ಶೇ. ೫೪ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಬೆಂಗಳೂರಿನ ಕು. ಆದಿತ್ಯ ಪ್ರದೀಪ ಭಟ್‌ (ವಯಸ್ಸು ೧೩ ವರ್ಷ) !

ಉಚ್ಚ (ಉನ್ನತ)ಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ದೈವಿ (ಸಾತ್ತ್ವಿಕ) ಬಾಲಕ ಎಂದರೆ ಹಿಂದೂ ರಾಷ್ಟ್ರ ನಡೆಸುವ ಪೀಳಿಗೆ ! ಕು. ಆದಿತ್ಯ ಭಟ್‌ ಇವನು ಈ ಪೀಳಿಗೆಯಲ್ಲಿನ ಒಬ್ಬನು !

ಕು. ಆದಿತ್ಯ ಭಟ್‌

ಕು. ಆದಿತ್ಯ ಪ್ರದೀಪ ಭಟ್‌ ಇವನ ಬಗ್ಗೆ ಅವನ ತಾಯಿಗೆ ಗಮನಕ್ಕೆ ಬಂದ ಅವನ ಗುಣವೈಶಿಷ್ಟ್ಯಗಳನ್ನು ಮುಂದೆ ನೀಡುತ್ತಿದ್ದೇವೆ.

೧. ಜನಿಸುವ ಮೊದಲು

ಅ. ‘ನನಗೆ ಮೊದಲನೇ ತಿಂಗಳು ಪ್ರಾರಂಭವಾದಾಗ ಕನಸಿನಲ್ಲಿ, ‘ನನ್ನ ಗರ್ಭದಲ್ಲಿ ಬಿಳಿ ಬಣ್ಣದ ಗೋಲವು ಪ್ರವೇಶಿಸುತ್ತಿದೆ’ ಎಂದು ಕಾಣಿಸಿತು.

ಆ. ನನಗೆ ಎಂಟನೇ ತಿಂಗಳಿನಲ್ಲಿ ಸದ್ಗುರು ಸತ್ಯವಾನ ಕದಮ ಇವರ ಸತ್ಸಂಗ ಲಭಿಸಿತು. ಆಗ ನಾಮಜಪಾದಿ ಉಪಾಯಗಳನ್ನು ಮಾಡುವಾಗ ನನಗೆ ‘ನನ್ನ ಗರ್ಭದಲ್ಲಿ ಬಾಲಕೃಷ್ಣನು ಮಲಗಿದ್ದು ಅವನ ಸುತ್ತಲೂ ಪ್ರಕಾಶದ ರಕ್ಷಣಾಕವಚವಿದೆ’, ಎಂದು ಅರಿವಾಗುತ್ತಿತ್ತು.

ಸೌ. ಅಪರ್ಣಾ ಪ್ರದೀಪ ಭಟ್‌

೨. ಜನಿಸಿದಾಗಿನಿಂದ ಒಂದು ವರ್ಷ

೨ ಅ. ಮಗು ಜನಿಸಿದಾಗಿನಿಂದಲೇ ಅತ್ಯಂತ ಶಾಂತವಾಗಿದೆ.

೨ ಆ. ಭಾವಪೂರ್ಣ ಭಜನೆ ಹಾಡಿದಾಗ ಅಳುವುದನ್ನು ನಿಲ್ಲಿಸಿ ಶಾಂತವಾಗಿ ಮಲಗುವುದು : ಮಗುವಿಗೆ ೧೫ -೨೦ ದಿನವಾದಾಗ ಒಮ್ಮೆ ಅವನಿಗೆ ನಿದ್ರೆ ಬರುತ್ತಿರಲಿಲ್ಲ. ಅವನು ತುಂಬಾ ಅಳುತ್ತಿದ್ದನು. ಆಗ ನನ್ನ ಸಹೋದರಿಯು ಮಗುವನ್ನು ಎತ್ತಿಕೊಂಡಳು ಮತ್ತು ಸಂತ ಪುರಂದರದಾಸರ ಭಜನೆಯನ್ನು ಭಾವಪೂರ್ಣವಾಗಿ ಹಾಡಿದಳು. ತದನಂತರ ಮಗು ತಕ್ಷಣ ಮಲಗಿತು.

೩. ವಯಸ್ಸು ೧ ರಿಂದ ೯ ವರ್ಷ

೩ ಅ. ಉತ್ತಮ ಸ್ಮರಣಶಕ್ತಿ : ಆದಿತ್ಯನು ಸ್ವಲ್ಪ ದಿನಗಳಲ್ಲಿ ‘ಶ್ರೀವಿಷ್ಣುಸಹಸ್ರನಾಮಸ್ತೋತ್ರ’ ಮತ್ತು ಇತರ ಸ್ತೋತ್ರಗಳನ್ನು ಹೇಳಲು ಕಲಿತನು. ಅವನಿಗೆ ರುದ್ರ, ಆದಿತ್ಯಹೃದಯ-ಸ್ತೋತ್ರಮ್, ಪುರಷಸೂಕ್ತಮ್, ಶ್ರೀಸೂಕ್ತಮ್, ಮಂತ್ರಪುಷ್ಪಾಂಜಲಿ ಮತ್ತು ಷೋಡಶೋಪಚಾರ ಪೂಜೆಯ ಮಂತ್ರಗಳೂ ಬರುತ್ತವೆ.

೩ ಆ. ಪೌರೋಹಿತ್ಯ ಮಾಡುವ ಆಸಕ್ತಿ : ಅವನಿಗೆ ಪೂಜೆ ಮಾಡಲು ತುಂಬಾ ಇಷ್ಟವಾಗುತ್ತದೆ. ಅವನು ಮನೆಯಲ್ಲಿ ಪೂಜೆ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುವ ವ್ಯಕ್ತಿಗೆ ಧೋತರವನ್ನು ಉಡಲು ಹೇಳುತ್ತಿದ್ದನು. ಅವನು ೨-೩ ಗಂಟೆಗಳ ವರೆಗೆ ಏನು ತಿನ್ನದೇ ಶ್ರದ್ಧೆಯಿಂದ ಪೂಜೆಯನ್ನು ಮಾಡುತ್ತಿದ್ದನು. ಅವನು ಧಾರ್ಮಿಕ ಕಾರ್ಯಕ್ರಮದ ಸಮಯದಲ್ಲಿ ಪುರೋಹಿತರು ಉಚ್ಚರಿಸಿದ ಮಂತ್ರಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದನು.

೩ ಇ. ಸಾತ್ತ್ವಿಕ ಹಾಡುಗಳು ಕೇಳಲು ಇಷ್ಟವಾಗುವುದು : ಅವನಿಗೆ ಶಾಸ್ತ್ರೀಯ ಸಂಗೀತ, ಭಜನೆ ಇಂತಹ

ಸಾತ್ತ್ವಿಕ ಹಾಡುಗಳು ಕೇಳಲು ಇಷ್ಟವಾಗುತ್ತದೆ ಅವನ ಧ್ವನಿ ಇಂಪಾಗಿ ಮತ್ತು ಸುಮಧುರ

ವಾಗಿದೆ. ಅವನು ಚಲನಚಿತ್ರಗಳಲ್ಲಿನ ಹಾಡುಗಳನ್ನು ತಪ್ಪಿಯೂ ಹಾಡುವುದಿಲ್ಲ.

೩ ಈ. ಸೂಕ್ಷ್ಮವನ್ನು ತಿಳಿದುಕೊಳ್ಳುವ ಕ್ಷಮತೆ : ಒಮ್ಮೆ ನಾವು ಮಧ್ಯಾಹ್ನ ಊಟವನ್ನು ಮಾಡುತ್ತಿದ್ದೆವು ಆಗ ಆದಿತ್ಯನು (ವಯಸ್ಸು ೬ ವರ್ಷ) ನನಗೆ, ”ಮಧ್ಯಾಹ್ನ ಒಂದು ಕಾಗೆಯು ಊಟದ ಮೇಜಿನ ಮೇಲೆ ಕುಳಿತಿತ್ತು” ಎಂದು ಹೇಳಿದನು. ಆಗ ನಾನು, ‘ನಾನು ಕಾಗೆಯನ್ನು ನೋಡಲಿಲ್ಲ. ಅದು ಇಲ್ಲಿಗೆ ಹೇಗೆ ಬರಬಹುದು ?” ಎಂದು ಹೇಳಿದೆನು. ಆಗ ನನಗೆ, ‘ಆ ದಿನ ನನ್ನ ತಂದೆಯ ಶ್ರಾದ್ಧವಿತ್ತು. ನನಗೆ ಶ್ರಾದ್ಧಕ್ಕೆ ಹೋಗಲು ಸಾಧ್ಯವಾಗಲಿಲ್ಲವೆಂದು ಆದಿತ್ಯನಿಗೆ ಸೂಕ್ಷ್ಮದಿಂದ ಕಾಗೆ ಬಂದಿರುವುದು ಕಾಣಿಸಿರಬಹುದು’ ಎಂದೆನಿಸಿತು. ತದನಂತರ ನಾನು ಪೂರ್ವಜರಿಗಾಗಿ ಅನ್ನ (ಸ್ವಲ್ಪ ಅನ್ನ)ವನ್ನಿಟ್ಟು ನಮಸ್ಕಾರ ಮಾಡಿದೆನು.

೩ ಉ. ಕನ್ನಡ ಮತ್ತು ಸಂಸ್ಕೃತ ಭಾಷೆ ಇಷ್ಟವಾಗುವುದು : ಅವನಿಗೆ ಆಂಗ್ಲ ಭಾಷೆ ಬರುತ್ತಿದ್ದರೂ, ಅವನಿಗೆ ಕನ್ನಡ ಮತ್ತು ಸಂಸ್ಕೃತ ಭಾಷೆ ಇಷ್ಟವಾಗುತ್ತವೆ. ನಾವು ಅವನಿಗೆ ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಹಾಕಿದ್ದೇವೆ; ಆದರೆ ಅವನಿಗೆ ಕನ್ನಡ ಮಾಧ್ಯಮದ ಶಾಲೆಗೆ ಹೋಗಬೇಕೆಂಬ ಆಸೆ ಇತ್ತು. ಅವನು ಶಾಲೆಯಲ್ಲಿ ಸಂಸ್ಕೃತವನ್ನು ಇಷ್ಟಪಟ್ಟು ತೆಗೆದುಕೊಂಡಿದ್ದಾನೆ.

೩ ಊ. ಸನಾತನದ ಗ್ರಂಥಗಳನ್ನು ಓದಿ ಅದರಂತೆ ಕೃತಿ ಮಾಡುವುದು : ಆದಿತ್ಯನಿಗೆ ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡಿದ ಗ್ರಂಥಗಳನ್ನು ಓದಲು ಇಷ್ಟವಾಗುತ್ತದೆ. ಅವನು ಸನಾತನದ ಗ್ರಂಥಗಳನ್ನು ಓದುತ್ತಾನೆ ಮತ್ತು ಗ್ರಂಥಗಳಲ್ಲಿ ಹೇಳಿದಂತೆ ಆಚರಣೆ ಮಾಡಲು ಪ್ರಯತ್ನಿಸುತ್ತಾನೆ.

೪. ವಯಸ್ಸು ೧೦ ರಿಂದ ೧೨ ವರ್ಷ

೪ ಅ. ಮಿತವ್ಯಯ

೧. ಅವನು ನಮ್ಮ ಮನೆಯಿಂದ ೧ ಕಿ.ಮೀ. ದೂರದಲ್ಲಿರುವ ಕೆರೆಯಲ್ಲಿ ಈಜಲು ಹೋಗುತ್ತಾನೆ. ಅವನಿಗೆ ಈಜಿದ ನಂತರ ದಣಿವಾಗಿದ್ದರೂ, ಅವನು ಆಟೋದಲ್ಲಿ ಬರುವುದಿಲ್ಲ. ಅವನಿಗೆ ಹಣವನ್ನು ವ್ಯರ್ಥಗೊಳಿಸಲು ಇಷ್ಟವಾಗುವುದಿಲ್ಲ.

೨. ಅವನು ಬಟ್ಟೆ, ಚಪ್ಪಲಿ, ಆಟಿಕೆಗಳು ಇತ್ಯಾದಿ ವಸ್ತುಗಳನ್ನು ಅನಗತ್ಯವಾಗಿ ಖರೀದಿಸುವುದಿಲ್ಲ.

೪ ಆ. ರಾಷ್ಟ್ರಪ್ರೇಮಿ : ಸ್ವಾತಂತ್ರ್ಯದಿನ ಮತ್ತು ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳಲ್ಲಿ ಅವನು ಮನೆಯ ಮಹಡಿಯ ಮೇಲೆ ಹೋಗಿ ರಾಷ್ಟ್ರಧ್ವಜವನ್ನು ಏರಿಸುತ್ತಾನೆ ಮತ್ತು ‘ವಂದೇ ಮಾತರಮ್’ ಈ ರಾಷ್ಟ್ರೀಯ ಗೀತೆಯನ್ನು ಸಂಪೂರ್ಣವಾಗಿ ಹಾಡುತ್ತಾನೆ.

೪ ಇ. ವ್ಯಷ್ಟಿ ಸಾಧನೆ : ಅವನು ‘ಆನ್‌ಲೈನ್’ ಬಾಲಸಂಸ್ಕಾರವರ್ಗವನ್ನು ನಿಯಮಿತವಾಗಿ ಕೇಳುತ್ತಾನೆ. ಅವನು ನಿಯಮಿತವಾಗಿ ನಾಮಜಪಾದಿ ಉಪಾಯಗಳನ್ನು ಮಾಡುತ್ತಾನೆ.

೪ ಈ. ಸೇವಾಭಾವ : ಅವನಿಗೆ ಸೇವೆ ಮಾಡಲು ತುಂಬಾ ಇಷ್ಟ. ನಾನು ಸೇವೆಯನ್ನು ಮಾಡುತ್ತಿರುವಾಗ ಅವನು ನನ್ನ ಬಳಿ ಕುಳಿತು ನಿರೀಕ್ಷಿಸುತ್ತಾನೆ. ಅವನು ಜಾಹೀರಾತಿಗಳಿಗಾಗಿ ಬೆರಳಚ್ಚು ಮಾಡುವ ಸೇವೆಯನ್ನು ಕಲಿಯುತ್ತಿದ್ದಾನೆ.

೪ ಉ. ಇಷ್ಟಾನಿಷ್ಟವಿಲ್ಲದಿರುವುದು : ಅವನು ನಮಗೆ ಐಸಕ್ರೀಮ್‌ ಅಥವಾ ಚಾಕಲೇಟ್‌ ಇಂತಹದ್ದನ್ನು ತರಲು ಹೇಳುವುದಿಲ್ಲ.

೪ ಊ. ‘ಧರ್ಮಜಾಗೃತಿ ಮತ್ತು ಧರ್ಮರಕ್ಷಣೆ’ ಇವುಗಳ ಬಗೆಗಿನ ತಳಮಳ : ಅವನು ಸಾಪ್ತಾಹಿಕ ‘ಸನಾತನ ಪ್ರಭಾತ’ವನ್ನು ಆಸಕ್ತಿಯಿಂದ ಓದುತ್ತಾನೆ. ಒಮ್ಮೆ ಅವನಿಗೆ ಯಾರಾದರು, ”ಸಾಪ್ತಾಹಿಕ ‘ಸನಾತನ ಪ್ರಭಾತ’ವನ್ನು ಓದಬೇಡ, ಅದು ಹಿರಿಯರಿಗಾಗಿ ಇದೆ, ನಿನಗಾಗಿ ಇಲ್ಲ” ಎಂದು ಹೇಳಿದರು. ಆಗ ಅವನು, ”ಧರ್ಮರಕ್ಷಣೆಯು ಇಂದಿನ ಕಾಲಕ್ಕೆ ಆವಶ್ಯಕವಾಗಿದೆ ಮತ್ತು ಅದು ನಮ್ಮ ಕರ್ತವ್ಯವಾಗಿದೆ” ಎಂದು ಹೇಳಿದನು. ಅವನಿಗೆ ‘ಧರ್ಮರಕ್ಷಣೆ ಮತ್ತು ಧರ್ಮಜಾಗೃತಿ’ ಮಾಡುವ ತೀವ್ರ ತಳಮಳವಿದೆ.

೪ ಐ. ಗುರುಗಳ ಬಗೆಗಿನ ಭಾವ

೧. ಆದಿತ್ಯನಿಗೆ ಪರಾತ್ಪರ ಗುರು ಡಾಕ್ಟರರನ್ನು ಭೇಟಿಯಾಗುವ ಇಚ್ಛೆಯಿದೆ. ಅವನಿಗೆ ಆಧ್ಯಾತ್ಮಿಕ ಸ್ತರದ ತೊಂದರೆಯಾಗುತ್ತಿದ್ದರೆ ಅವನು ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಈ ಗ್ರಂಥಮಾಲಿಕೆಯಲ್ಲಿನ ಗ್ರಂಥಗಳನ್ನು ಓದುತ್ತಾನೆ ಮತ್ತು ಅವನು ಗ್ರಂಥವನ್ನು ಹತ್ತಿರ ಇಟ್ಟು ಮಲಗುತ್ತಾನೆ.

೨. ಒಮ್ಮೆ ಅವನಿಗೆ ನಮ್ಮ ಸಂಬಂಧಿಕರು ಹಣವನ್ನು ಕೊಟ್ಟಿದ್ದರು. ಅವನು ಅದನ್ನು ಒಂದು ಪೆಟ್ಟಿಗೆಯಲ್ಲಿಟ್ಟನು. ಗುರುಪೂರ್ಣಿಮೆ ಹತ್ತಿರ ಬಂದಂತೆ ಅವನಿಗೆ ಅರ್ಪಣೆಯ ಮಹತ್ವ ತಿಳಿಯಿತು. ಆಗ ಅವನು ಸಂಗ್ರಹಿಸಿದ ಎಲ್ಲ ಹಣವನ್ನು ಗುರುಗಳ ಕಾರ್ಯಕ್ಕಾಗಿ ಅರ್ಪಿಸಿದನು.

– ಸೌ. ಅಪರ್ಣಾ ಪ್ರದೀಪ ಭಟ್‌ (ಕು. ಆದಿತ್ಯ ಭಟ್‌ ಇವನ ತಾಯಿ), ಬೆಂಗಳೂರು (೨೦.೫.೨೦೨೪)