ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಭ್ರೂಮಧ್ಯದಲ್ಲಿ (ಹಣೆಯ ಮಧ್ಯದಲ್ಲಿ) ದೈವೀ ಚಿಹ್ನೆಗಳು ಮೂಡುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಯಾವಾಗ ಜ್ಞಾನಶಕ್ತಿಯ ಪ್ರವಾಹವುಆಜ್ಞಾಚಕ್ರದಿಂದ ಸಮಷ್ಟಿಯ ಕಡೆಗೆ ಹೋಗುತ್ತದೆಯೋ, ಆಗ ಈ ದೈವೀಪ್ರಕ್ರಿಯೆಯ ಅನುಭವವನ್ನು ನೀಡಲು ಈಶ್ವರೇಚ್ಛೆಯಿಂದ ಆಧ್ಯಾತ್ಮಿಕ ಉನ್ನತರ ಹಣೆಯ ಮೇಲೆ ವಿವಿಧ ರೀತಿಯ ದೈವೀ ಚಿಹ್ನೆಗಳು ಮೂಡುತ್ತವೆ

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮಪತ್ರಿಕೆಯ ಸಂದರ್ಭದಲ್ಲಿನ ವೈಶಿಷ್ಟ್ಯಪೂರ್ಣ ಸಂಶೋಧನೆ !

ಇದರಿಂದ ‘ಪರಾತ್ಪರ ಗುರು ಡಾಕ್ಟರರಿಗೆ ಮಹಾಮೃತ್ಯುಂಜಯ ಯಾಗದಿಂದ ದೊರಕಿದ ಚೈತನ್ಯದಿಂದ ಅವರ ಜನ್ಮಪತ್ರಿಕೆಗಳಲ್ಲಿನ ಆಯಾ ಗ್ರಹಗಳ ಕಲುಷಿತ ಸ್ಪಂದನಗಳ ಪ್ರಭಾವಲಯವು ಸಂಪೂರ್ಣ ಇಲ್ಲವಾಯಿತು. ಆದುದರಿಂದ ಪರಾತ್ಪರ ಗುರು ಡಾಕ್ಟರರ ಮಹಾಮೃತ್ಯು ಯೋಗದಿಂದ ರಕ್ಷಣೆಯಾಯಿತು’, ಎಂಬುದು ಗಮನಕ್ಕೆ ಬಂದಿತು. 

ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ತಿಥಿಗಳಂದು ಕಣ್ಣುಗಳಿಗೆ ಆವರಣ ಬರುವುದರಿಂದ ನಮ್ಮ ತೊಂದರೆಗಳು ಹೆಚ್ಚಾಗಬಾರದೆಂದು ಅದನ್ನು ತಕ್ಷಣ ದೂರ ಮಾಡಿ !

ಅಮಾವಾಸ್ಯೆ ಮತ್ತು ಹುಣ್ಣಿಮೆಯ ತಿಥಿಗಳಲ್ಲಿ ವಾತಾವರಣದಲ್ಲಿ ತೊಂದರೆದಾಯಕ ಶಕ್ತಿಗಳ ಪ್ರಮಾಣವು ಹೆಚ್ಚಾಗಿರುವುದರಿಂದ ನಮ್ಮ ಕಣ್ಣುಗಳು ಆ ಸೂಕ್ಷ್ಮದಲ್ಲಿನ ತೊಂದರೆದಾಯಕ ಸ್ಪಂದನಗಳಿಂದ ಯುಕ್ತವಾಗುತ್ತವೆ, ಅಂದರೆ ಅವುಗಳ ಮೇಲೆ ತೊಂದರೆದಾಯಕ (ಕಪ್ಪು) ಶಕ್ತಿಯ ಆವರಣವು ಬರುತ್ತದೆ.

ಹಿಂದೂ ಬಾಂಧವರೆ, ತಮ್ಮ ಸಂಸ್ಕೃತಿಯನ್ನು ಗೌರವಿಸಿದರೆ, ಇಡೀ ಜಗತ್ತು ನಿಮ್ಮನ್ನು ಗೌರವಿಸುವುದು, ಎಂಬುದನ್ನು ಗಮನದಲ್ಲಿಡಿ ! – ಫ್ರಾನ್ಸುಆ ಗೋತಿಯೆ

‘ಧ್ಯಾನಕ್ಕೆ ‘ಮೆಡಿಟೇಶನ್’ ಮತ್ತು ‘ಪ್ರಾಣಾಯಾಮಕ್ಕೆ ‘ಬ್ರೀದಿಂಗ್ ಎಕ್ಸಾಸೈಸ್’ ಈ ಶಬ್ದಗಳನ್ನು ಉಪಯೋಗಿಸಬೇಡಿ. ಇದರಿಂದ ತಪ್ಪು ಅರ್ಥ ಬರುತ್ತದೆ. ಅದಕ್ಕಾಗಿ ಮೂಲ ಶಬ್ದಗಳನ್ನೆ ಉಪಯೋಗಿಸಬೇಕು. ‘ಯಾರು ತಮ್ಮ ಸಂಸ್ಕೃತಿಯನ್ನು ಗೌರವಿಸುವರೋ, ಅವರನ್ನು ಇಡೀ ಜಗತ್ತು ಗೌರವಿಸುತ್ತದೆ’.

ಅಧ್ಯಾತ್ಮದಲ್ಲಿ ಸ್ತ್ರೀ-ಪುರುಷರಲ್ಲಿ ಯಾವುದೇ ಭೇದವಿಲ್ಲದೇ ಆಧ್ಯಾತ್ಮಿಕ ಪ್ರಗತಿಗಾಗಿ ಇಬ್ಬರಿಗೂ ಸಮಾನ ಅವಕಾಶ !

ಅಧ್ಯಾತ್ಮದಲ್ಲಿ ಲಿಂಗದ ಆಧಾರದಲ್ಲಿ ಭೇದಭಾವವಿರುವುದಿಲ್ಲ. ಅಧ್ಯಾತ್ಮಶಾಸ್ತ್ರದಲ್ಲಿ ಮಾರ್ಗದರ್ಶನ ಮಾಡುವ ಅವಕಾಶ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಸಿಗುತ್ತಿದೆ ಎಂದು ಗಮನಕ್ಕೆ ಬರುತ್ತಿದ್ದರೂ ಆಧ್ಯಾತ್ಮಿಕ ಪ್ರಗತಿಯ ಅವಕಾಶ ಇಬ್ಬರಿಗೂ ಸಮಾನವಾಗಿದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು.

ಗೋ ಪ್ರದಕ್ಷಿಣೆ

ಗೋಮಾತೆಯ ದರ್ಶನದ ನಂತರ  ಅವಳಿಗೆ ನಮಸ್ಕಾರ ಮಾಡಬೇಕು ಹಾಗೂ ಪ್ರದಕ್ಷಿಣೆ ಹಾಕಬೇಕು. ಅದರಿಂದ  ಸಪ್ತದ್ವೀಪ (ಟಿಪ್ಪಣಿ)ವಿರುವ ಪೃಥ್ವಿ ಪ್ರದಕ್ಷಿಣೆಯ ಫಲ ಸಿಗುತ್ತದೆ.

ಎಳನೀರು, ಕಿತ್ತಳೆಯ ರಸ, ಭಾರತೀಯ ಗೋವಿನ ಹಾಲು ಇವುಗಳು ವ್ಯಕ್ತಿಯಲ್ಲಿ ಸಕಾರಾತ್ಮಕತೆ ಹೆಚ್ಚಿಸುತ್ತದೆ  ಹಾಗೂ ‘ವೈನ್’, ‘ವಿಸ್ಕೀ’, ‘ಬಿಯರ್’ ನಕಾರಾತ್ಮಕತೆ ಹೆಚ್ಚಿಸುತ್ತದೆ !

‘ಬಿಯರ್’ನಲ್ಲಿ ಅತಿಹೆಚ್ಚು ನಕಾರಾತ್ಮಕತೆ ಕಂಡುಬಂದಿದೆ. ಅದನ್ನು ಸೇವಿಸಿದ ನಂತರ, ಒಬ್ಬ ವ್ಯಕ್ತಿಯಲ್ಲಿ ನಕಾರಾತ್ಮಕತೆಯು ಸುಮಾರು ಶೇ. ೫೦೦೦ ರಷ್ಟು ಹೆಚ್ಚಾಯಿತು. ಇದರ ನಂತರ ಕ್ರಮವಾಗಿ ‘ಕೆಂಪು ವೈನ್’ನಲ್ಲಿ ನಕಾರಾತ್ಮಕ ಪ್ರಭಾವಳಿ ಕಂಡಿತು.

ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ಉಪಯುಕ್ತ ನಾಮಜಪಗಳ ಧ್ವನಿಮುದ್ರಣವನ್ನು ಖ್ಯಾತ ಗಾಯಕ ಪೂ. ಕಿರಣ ಫಾಟಕ್‌ರಿಂದ ಲೋಕಾರ್ಪಣೆ ಮಾಡುವ ಕಾರ್ಯಕ್ರಮದ ಸೂಕ್ಷ್ಮ ಪರೀಕ್ಷಣೆ !

ಪೂ. ಕಿರಣ ಫಾಟಕ್‌ಕಾಕಾ ರವರ ಮೂಲಕ ಶ್ರೀ ಸ್ವಾಮಿ ಸಮರ್ಥರೇ ನಾಮಜಪವನ್ನು ಲೋಕಾರ್ಪಣೆ ಮಾಡಿದ್ದಾರೆ ಎಂದು ಅನಿಸಿತು. ಪೂ. ಕಾಕಾರವರ ಹಸ್ತಸ್ಪರ್ಶದಿಂದ ಅವರ ದೇಹದ ಚೈತನ್ಯವು ಐ-ಪ್ಯಾಡ್‌ನಲ್ಲಿ ಹೋಗಿ ನಾಮಜಪದಲ್ಲಿನ ಸಾತ್ತ್ವಿಕ ಧ್ವನಿಯ ಮೂಲಕ ವಾತಾವರಣದಲ್ಲಿ ಹರಡಿತು. ಅದರಿಂದ ವಾತಾವರಣವು ಚೈತನ್ಯದಾಯಕವಾಯಿತು.

ಶತಮಾನಗಳು ಕಳೆದರೂ ಆದಿಶಂಕರಾಚಾರ್ಯರ ಜನ್ಮಸ್ಥಾನಕ್ಕೆ ಸಂಬಂಧಿಸಿದ ಘಟಕಗಳಲ್ಲಿ ಚೈತನ್ಯಶಕ್ತಿ ಶಾಶ್ವತವಾಗಿರುವುದು

ಆದಿಶಂಕರಾಚಾರ್ಯರು ಓರ್ವ ಶ್ರೇಷ್ಠ ಯತಿ, ಗ್ರಂಥಕರ್ತ, ಅದ್ವೈತ ಮತದ ಪ್ರಚಾರಕ, ಸ್ತೋತ್ರ ರಚನಾಕಾರ ಮತ್ತು ಧರ್ಮ ಸಾಮ್ರಾಜ್ಯದ ಸಂಸ್ಥಾಪಕರಾಗಿದ್ದರು. ಈ ಲೋಕಕಲ್ಯಾಣ ಕಾರ್ಯದಿಂದ ಶಂಕರಾಚಾರ್ಯರು ‘ಜಗದ್ಗುರು’ ಆದರು.

ಅಕ್ಷಯ ತದಿಗೆಯನ್ನು ಆಚರಿಸುವ ಪದ್ಧತಿ

ದೇವರ ಕೃಪಾಶೀರ್ವಾದವು ನಮ್ಮ ಪ್ರಾರಬ್ಧಜನ್ಯ ಸೂಕ್ಷ್ಮ ಕರ್ಮದಲ್ಲಿನ ಪಾಪವನ್ನು ನಾಶಗೊಳಿಸುತ್ತಿರುವುದರಿಂದ ಸೂಕ್ಷ್ಮ ಕರ್ಮಜನ್ಯ ವಾಸನೆಗಳನ್ನು ದೇವರ ಚರಣಗಳಲ್ಲಿ ಈ ದಾನದ ಮೂಲಕ ಅರ್ಪಣೆ ಮಾಡಲಾಗುತ್ತದೆ.