ದೇವಸ್ಥಾನಗಳಲ್ಲಿ ಪ್ರಸ್ತುತ ಪಡಿಸಿದ ಸಂಗೀತ ಮತ್ತು ನೃತ್ಯಗಳು ಆಧ್ಯಾತ್ಮಿಕ ಪ್ರಗತಿಗೆ ಚಾಲನೆ ನೀಡಬಲ್ಲವು ! – ಸಂಶೋಧನೆಯ ನಿಷ್ಕರ್ಷ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಅಂತರಾಷ್ಟ್ರೀಯ ವೆಬಿನಾರ್‌ನಲ್ಲಿ ಸಂಶೋಧನಾ ಪ್ರಬಂಧದ ಮಂಡನೆ !

ಪ್ರಾಚೀನ ಕಾಲದಲ್ಲಿ ದೇವಸ್ಥಾನಗಳಲ್ಲಿ ದೇವತೆಗಳೆದುರು ಕಲಾವಿದರು ಕಲೆಯನ್ನು ಪ್ರಸ್ತುತ ಪಡಿಸಿದಾಗ ಭಕ್ತರಿಗೆ ಭಾವದ ಅನುಭೂತಿಗಳು ಬರುತ್ತಿದ್ದವು ಮತ್ತು ಅಲ್ಲಿ ಆಯಾ ದೇವತೆಗಳ ತತ್ತ್ವವು ದೊಡ್ಡ ಪ್ರಮಾಣದಲ್ಲಿ ಆಕರ್ಷಿತವಾಗುತ್ತಿತ್ತು. ಆದುದರಿಂದಲೇ ಭಾರತದ ದೇವಸ್ಥಾನಗಳು ಇಡೀ ಸಮಾಜದ ಆಧ್ಯಾತ್ಮಿಕ ಪ್ರಗತಿಯ ಮತ್ತು ಕಲ್ಯಾಣದ ಸಾಧನವಾಗಿದ್ದವು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು, ದೇವಸ್ಥಾನಗಳಲ್ಲಿ ಪ್ರಸ್ತುತ ಪಡಿಸಿದ ಸಂಗೀತ ಮತ್ತು ನೃತ್ಯಗಳು ಆಧ್ಯಾತ್ಮಿಕ ಪ್ರಗತಿಗೆ ಚಾಲನೆ ನೀಡಬಹುದೆಂದು, ಸಂಶೋಧನೆಯ ಮೂಲಕ ತೆಗೆಯಲಾದ ನಿಷ್ಕರ್ಷದಿಂದ ಮಂಡಿಸಿದರು. ಪ್ರಖ್ಯಾತ ಇಂಡೋಲಾಜಿಸ್ಟ್ ಮತ್ತು ನವ ದೆಹಲಿಯ ಭಾರತೀಯ ವಿದ್ಯಾ ಭವನದ ‘ಕೆ.ಎಮ್. ಮುನ್ಶಿ ಸೆಂಟರ್’ನ ಡೀನ್ ಡಾ. ಶಶಿ ಬಾಲಾ ಇವರು ಆಯೋಜಿಸಿದ ಅಂತರಾಷ್ಟ್ರೀಯ ಆನ್‌ಲೈನ್ ಕಾರ್ಯಕ್ರಮದಲ್ಲಿ (ವೆಬಿನಾರ್) ಅವರು ಮಾತನಾಡುತ್ತಿದ್ದರು. ಶ್ರೀ ಶಾನ್ ಕ್ಲಾರ್ಕ್ ಮತ್ತು ಸೌ. ಶ್ವೇತಾ ಕ್ಲಾರ್ಕ್ ಇವರು ‘ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಉತ್ಪತ್ತಿಯಲ್ಲಿ ಭಾರತೀಯ ದೇವಸ್ಥಾನಗಳ ಮಹತ್ವ’ ಈ ಬಗ್ಗೆ ಸಂಶೋಧನಾ ಪ್ರಬಂಧವನ್ನು ಆನ್‌ಲೈನ್ ಮೂಲಕ ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದಾರೆ ಮತ್ತು ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ.

ಶ್ರೀ. ಶಾನ್ ಕ್ಲಾರ್ಕ್ ಮಾತನ್ನು ಮುಂದುವರಿಸುತ್ತಾ, ಒಂದು ಪರೀಕ್ಷಣೆಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಸಾಧಕರು ಒಂದು ಪ್ರಾಚೀನ ಶಿವನ ದೇವಸ್ಥಾನದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯವನ್ನು ಪ್ರಸ್ತುತ ಪಡಿಸಿದರು. ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)ನ್ನು ಬಳಸಿ ಕಲಾವಿದರ, ಶಿವಲಿಂಗ ಮತ್ತು ಭಗವಾನ ಶಿವನ ಪ್ರತಿಮೆ ಇವುಗಳ ಪ್ರಭಾವಲಯಗಳನ್ನು ಅಳೆಯಲಾಯಿತು. ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ ನಂತರ ಈ ಎಲ್ಲರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗಿರುವುದು ಕಂಡು ಬಂದಿತು. ಈ ಸಮಯದಲ್ಲಿ ದೇವತೆಯ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾದುದರಿಂದ ದೇವತೆಯ ಪ್ರತಿಮೆಯ ಪ್ರಭಾವಲಯದಲ್ಲಿ ಎಲ್ಲಕ್ಕಿಂತ ಹೆಚ್ಚು ಹೆಚ್ಚಳವಾಗಿರುವುದು ಕಂಡು ಬಂದಿತು. ಇನ್ನೊಂದು ಪರೀಕ್ಷಣೆಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಓರ್ವ ಸಾಧಕರು ಶ್ರೀ ದುರ್ಗಾದೇವಿಯ ದೇವಸ್ಥಾನ, ಒಂದು ಸಭಾಗೃಹ, ಆಧ್ಯಾತ್ಮಿಕ ಸಂಶೋಧನಾ ಕೇಂದ್ರದ ಸ್ಟುಡಿಯೋ ಮತ್ತು ಆಶ್ರಮದಲ್ಲಿ ಒಂದು ಭಜನೆಯನ್ನು ಹಾಡಿದರು. ಆಶ್ರಮ ಮತ್ತು ದೇವಸ್ಥಾನದಲ್ಲಿನ ಪ್ರಸ್ತುತಿಕರಣದ ಸಮಯದಲ್ಲಿ ಗಾಯಕನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗಿರುವುದು ಕಂಡು ಬಂದಿತು ಮತ್ತು ಸಭಾಗೃಹದಲ್ಲಿನ ಪ್ರಸ್ತುತಿಕರಣದ ಸಮಯದಲ್ಲಿ ಸಕಾರಾತ್ಮಕ ಪ್ರಭಾವಲಯವು ಕಡಿಮೆಯಾಗಿರುವುದು ಕಂಡು ಬಂದಿತು. ಇದರ ಕಾರಣವೇನೆಂದರೆ, ದೇವಸ್ಥಾನಗಳು ಮತ್ತು ಆಶ್ರಮವು ಸಕಾರಾತ್ಮಕ ಊರ್ಜೆಯ ಸ್ರೋತವಾಗಿವೆ ಮತ್ತು ಅಲ್ಲಿ ಭಜನೆಗಳನ್ನು ಹಾಡುವುದರಿಂದ ಸಕಾರಾತ್ಮಕತೆಯು ಹೆಚ್ಚಾಗುತ್ತದೆ, ಮತ್ತು ಸಭಾಗೃಹವನ್ನು ಕೇವಲ ಮನೋರಂಜನೆಗಾಗಿ ಬಳಸಲಾಗುತ್ತದೆ ಎಂದು ಹೇಳಿದರು.