ಕೇವಲ ೩ ತಿಂಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರ ಕೋಣೆಯಲ್ಲಿನ ಮೂರ್ತಿಗಳು ಮತ್ತು ಚಿತ್ರಗಳ ಚೈತನ್ಯದಲ್ಲಿ ಗಣನೀಯ ಹೆಚ್ಚಳ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಂಪೂರ್ಣ ಸೃಷ್ಟಿಗೆ ಚೈತನ್ಯವನ್ನು ಪ್ರದಾನಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚೈತನ್ಯಮಯ ದೇವರಕೋಣೆ !

ಹಿಂದೂ ರಾಷ್ಟ್ರ ಸ್ಥಾಪನೆಯಂತಹ (ಈಶ್ವರೀ ರಾಜ್ಯ ಸ್ಥಾಪನೆಯ) ಶ್ರೇಷ್ಠ ಕಾರ್ಯ ಮಾಡುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಮಹರ್ಷಿಗಳು ಹಾಗೂ ಕೆಲವು ಸಂತರು ದೇವತೆಗಳ ಕೆಲವು ಮೂರ್ತಿಗಳನ್ನು ಕೊಟ್ಟಿದ್ದು ಅದನ್ನು ಅವರು ಅತ್ಯಂತ ಭಕ್ತಿಭಾವದಿಂದ ತಮ್ಮ ದೇವರಕೋಣೆಯಲ್ಲಿಟ್ಟಿದ್ದಾರೆ. ಹಿಂದೂ ರಾಷ್ಟ್ರ ಸ್ಥಾಪನೆಯ ಶ್ರೇಷ್ಠ ಸಮಷ್ಟಿ ಕಾರ್ಯದಲ್ಲಿ ದೇವಿದೇವತೆಗಳು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಈ ಕಾರ್ಯಕ್ಕಾಗಿ ಕಾಲಾನುಸಾರ ದೇವತೆಗಳ ತತ್ತ್ವ (ಅಂದರೆ ಆಯಾ ದೇವತೆಯಲ್ಲಿನ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿಯ ಸ್ಪಂದನ) ಎಷ್ಟು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆಯೋ, ಅದಕ್ಕನುಸಾರ ದೇವತೆಗಳ ಮೂರ್ತಿ ಅಥವಾ ಚಿತ್ರದಲ್ಲಿ ಅದರ ಪ್ರತಿಬಿಂಬ ಕಾಣುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ದೇವರ ಕೋಣೆಯಲ್ಲಿನ ದೇವತೆಗಳ ಮೂರ್ತಿ ಮತ್ತು ಚಿತ್ರಗಳ ವಿಷಯದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಲೋಲಕದ (ಪೆಂಡೂಲಮ್) ಮೂಲಕ ಮಾಡಿದ ಸಂಶೋಧನೆಯನ್ನು ಮುಂದೆ ನೀಡಲಾಗಿದೆ. ಲೋಲಕದಿಂದ ವಸ್ತು, ವಾಸ್ತು ಮತ್ತು ವ್ಯಕ್ತಿಯಲ್ಲಿನ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯನ್ನು ಅಳೆಯಬಹುದು.

ಸೌ. ಮಧುರಾ ಧನಂಜಯ ಕರ್ವೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರ ಕೋಣೆಯಲ್ಲಿನ ಮೂರ್ತಿ ಮತ್ತು ಚಿತ್ರಗಳ ನೋಂದಣಿ

ಸಪ್ಟೆಂಬರದ (೨೩.೯.೨೦೨೪ ರ) ತುಲನೆಯಲ್ಲಿ ಡಿಸೆಂಬರದಲ್ಲಿ (೧೩.೧೨.೨೦೨೪ ರಂದು) ದೇವರ ಕೋಣೆಯಲ್ಲಿನ ಮೂರ್ತಿ ಮತ್ತು ಚಿತ್ರಗಳ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ. ಇದು ಮುಂದೆ ನೀಡಿರುವ ನೋಂದಣಿಯಿಂದ ಅರಿವಾಗುತ್ತದೆ.

ಕೋಷ್ಟಕದಲ್ಲಿನ ನೋಂದಣಿಯ ವಿಷಯದಲ್ಲಿ –

೧. ರೀಡಿಂಗ್‌ನಲ್ಲಿ ಏರಿಕೆಯ ಕ್ರಮಕ್ಕನುಸಾರ ದೇವತೆಗಳನ್ನು ಇಡಲಾಗಿದೆ.

೨. ಮೂರ್ತಿ ಮತ್ತು ಚಿತ್ರಗಳಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ದೇವರ ಕೋಣೆಯಲ್ಲಿ ೨೦೨೪ ರಲ್ಲಿನ ಮೂರ್ತಿಗಳು

ಮೇಲಿನ ನೊಂದಣಿಯಿಂದ ಈ ಮುಂದಿನ ಅಂಶಗಳು ಅರಿವಾಗುತ್ತವೆ –

೧. ಕೇವಲ ೩ ತಿಂಗಳಲ್ಲಿ ದೇವರಕೋಣೆಯ ಮೂರ್ತಿಗಳಲ್ಲಿ ಮತ್ತು ಚಿತ್ರಗಳಲ್ಲಿ ಮಾತ್ರವಲ್ಲ, ಪೂಜೆಯಲ್ಲಿನ ಇನ್ನಿತರ ವಸ್ತುಗಳಲ್ಲಿ ಸಹ ಉದಾ. ಘಂಟೆ, ಶಂಖ ಇತ್ಯಾದಿಗಳಲ್ಲಿನ ಚೈತನ್ಯವೂ ಬಹಳ ಹೆಚ್ಚಾಗಿದೆ. ಇದರಿಂದ ‘ಕಾಲಾನುಸಾರ ಹಾಗೂ ಕಾರ್ಯಾನುಸಾರ ವಿವಿಧ ದೇವಿದೇವತೆಗಳ ತತ್ತ್ವ ಅಗಾಧ ಪ್ರಮಾಣದಲ್ಲಿ ಕಾರ್ಯನಿರತ ವಾಗಿದೆ’, ಎಂಬುದು ಅರಿವಾಗುತ್ತದೆ.

೨. ದೇವರಕೋಣೆಯಲ್ಲಿನ ದತ್ತನ ಮೂರ್ತಿ, ಬಾಲಕೃಷ್ಣನ ಮೂರ್ತಿ, ಬೆಳ್ಳಿಯ ಗುರುಪಾದುಕೆ, ಸಂತರ ಛಾಯಾಚಿತ್ರಗಳು, ಶ್ರೀ ಲಕ್ಷ್ಮೀದೇವಿ, ಶ್ರೀರಾಮ ಮತ್ತು ಶ್ರೀ ದುರ್ಗಾದೇವಿ ಈ ದೇವತೆಗಳ ಚಿತ್ರಗಳಲ್ಲಿ ಚೈತನ್ಯ ತುಂಬಾ ಹೆಚ್ಚಾಗಿದೆ. ಇದರಿಂದ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಹಿಂದೂ ರಾಷ್ಟ್ರ ಸ್ಥಾಪನೆಯಂತಹ ಶ್ರೇಷ್ಠ ಸಮಷ್ಟಿ ಕಾರ್ಯದಲ್ಲಿ ಅವರ ಗುರು ಸಂತ ಭಕ್ತರಾಜ ಮಹಾರಾಜರು, ಪ.ಪೂ. ರಾಮಾನಂದ ಮಹಾರಾಜರು, ಹಾಗೂ ದತ್ತ, ಶ್ರೀಕೃಷ್ಣ, ಶ್ರೀಲಕ್ಷ್ಮೀದೇವಿ, ಶ್ರೀರಾಮ ಮತ್ತು ಶ್ರೀ ದುರ್ಗಾದೇವಿ ಮುಂತಾದ ದೇವತೆಗಳ ವಿಶೇಷ ಕೃಪಾಶೀರ್ವಾದ ಲಭಿಸುತ್ತಿದೆ’, ಎಂಬುದು ಅರಿವಾಗುತ್ತದೆ.

ಸಂಪೂರ್ಣ ಸೃಷ್ಟಿಗೆ ಚೈತನ್ಯವನ್ನು ಪ್ರದಾನಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರಕೋಣೆಗೆ ಸಂಬಂಧಿಸಿದ ಸಂಶೋಧನೆಯ ಸೇವೆಯಲ್ಲಿ ನಮ್ಮೆಲ್ಲ ಸಾಧಕರಿಗೆ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು ಹಾಗೂ ಅವರಿಗೆ ಅಪೇಕ್ಷಿತವಿರುವ ಸಂಶೋಧನೆಯನ್ನು ಮಾಡಿಸಿಕೊಳ್ಳುವ ಪ್ರಯತ್ನ ಅವರೇ ಮಾಡಿಸಿಕೊಂಡರು, ಅದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳು !’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೨.೧೨.೨೦೨೪)

ವಿ-ಅಂಚೆ : mav.research2014@gmail.com