ವಿಭೂತಿಯನ್ನು ಹಚ್ಚಿಕೊಂಡ ನಂತರ ವ್ಯಕ್ತಿಯ ನಕಾರಾತ್ಮಕ ಊರ್ಜೆ ಕಡಿಮೆಯಾಗುವುದು, ಸಕಾರಾತ್ಮಕ ಊರ್ಜೆ ಹೆಚ್ಚಾಗುವುದು ಮತ್ತು ವಿಭೂತಿಯ ಪರಿಣಾಮವು ೩೦ ನಿಮಿಷ ಉಳಿಯುವುದು

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷೆ

ವಿವಿಧ ಧಾರ್ಮಿಕ ವಿಧಿಗಳ ಅಂತರ್ಗತ ಔದುಂಬರ, ಬೇಲ, ಅಶ್ವತ್ಥ ಈ ವೃಕ್ಷಗಳ ಸಮಿಧೆಗಳನ್ನು (ಕಟ್ಟಿಗೆಗಳನ್ನು) ಹಾಗೆಯೇ ತುಪ್ಪ, ಜೇನುತುಪ್ಪ ಇತ್ಯಾದಿ ಸಾತ್ತ್ವಿಕ ದ್ರವ್ಯಗಳ ಹವನವನ್ನು (ವಿಶಿಷ್ಟ ಮಂತ್ರವನ್ನು ಹೇಳಿ ದೇವತೆಗಳಿಗಾಗಿ ದ್ರವ್ಯಗಳನ್ನು ಅಗ್ನಿಗೆ ಅರ್ಪಿಸುವುದು) ಮಾಡಲಾಗುತ್ತದೆ. ಹವನದ ನಂತರ ಹವನಕುಂಡದಲ್ಲಿನ ವಿಭೂತಿಯನ್ನು ಆಜ್ಞಾಚಕ್ರದ ಮೇಲೆ (ಎರಡು ಹುಬ್ಬುಗಳ ಮಧ್ಯದಲ್ಲಿ) ಹಚ್ಚಿಕೊಳ್ಳುತ್ತಾರೆ. ‘ವಿಭೂತಿಯನ್ನು ಆಜ್ಞಾಚಕ್ರದ ಮೇಲೆ ಹಚ್ಚಿಕೊಳ್ಳುವುದರಿಂದ ಹಚ್ಚಿಕೊಳ್ಳುವವರಿಗೆ ಯಾವ ಲಾಭವಾಗುತ್ತದೆ ? ಮತ್ತು ಅದು ಎಷ್ಟು ಸಮಯ ಉಳಿಯುತ್ತದೆ ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ೮.೭.೨೦೨೧ ರಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯು.ಎ.ಎಸ್. (ಯುನಿರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಉಪಯೋಗವನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ‘ಆಧ್ಯಾತ್ಮಿಕ ಸಂಶೋಧನ ಕೇಂದ್ರ’ದ ಹೊಸ ವಾಸ್ತುವಿನಲ್ಲಿ ಮಾಡಲಾದ ವಾಸ್ತುಶಾಂತಿ ವಿಧಿಯ ಹೋಮದ ವಿಭೂತಿಯನ್ನು ಉಪಯೋಗಿಸಲಾಯಿತು. ಪರೀಕ್ಷಣೆಯಲ್ಲಿ ಓರ್ವ ಸಂತರು, ಓರ್ವ ಸಾಧಕ ಮತ್ತು ನಾಲ್ಕು ಜನ ಸಾಧಕಿಯರಿಗೆ ಆಜ್ಞಾಚಕ್ರದ ಮೇಲೆ ಹಚ್ಚಿಕೊಳ್ಳಲು ಕೊಡಲಾಯಿತು. ಅವರು ವಿಭೂತಿಯನ್ನು ‘ಹಚ್ಚಿಕೊಳ್ಳುವ ಮೊದಲು’, ‘ಹಚ್ಚಿಕೊಂಡ ನಂತರ’ ಮತ್ತು ‘ ಹಚ್ಚಿಕೊಂಡು ೩೦ ನಿಮಿಷಗಳ ನಂತರ ಹೀಗೆ ೩ ಸಲ ಎಲ್ಲರ ಯು.ಎ.ಎಸ್.’ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆಯನ್ನು ಮುಂದೆ ನೀಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಶ್ರೀ. ರೂಪೇಶ ರೇಡಕರ

ವಿಭೂತಿಯನ್ನು ಹಚ್ಚಿಕೊಳ್ಳುವುದರಿಂದ ವಿವಿಧ ಪ್ರಕಾರದ ವ್ಯಕ್ತಿಗಳ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡಲು, ಸಾಧ್ಯವಾಗಬೇಕೆಂದು ಆಧ್ಯಾತ್ಮಿಕ ಮಟ್ಟ (ಟಿಪ್ಪಣಿ ೧) ಮತ್ತು ಆಧ್ಯಾತ್ಮಿಕ ತೊಂದರೆ (ಟಿಪ್ಪಣಿ ೨) ಈ ಘಟಕಗಳ ವಿಚಾರ ಮಾಡಿ ಆಯ್ದ ಒಟ್ಟು  ೬ ಜನರ ಮೇಲೆ ಈ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯಲ್ಲಿನ ನಿರೀಕ್ಷಣೆಯನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.

ಟಿಪ್ಪಣಿ ೧ – ಆಧ್ಯಾತ್ಮಿಕ ಮಟ್ಟ : ಒಂದು ವೇಳೆ ಈಶ್ವರನ ಆಧ್ಯಾತ್ಮಿಕ ಮಟ್ಟ ಶೇ. ೧೦೦ ಮತ್ತು ನಿರ್ಜೀವ ವಸ್ತುಗಳ ಮಟ್ಟ ಶೇ. ೧ ಎಂದು ತಿಳಿದುಕೊಂಡರೆ, ಸರ್ವಸಾಮಾನ್ಯ ಮನುಷ್ಯನ ಆಧ್ಯಾತ್ಮಿಕ ಮಟ್ಟ ಶೇ. ೨೦ ಇರುತ್ತದೆ. ಯಾವಾಗ ಸಾಧನೆಯಿಂದ ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟಾಗುತ್ತದೆಯೋ, ಆಗ ಆ ವ್ಯಕ್ತಿಯು ಮಾಯೆಯಿಂದ ಆಲಿಪ್ತನಾಗತೊಡಗುತ್ತಾನೆ. ಅವನ ಮನೋಲಯ ಆರಂಭವಾಗುತ್ತದೆ ಮತ್ತು ವಿಶ್ವಮನಸ್ಸಿನಲ್ಲಿನ ವಿಚಾರಗಳು ಗ್ರಹಣವಾಗತೊಡಗುತ್ತವೆ. ಮೃತ್ಯುವಿನ ನಂತರ ಅವನು ಜನ್ಮ-ಮೃತ್ಯುವಿನ ಚಕ್ರಗಳಿಂದ ಬಿಡುಗಡೆಯಾಗಿ ಅವನಿಗೆ ಮಹರ್ಲೋಕದಲ್ಲಿ ಸ್ಥಾನ ಪ್ರಾಪ್ತವಾಗುತ್ತದೆ. ಆಧ್ಯಾತ್ಮಿಕ ಮಟ್ಟ ಶೇ. ೭೦ ಕ್ಕಿಂತ ಹೆಚ್ಚು ಇರುವವರಿಗೆ ‘ಸಂತ’ರೆಂದು ಹೇಳಲಾಗುತ್ತದೆ.

ಟಿಪ್ಪಣಿ ೨ – ಆಧ್ಯಾತ್ಮಿಕ ತೊಂದರೆ : ಆಧ್ಯಾತ್ಮಿಕ ತೊಂದರೆ ಇರುವುದು, ಅಂದರೆ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೩೦ ಕ್ಕಿಂತ ಕಡಿಮೆ ಇರುವುದು, ಅಂದರೆ ಮಂದ ಆಧ್ಯಾತ್ಮಿಕ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ. ೪೯ ಇರುವುದು, ಅಂದರೆ ಮಧ್ಯಮ ತೊಂದರೆ ಮತ್ತು ಶೇ. ೫೦ ಅಥವಾ ಅದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿರುವುದು ಅಂದರೆ ತೀವ್ರ ತೊಂದರೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ ಮತ್ತು ಪೂರ್ವಜರ ತೊಂದರೆ ಮುಂತಾದ ಆಧ್ಯಾತ್ಮಿಕ ಕಾರಣಗಳಿಂದಾಗುತ್ತದೆ. ಆಧ್ಯಾತ್ಮಿಕ ತೊಂದರೆಗಳ ಪರಿಹಾರವನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ತಿಳಿಯಬಲ್ಲ ಸಾಧಕರು ಮಾಡುತ್ತಾರೆ.

೨. ವಿಭೂತಿಯನ್ನು ಹಚ್ಚಿಕೊಂಡ ನಂತರ ವ್ಯಕ್ತಿಯ ನಕಾರಾತ್ಮಕ ಊರ್ಜೆ ಕಡಿಮೆಯಾಗುವುದು ಮತ್ತು ಸಕಾರಾತ್ಮಕ ಊರ್ಜೆ ಹೆಚ್ಚಾಗುವುದು

 ಕೊಟ್ಟಿರುವ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

ಅ. ಓರ್ವ ಸಂತರು ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ಇಬ್ಬರು ಸಾಧಕಿಯರಲ್ಲಿ ನಕಾರಾತ್ಮಕ ಊರ್ಜೆಯು ವಿಭೂತಿಯನ್ನು ಹಚ್ಚಿದ ನಂತರ ಸಂಪೂರ್ಣ ನಾಶವಾಯಿತು, ಹಾಗೆಯೇ ಅದನ್ನು ಹಚ್ಚಿದ ೩೦ ನಿಮಿಷಗಳ ನಂತರವೂ ನಕಾರಾತ್ಮಕ ಊರ್ಜೆ ಹೆಚ್ಚಾಗಲಿಲ್ಲ.

ಆ. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ೩ ಜನರಲ್ಲಿನ ನಕಾರಾತ್ಮಕ ಊರ್ಜೆ ವಿಭೂತಿಯನ್ನು ಹಚ್ಚಿದ ನಂತರ ಬಹಳ ಕಡಿಮೆಯಾಯಿತು ಮತ್ತು ಅದನ್ನು ಹಚ್ಚಿಕೊಂಡು ೩೦ ನಿಮಿಷಗಳಾದ ನಂತರ ಸ್ವಲ್ಪ ಹೆಚ್ಚಾಯಿತು.

ಇ. ಎಲ್ಲರ ಸಕಾರಾತ್ಮಕ ಊರ್ಜೆಯು ವಿಭೂತಿಯನ್ನು ಹಚ್ಚಿಕೊಂಡ ನಂತರ ಬಹಳ ಹೆಚ್ಚಾಯಿತು ಮತ್ತು ಅದನ್ನು ಹಚ್ಚಿಕೊಂಡ ೩೦ ನಿಮಿಷಗಳ ನಂತರ ಸ್ವಲ್ಪ ಕಡಿಮೆಯಾಯಿತು.

೩. ಆಧ್ಯಾತ್ಮಿಕ ತೊಂದರೆ ಇಲ್ಲದ ಮತ್ತು ಆಧ್ಯಾತ್ಮಿಕ ಮಟ್ಟ ಹೆಚ್ಚಿರುವ ವ್ಯಕ್ತಿಯು ವಿಭೂತಿಯಲ್ಲಿನ ಚೈತನ್ಯವನ್ನು ಹೆಚ್ಚು ಪ್ರಮಾಣದಲ್ಲಿ ಗ್ರಹಣ ಮಾಡಬಹುದು ಮತ್ತು ಅದನ್ನು ತನ್ನಲ್ಲಿ ಹೆಚ್ಚು ಸಮಯ ಉಳಿಸಿಡಬಹುದು

ಸಾತ್ತ್ವಿಕ ವೃಕ್ಷಗಳ ಸಮಿಧೆಗಳು (ಕಟ್ಟಿಗೆಗಳು), ತುಪ್ಪ ಮುಂತಾದ ಸಾತ್ತ್ವಿಕ ದ್ರವ್ಯಗಳನ್ನು ವಿಶಿಷ್ಟ ಮಂತ್ರಗಳನ್ನು ಹೇಳಿ ಹವನಕುಂಡದಲ್ಲಿನ ಅಗ್ನಿಗೆ ಅರ್ಪಣೆ ಮಾಡಿದಾಗ ಕಟ್ಟಿಗೆ ಮತ್ತು ದ್ರವ್ಯಗಳು ಉರಿದು ಕೊನೆಗೆ ಉಳಿದ ಬೂದಿಗೆ ‘ಭಸ್ಮ’ ಅಥವಾ ‘ವಿಭೂತಿ’ ಎಂದು ಹೇಳುತ್ತಾರೆ. ವಿಭೂತಿಯಲ್ಲಿ ಚೈತನ್ಯವಿರುತ್ತದೆ. ಅದು ವ್ಯಕ್ತಿಗೆ ಸಿಗಬೇಕೆಂದು ವಿಭೂತಿಯನ್ನು ಆಜ್ಞಾಚಕ್ರದ ಮೇಲೆ ಹಚ್ಚಿಕೊಳ್ಳುತ್ತಾರೆ. ಸಂತರು ಮತ್ತು ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕಿಯರಿಗೆ ವಿಭೂತಿಯಲ್ಲಿನ ಚೈತನ್ಯದ ಹೆಚ್ಚು ಲಾಭವಾಯಿತು ಮತ್ತು ವಿಭೂತಿಯನ್ನು ಹಚ್ಚಿಕೊಂಡು ೩೦ ನಿಮಿಷಗಳ ನಂತರವೂ ಅವರಲ್ಲಿನ ನಕಾರಾತ್ಮಕ ಊರ್ಜೆಯು ಹೆಚ್ಚಾಗಲಿಲ್ಲ. ತದ್ವಿರುದ್ಧ ಆಧ್ಯಾತ್ಮಿಕ ತೊಂದರೆ ಇರುವ ವ್ಯಕ್ತಿಗಳಲ್ಲಿನ ನಕಾರಾತ್ಮಕ ಊರ್ಜೆಯು ವಿಭೂತಿಯನ್ನು ಹಚ್ಚಿಕೊಂಡ ನಂತರ ಬಹಳ ಕಡಿಮೆಯಾಯಿತು; ಆದರೆ ಅದನ್ನು ಹಚ್ಚಿಕೊಂಡ ೩೦ ನಿಮಿಷಗಳ ನಂತರ ಅದು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಇದರ ಕಾರಣ ‘ಆಧ್ಯಾತ್ಮಿಕ ತೊಂದರೆ ಇರುವ ವ್ಯಕ್ತಿಗಳ ತೊಂದರೆಯನ್ನು ಕಡಿಮೆ ಮಾಡಲು ವಿಭೂತಿಯಲ್ಲಿನ ಚೈತನ್ಯವನ್ನು ಬಳಸಲಾಯಿತು.’ ಇದು ಈ ಪರೀಕ್ಷಣೆಯಿಂದ ಗಮನಕ್ಕೆ ಬಂದಿತು. ‘ಆಧ್ಯಾತ್ಮಿಕ ತೊಂದರೆ ಇಲ್ಲದ ಮತ್ತು ಆಧ್ಯಾತ್ಮಿಕ ಮಟ್ಟ ಹೆಚ್ಚಿರುವ ವ್ಯಕ್ತಿಗಳು ವಿಭೂತಿ ಅಥವಾ ಇತರ ಸಾತ್ತ್ವಿಕ ವಸ್ತುಗಳಲ್ಲಿನ ಚೈತನ್ಯವನ್ನು ಹೆಚ್ಚು ಪ್ರಮಾಣದಲ್ಲಿ ಗ್ರಹಿಸಬಹುದು ಮತ್ತು ತಮ್ಮಲ್ಲಿ ಹೆಚ್ಚು ಸಮಯ ಉಳಿಸಿಡಬಹುದು ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.’

– ಶ್ರೀ. ರೂಪೇಶ ಲಕ್ಷ್ಮಣ ರೆಡಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೯.೭.೨೦೨೨)

ವಿ-ಅಂಚೆ : mav.research೨೦೧೪@gmail.com

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.