ್ಯವಿದೆಯೋ, ಅವರು ಅವಶ್ಯ ಹಾಗೆ ಮಾಡಬೇಕು ಮತ್ತು ಅದರೊಂದಿಗೆ ಪ್ರಾರ್ಥನೆ ಮತ್ತು ನಾಮಜಪವನ್ನೂ ಮಾಡಬೇಕು.’ – ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೪.೮.೨೦೨೨)

ವಿ-ಅಂಚೆ : [email protected]