ಲಕ್ಷ್ಮಿಪೂಜೆ (ಅಕ್ಟೋಬರ್ ೨೪)

ನರಕ ಚತುರ್ದಶಿಯಂದು ಶ್ರೀವಿಷ್ಣುವು ಲಕ್ಷ್ಮಿ ಸಹಿತ ಎಲ್ಲ ದೇವತೆಗಳನ್ನು ಬಲಿ ಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ. ಈ ದಿನ ‘ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮಿ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆ ಮಾಡುತ್ತಾರೆ. ಲಕ್ಷ್ಮಿಯ ಪೂಜೆ ಮಾಡುವಾಗ ಒಂದು ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಳ ಕಮಲ ಅಥವಾ ಸ್ವಸ್ತಿಕ ಬಿಡಿಸಿ ಅದರ ಮೇಲೆ ಲಕ್ಷ್ಮಿಯ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಕೆಲವೆಡೆ ಕಲಶದ ಮೇಲೆ ತಾಮ್ರದ ತಟ್ಟೆಯನ್ನಿಟ್ಟು ಅದರ ಮೇಲೆ ಲಕ್ಷ್ಮಿಯ ಮೂರ್ತಿ ಇಡುತ್ತಾರೆ. ಕಲಶದ ಮೇಲೆ ಲಕ್ಷ್ಮಿಯ ಸಮೀಪ ಕುಬೇರನ ಪ್ರತಿಮೆ ಇಡುತ್ತಾರೆ. ಲಕ್ಷ್ಮಿ ಮತ್ತು ಇತರ ದೇವತೆಗಳಿಗೆ ಲವಂಗ, ಏಲಕ್ಕಿ ಮತ್ತು ಸಕ್ಕರೆಯಿಂದ ತಯಾರಿಸಿದ ಹಸುವಿನ ಹಾಲಿನ ಖವೆಯ ನೈವೇದ್ಯ ಅರ್ಪಿಸುತ್ತಾರೆ.