ಗುರು, ಸಂತರು ಮತ್ತು ದೇವರಲ್ಲಿ ಶ್ರದ್ಧೆ ಇರುವ, ೫೩ ಶೇ. ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಮೈಸೂರಿನ ಕು. ಚಿರಂತ ವಿ.ಟಿ. (ವಯಸ್ಸು ೧೪ ವರ್ಷ) !

ಉಚ್ಚ (ಉನ್ನತ)ಲೋಕಗಳಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದಿದ ದೈವಿ (ಸಾತ್ವಿಕ) ಬಾಲಕ ಎಂದರೆ ಹಿಂದೂ ರಾಷ್ಟ್ರ ನಡೆಸುವ ಪೀಳಿಗೆ ! ಕು. ಚಿರಂತ ವಿ.ಟಿ. ಇವನು ಅವರಲ್ಲಿ ಒಬ್ಬನಾಗಿದ್ದಾನೆ !

ಕು. ಚಿರಂತ ವಿ.ಟಿ.

ಕು. ಚಿರಂತ ವಿ.ಟಿ. ಅವರ ತಾಯಿ ಸೌ. ದೀಪಾ ತಿಲಕ ಅವರಿಗೆ ಅವನ ತಿಳಿದಿರುವ ಗುಣವೈಶಿಷ್ಟ್ಯಗಳನ್ನು ಮುಂದೆ ನೀಡಲಾಗಿದೆ.

೧. ಇತರರ ವಿಚಾರ

”ಒಮ್ಮೆ ನನಗೆ ಮಂಗಳೂರಿನಲ್ಲಾ ಗುವ ಶಿಬಿರಕ್ಕೆ ಹೋಗಬೇಕಿತ್ತ್ದು. ಅಲ್ಲಿ ಬಹಳ ಶೆಖೆಯಿದೆ ಮತ್ತು ನನಗೆ ಶೆಕೆ ಸಹಿಸಲು ಆಗುದಿಲ್ಲ; ಆದ್ದರಿಂದ ಚಿರಂತ ಇತರರಿಂದ ಕಲಿತು ನನಗೆ ಒಂದು ಸಣ್ಣ ‘ಬ್ಯಾಟರಿ’ ಚಾಲಿತ ಫ್ಯಾನ ಅನ್ನು ತಯಾರಿಸಿ ಕೊಟ್ಟನು. ಆಗ ಅವನು ೧೦ ವರ್ಷದವನಾಗಿದ್ದನು

೨. ಕಲಿಯುವ ವೃತ್ತಿ

ನನ್ನ ಅತ್ತೆಮಾವನವರಿಗೆ ವಯಸ್ಸಾಗಿದೆ. ಆದ್ದರಿಂದ ನಾನು ಮನೆಯಿಂದ ಹೊರಗೆ ಹೋಗಬೇಕಾದರೆ ಅಡುಗೆ ಇತ್ಯಾದಿ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತಿತ್ತು. ಒಂದು ಬಾರಿ ನನಗೆ ರಾಮನಾಥಿ, ಗೋವಾದ ಆಶ್ರಮದಲ್ಲಿ ಶಿಬಿರಕ್ಕೆ ಹೋಗಬೇಕಾಗಿತ್ತು. ಅದಕ್ಕೂ ಮುನ್ನ ನಾನು ಕು. ಚಿರಂತನಿಗೆ ಅನ್ನ ಮತ್ತು ದೋಸೆ ಮಾಡಲು ಕಲಿಸಿದ್ದೆ. ನಾನು ಶಿಬಿರಕ್ಕೆ ಹೋದ ನಂತರದ ಐದು ದಿನಗಳಿಗೂ, ಅವನು ನಾನು ಹೇಳಿದ ಪ್ರಕಾರ ಎಲ್ಲಾ ಕೆಲಸಗಳನ್ನು ಮಾಡಿದನು.

ಸೌ. ದೀಪಾ ತಿಲಕ

೩. ಸ್ವೀಕಾರ ವೃತ್ತಿ

ಕು. ಚಿರಂತನಿಗೆ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಮೊದಲಿಗೆ ಸ್ವಲ್ಪ ಸಮರ್ಥನೆ ಮಾಡುತ್ತಾನೆ. ನಂತರ, ‘ನೀವು ಸದಾ ನನ್ನ ಒಳ್ಳೆಯದಕ್ಕಾಗಿ ಹೇಳುತ್ತಿರಿ; ಆದ್ದರಿಂದ ನಾನು ಒಪ್ಪುತ್ತೇನೆ’ ಎಂದು ಹೇಳುತ್ತಾನೆ.

೪. ಕನ್ನಡ ಭಾಷೆಯ ಸಾಪ್ತಾಹಿಕ ‘ಸನಾತನ ಪ್ರಭಾತ’ ಬಗ್ಗೆ ವಿಶೇಷ ಆದರ 

ಒಮ್ಮೆ ಚಿರಂತನ ತಂದೆಯವರು ಅವನಿಗೆ ಕನ್ನಡದಲ್ಲಿ ಓದಲು ಸುದ್ದಿಪತ್ರಿಕೆಗಳನ್ನೂ ಕೊಟ್ಟರು ಆಗ ಅವನು, ”ನಾನು ಸಾಪ್ತಾಹಿಕ ‘ಸನಾತನ ಪ್ರಭಾತ’ ಓದುತ್ತೇನೆ. ಇದರಿಂದ ನನಗೆ ಚೈತನ್ಯವೂ ಸಿಗುತ್ತದೆ.” ಎಂದು ಹೇಳಿ ಸಾಪ್ತಾಹಿಕ ‘ಸನಾತನ ಪ್ರಭಾತ’ ಪತ್ರಿಕೆ ಓದಿದನು.

೫. ಸಾಧನೆಯ ಆಸಕ್ತಿ

ನನ್ನ ತಾಯಿಯ ಮನೆ ಕುಣಿಗಲ್‌ನಲ್ಲಿದೆ. ರಜಾದಿನಗಳಲ್ಲಿ ಅಲ್ಲಿಗೆ ಹೋದಾಗ, ನನ್ನ ಸಹೋದರ-ಸಹೋದರಿಯ ಮಕ್ಕಳು ಒಟ್ಟಾಗಿ ಕುಳಿತು ನಾಮಜಪ ಮಾಡುತ್ತಾರೆ. ‘ಆಧ್ಯಾತ್ಮಿಕ ಮಟ್ಟವು ೬೧ ಶೇಕಡಾ ಆದ ನಂತರ ಮತ್ತೆ ಜನ್ಮ ತಾಳಬೇಕಿಲ್ಲ ಎಂಬುದು ಮಕ್ಕಳ ಸಂಭಾಷಣೆಯ ವಿಷಯವಾಗಿರುತ್ತದೆ. ಮುಂದಿನ ಬಾರಿ ರಜಾದಿನಗಳಲ್ಲಿ ಬರುವಾಗ ‘ಚೆನ್ನಾಗಿ ವ್ಯಷ್ಟಿ ಸಾಧನೆ ಮಾಡೋಣ’ ಎಂಬ ಸಂಕಲ್ಪವನ್ನು ಮಕ್ಕಳು ಮಾಡುತ್ತಾರೆ

೬. ಸಂತರ ಬಗ್ಗೆ ಭಾವ

೬ ಅ. ಪೂ. ರಮಾನಂದ ಗೌಡ

೧. ಒಂದು ಬಾರಿ ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಮಷ್ಟಿ ಸಂತ) ಅವರ ನಿವಾಸವ್ಯವಸ್ಥೆ ನಮ್ಮ ಮನೆಯಲ್ಲಿತ್ತು. ಅಲ್ಲಿ ”ಪೂ. ಅಣ್ಣಾ ನಮ್ಮ ಮನೆಯಲ್ಲಿರುತ್ತಾರೆ, ಇದು ನಮ್ಮ ಭಾಗ್ಯ” ಎಂದು ಹೇಳಿ ಅವನು ಅವರ ವ್ಯವಸ್ಥೆಯ ಬಗ್ಗೆ ಪುನಃ ಪುನಃ ”ಇನ್ನು ಏನೇನು ಮಾಡಬಹುದು ?” ಎಂದು ಕೇಳುತ್ತಿದ್ದನು

೨. ಪೂ. ಅಣ್ಣನವರ ಕುರಿತು ಚಿರಂತನಲ್ಲಿ ವಿಶೇಷ ಭಾವ ಇದೆ. ”ಪೂ. ಅಣ್ಣಾ ಹೇಳಕೊಟ್ಟಿದ್ದೆಲ್ಲವೂ ಯೋಗ್ಯ ಇದೆ ಮತ್ತು ಅವರು ಹೇಳಿದ್ದನ್ನೆಲ್ಲ ಮಾಡಬೇಕು” ಎಂದು ಅವನಿಗೆ ಅನಿಸುತ್ತದೆ. ಒಂದು ಸಲ, ಪೂ. ಅಣ್ಣಾ ಅವನಿಗೆ ನಾಮಜಪ ಮಾಡಲು ಹೇಳಿದಾಗ ನಾಮಜಪವನ್ನು ಪೂರ್ಣಗೊಳಿಸಿದನು.

೬ ಆ. ಪೂ. ವಾಮನ ರಾಜಂದೇಕರ : ಒಂದು ಸಲ ಸನಾತನದ ಎರಡನೇ ಬಾಲಸಂತ ಪೂ. ವಾಮನ ರಾಜಂದೇಕರ ಅವರು ನಮ್ಮ ಮನೆಗೆ ಬಂದಿದ್ದರು. ಆಗ  ಚಿರಂತನಿಗೆ ತುಂಬಾ ಭಾವಜಾಗೃತಿಯಾಗಿ ಭಾವಾಶ್ರು ಹರಿದು ಬಂತು.

೬ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ : ಚಿರಂತನಿಗೆ ಬಾಲ್ಯದಿಂದಲೇ ಸಾಧನೆ ಬಹುಮಹತ್ವವಾಗಿದೆ ಎಂದು ಅನಿಸುತ್ತದೆ. ”ಗುರುದೇವರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಸರ್ವೋತ್ತಮರಾಗಿದ್ದಾರೆ!” ಎಂಬ ಶ್ರದ್ಧೆಯಿದೆ. ”ಗುರುದೇವರಿಗೆ ಎಲ್ಲವೂ ಗೊತ್ತಿರುತ್ತದೆÉ” ಎಂದು ಅವನು ಯಾವಾಗಲೂ ಹೇಳುತ್ತಾನೆ. ”ದೇವರಿಗಿಂತ ಗುರು ಶ್ರೇಷ್ಠ ಇದ್ದಾರೆ” ಎಂದು ಅವನಿಗೆ ಅನಿಸುತ್ತದೆ.

– ಸೌ. ದೀಪಾ ತಿಲಕ (ಚಿರಂತನ ತಾಯಿ), ಮರಡಿಯುರು, ಮೈಸೂರು ಜಿಲ್ಲೆ.