ಧರ್ಮಾಚರಣೆಯ ಆಸಕ್ತಿ ಮತ್ತು ಧರ್ಮಾಭಿಮಾನ ಇರುವ ಶೇ. ೫೩ ಆಧ್ಯಾತ್ಮಿಕ ಮಟ್ಟದ ಉಡುಪಿಯ ಕು. ಮನಸ್ವಿ ಭಂಡಾರಿ (ವಯಸ್ಸು ೧೨ ವರ್ಷ) !

ಉಚ್ಚ ಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಕು. ಮನಸ್ವಿ ಭಂಡಾರಿ  ಈ ಪೀಳಿಗೆಯಲ್ಲಿ ಒಬ್ಬಳು !

ಕು. ಮನಸ್ವಿ ಭಂಡಾರಿ

‘ಕು. ಮನಸ್ವಿ ಭಂಡಾರಿ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ್ದು ಆಕೆಯ ಆಧ್ಯಾತ್ಮಿಕ ಮಟ್ಟ ಶೇ. ೫೧ ರಷ್ಟು ಇದೆ, ಎಂದು ೨೦೧೬ ರಲ್ಲಿ ಘೋಷಿಸಲಾಗಿತ್ತು. ೨೦೨೪ ರಲ್ಲಿ ಆಕೆಯ ಆಧ್ಯಾತ್ಮಿಕ ಮಟ್ಟ ಶೇ. ೫೩ ರಷ್ಟು ಆಗಿದೆ. ಆಕೆಯ ಪೋಷಕರು ಆಕೆಗೆ ನೀಡಿರುವ ಯೋಗ್ಯ ಸಂಸ್ಕಾರ, ಆಕೆಗೆ  ಸಾಧನೆಯಲ್ಲಿ ಇರುವ ತಳಮಳ ಮತ್ತು ಆಕೆಯಲ್ಲಿನ ಭಾವದಿಂದ ಈಗ ಆಕೆಯ ಸಾಧನೆಯಲ್ಲಿ ಪ್ರಗತಿ ಆಗುತ್ತಿದೆ.’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ. (೧೯.೧೨.೨೦೨೪)

ಕು. ಮನಸ್ವಿ ಭಂಡಾರಿ ಅವರ ಅಜ್ಜಿ ಸೌ. ಮಲ್ಲಿಕಾ ಭಂಡಾರಿ ಅವರಿಗೆ ಮನಸ್ವಿಯ ಬಗ್ಗೆ ತಿಳಿದಿರುವ ಗುಣವೈಶಿಷ್ಟ್ಯಗಳನ್ನು ಮುಂದೆ ನೀಡಲಾಗಿದೆ.

೧. ವ್ಯವಸ್ಥಿತ : ‘ಮನಸ್ವಿ ತನ್ನ ವಸ್ತುಗಳನ್ನು ವ್ಯವಸ್ಥಿತ ವಾಗಿ ಇಡುತ್ತಾಳೆ. ಅವಳು ಮೊದಲು ಮನೆಯ ಕೋಣೆ ವ್ಯವಸ್ಥಿತವಾಗಿಡುತ್ತಾಳೆ ಮತ್ತು ನಂತರ ಅಧ್ಯಯನ ಮಾಡುತ್ತಾಳೆ. ‘ಆಕೆ ಕೇವಲ ತನ್ನ ವಸ್ತುಗಳನ್ನು ಮಾತ್ರವಲ್ಲ; ಮನೆ ಕೂಡ ವ್ಯವಸ್ಥಿತವಾಗಿರಬೇಕು, ಎಂಬುದಕ್ಕಾಗಿ ಪ್ರಯತ್ನಿಸುತ್ತಾಳೆ.

೨. ಸ್ವಾವಲಂಬಿ : ಅವಳು ಶಾಲೆಗೆ ಹೋಗಲು ತನ್ನ ತಯಾರಿ ತಾನೆ ಮಾಡುತ್ತಾಳೆ.

೩. ನಮ್ರತೆ : ಅವಳು ಹಿರಿಯರ ಜೊತೆಗೆ ಗೌರವದಿಂದ ಮಾತನಾಡುತ್ತಾಳೆ. ಅವಳಲ್ಲಿ ಇರುವ ಈ ಗುಣಗಳಿಂದ ಶಾಲೆಯ ಶಿಕ್ಷಕರು ಕೂಡ ಆಕೆಯನ್ನು ಪ್ರಶಂಸಿಸುತ್ತಾರೆ.

೪. ಮಿತವ್ಯಯ : ನಾವು ಅಂಗಡಿಗೆ ಹೋಗಿರುವಾಗ ಮನಸ್ವಿಗೆ ‘ನಿನಗಾಗಿ ಬಟ್ಟೆ, ತಿಂಡಿಗಳು ಅಥವಾ ಚಪ್ಪಲಿ ಖರೀದಿಸುವುದೇ ?’, ಎಂದು ಕೇಳಿದಾಗ, ‘ಈಗ ಇರುವುದಷ್ಟೇ ಸಾಕು ! ಬೇಕಿರುವಾಗ ತೆಗೆದುಕೊಳ್ಳೋಣ’, ಎನ್ನುತ್ತಾಳೆ.

ಸೌ. ಮಲ್ಲಿಕಾ ಭಂಡಾರಿ

೫. ಅಂತರ್ಮುಖ : ಮನಸ್ವಿ ಮನೆಯಲ್ಲಿ ಹೆಚ್ಚು ಮಾತನಾಡುವು ದಿಲ್ಲ, ತನ್ನ ಕೆಲಸ ತಾನು ಮಾಡುತ್ತಿರುತ್ತಾಳೆ, ಆಕೆ ಅಂತರ್ಮುಖ ವಾಗಿರುತ್ತಾಳೆ.

೬. ಸ್ವೀಕಾರವೃತ್ತಿ : ಮನಸ್ವಿಯ ತಾಯಿ-ತಂದೆ ಬೇರೆ ಸ್ಥಳದಲ್ಲಿ ಇರುತ್ತಾರೆ. ಆಕೆ ಅದರ ಬಗ್ಗೆ ಎಂದಿಗೂ ದೂರುವುದಿಲ್ಲ. ಆಕೆ ನನ್ನ ಹತ್ತಿರ (ಅಜ್ಜಿಯ ಹತ್ತಿರ) ಶಾಂತವಾಗಿ ಇರುತ್ತಾಳೆ.

೭. ಪ್ರಜ್ಞಾವಂತೆ : ನಾವು ಕೆಲವು ಸಾರಿ ಯಾವುದೋ ನಡೆದಿರುವ ಪ್ರಸಂಗದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಿರುವಾಗ ಆಕೆ ನಮಗೆ ಹೇಳುತ್ತಾಳೆ, ”ಪ್ರಸಂಗವನ್ನು ಸ್ವೀಕಾರ ಮಾಡಿ. ನಮ್ಮ ಜೊತೆಗೆ ಗುರುದೇವರು ಇದ್ದಾರೆ. ಅವರು ಸಹಾಯ ಮಾಡುವರು. ಆನಂದದಿಂದ ಇರಲು ಪ್ರಯತ್ನ ಮಾಡಿ’’. ಈ ರೀತಿ ಆಕೆ ನಮಗೆ ಸಕಾರಾತ್ಮಕ ವಾಗಿರಲು ಅರಿವು ಮಾಡಿಕೊಡುತ್ತಾಳೆ.

೮ ಸಾತ್ತ್ವಿಕತೆಯ ಬಗ್ಗೆ ಆಸಕ್ತಿ :

ಅ. ಅವಳಿಗೆ ಸಾತ್ತ್ವಿಕ ಉಡುಪು ಧರಿಸಲು ಇಷ್ಟವಾಗುತ್ತದೆ. ಸಂಬಂಧಿಕರು ಅವಳಿಗೆ ‘ಪ್ಯಾಂಟ್‌ ಶರ್ಟ್‌’ ಹೇಗೆ ಉಡುಪು ಕೊಟ್ಟರೆ ನಮಗೆ ಶಾಂತವಾಗಿ, ”ಇದು ಸಾತ್ತ್ವಿಕ ಉಡುಪವಲ್ಲ. ನಾನು ಇದನ್ನು ಧರಿಸುವುದಿಲ್ಲ’’ ಎಂದು ಹೇಳುತ್ತಾಳೆ.

ಆ. ಮನಸ್ವೀ ಸಮಯ ಸಿಕ್ಕಾಗೆಲ್ಲ ಮೊಬೈಲ್‌ ನಲ್ಲಿ ಇತರ ವಿಷಯ ನೋಡದೆ ಬಾಲಸಂಸ್ಕಾರ ವರ್ಗದ ‘ವಿಡಿಯೋ’ ನೋಡುತ್ತಾಳೆ ಮತ್ತು ಅದರಲ್ಲಿ ಹೇಳಿರುವ ಪ್ರಕಾರ ಅನುಕರಣೆ ಮಾಡಲು ಪ್ರಯತ್ನ ಮಾಡುತ್ತಾಳೆ.

ಈ. ಆಕೆ ಸಾತ್ತ್ವಿಕ ಆಹಾರವೇ ಸೇವಿಸುತ್ತಾಳೆ, ಬೇಕರಿಯ ತಿಂಡಿ ಅಥವಾ ‘ಜಂಕ್‌ ಫುಡ್’ ಸೇವಿಸುವುದಿಲ್ಲ.

೯. ಧರ್ಮಾಚರಣಿ : ಅ. ಆಕೆಗೆ ಶ್ರೀಮದ್ಭಗವದ್ಗೀತೆಯಲ್ಲಿನ ಬಹಳಷ್ಟು ಅಧ್ಯಾಯ ಬಾಯಿಪಾಠ ಇವೆ.

ಆ. ಆಕೆ ಸಾಧಕರ ಮತ್ತು ಸಂಬಂಧಿಕರ ಜೊತೆಗೆ ಮಾತನಾಡುವ ಮೊದಲು ಕೈಮುಗಿದು ನಮಸ್ಕಾರ ಮಾಡುತ್ತಾಳೆ. (ಬಾಲ್ಯದಿಂದಲೂ ಶೇಕ್‌ ಹ್ಯಾಂಡ್‌ ಮಾಡಲು ನಿರಾಕರಿಸುತ್ತಿದ್ದಳು. ಆಕೆಗೆ ನೋಡಿ ನಮ್ಮ ಎಲ್ಲಾ ಸಂಬಂಧಿಕರು ‘ನಮಸ್ಕಾರ’ ಎಂದು ಹೇಳುತ್ತಾರೆ.)

ಇ. ಆಕೆ ಎಲ್ಲರಿಗೂ, ”ಹುಟ್ಟುಹಬ್ಬ ತಿಥಿಯ ಪ್ರಕಾರ ಆಚರಿಸೋಣ,’’ ಎಂದು ಹೇಳುತ್ತಾಳೆ. ತನ್ನ ಸ್ನೇಹಿತೆಯರಿಗೂ ಸಾತ್ತ್ವಿಕ ಪದ್ಧತಿಯಿಂದ ಮತ್ತು ತಿಥಿಯ ಪ್ರಕಾರ ಹುಟ್ಟುಹಬ್ಬ ಆಚರಿಸಲು ಹೇಳುತ್ತಾಳೆ.

ಈ. ಆಕೆ ಪ್ರತಿ ದಿನ ಬೆಳಗ್ಗೆ ಮನೆಯ ಹೊಸ್ತಿಲ ಹತ್ತಿರ ರಂಗೋಲಿ ಹಾಕುತ್ತಾಳೆ. ಆಕೆ ಶ್ಲೋಕ ಹೇಳುತ್ತಾಳೆ ಮತ್ತು ಆರತಿ ಮಾಡುತ್ತಾಳೆ.

೧೦. ಧರ್ಮಾಭಿಮಾನ : ಮನಸ್ವಿಗೆ ಶಾಲೆಗೆ ಕರೆದುಕೊಂಡು ಹೋಗುವ ರಿಕ್ಷಾ ಚಾಲಕರು ಹಿಂದೂ ಆಗಿದ್ದರು. ’ಅವರು ಮತಾಂತರಗೊಂಡರು’ ಎಂದು ಮನಸ್ವಿಗೆ ತಿಳಿಯಿತು. ಆಗ ಆಕೆ ಅವರಿಗೆ ಹೇಳಿದಳು, ”ನಿಮ್ಮ ಮಕ್ಕಳಿಗೆ ಬೈಬಲ್‌ ಓದಲು ಕಲಿಸುವುದು ಅಯೋಗ್ಯವಾಗಿದೆ.’’ ಅನಂತರ ಆಕೆ ನಮಗೆ ಹೇಳಿದಳು,  ”ನಾನು ಆ ಮಾಮನ ರಿಕ್ಷಾದಲ್ಲಿ ಹೋಗುವುದಿಲ್ಲ. ನನಗೆ ಶಾಲೆಗೆ ಹೋಗಲು ಬೇರೆ ರಿಕ್ಷಾ ಚಾಲಕರನ್ನು ನೋಡಿ.’’

೧೧. ವ್ಯಷ್ಟಿ ಸಾಧನೆ : ಅವಳು ಪ್ರತಿದಿನ ಬೆಳಗ್ಗೆ ಎದ್ದ ನಂತರ ಶ್ರೀಕೃಷ್ಣ, ಶ್ರೀರಾಮ ಮತ್ತು ಗುರುದೇವರಿಗೆ ಪ್ರಾರ್ಥನೆ ಮಾಡುತ್ತಾಳೆ. ಆಕೆ ಮಹರ್ಷಿಗಳು ಹೇಳಿರುವಂತೆ ಬೆಳಿಗ್ಗೆ ‘ಹರಿ ಓಂ ನಿಸರ್ಗ ದೇವೋಭವ |ವೇದಮ್‌ ಪ್ರಮಾಣಮ್‌|| ಹೇಗೆ ಹೇಳುತ್ತಾಳೆ. ಆಕೆ ಶಾಲೆಗೆ ಹೋಗುವ ಮೊದಲು ಕೆಲವು ಸಮಯ ನಾಮಜಪ ಮಾಡುತ್ತಾಳೆ. ‘ತನಗೆ ಆಧ್ಯಾತ್ಮಿಕ ತೊಂದರೆ ಆಗುತ್ತಿದೆ ಎಂಬುದು ಅವಳ ಗಮನಕ್ಕೆ ಬಂದರೆ ಆಕೆ ಸ್ವತಃ ಉಪ್ಪು ನೀರಿನಲ್ಲಿ ಕಾಲಿಟ್ಟು ದತ್ತನ ನಾಮಜಪ ಮಾಡುತ್ತಾಳೆ. ಆಕೆ ನಮಗೆ ತನ್ನ ದೃಷ್ಟಿ ತೆಗೆಯಲು ಹೇಳುತ್ತಾಳೆ.

೧೨. ತಪ್ಪಿನ ಬಗ್ಗೆ ಸಂವೇದನಶೀಲ : ತನ್ನಿಂದಾದ ತಪ್ಪಿಗಾಗಿ ಆಕೆ ಕ್ಷಮೆಯಾಚನೆ ಮಾಡುತ್ತಾಳೆ. ತನ್ನಿಂದ ತಪ್ಪಾದರೆ ಆಕೆಗೆ ಪಶ್ಚಾತ್ತಾಪವಾಗುತ್ತದೆ, ಅವಳು ತಪ್ಪಿಗಾಗಿ ಪ್ರಾಯಶ್ಚಿತ್ತ ತೆಗೆದುಕೊಳ್ಳುತ್ತಾಳೆ. ನಾವು ಅನಾವಶ್ಯಕ ಮಾತನಾಡುವುದು ಆಕೆಯ ಗಮನಕ್ಕೆ ಬಂದರೆ ಆಕೆ ನಮಗೆ ಅದರ ಅರಿವು ಮಾಡಿಕೊಡುತ್ತಾಳೆ.

೧೩. ಗುರುಗಳ ಕುರಿತು ಭಾವ : ಕೆಲವು ವ್ಯಕ್ತಿಗಳು ಮನಸ್ವಿಗೆ ”ನೀನು ಯಾರು ?’’ ಎಂದು ಕೇಳಿದರೆ, ”ನಾನು ಗುರುಗಳ ಮಗಳು,’’ ಎನ್ನುತ್ತಾಳೆ. ಅವಳು ಶಾಲೆಗೆ ಹೋಗುವಾಗ ಗುರುಗಳಿಗೆ ನಮಸ್ಕಾರ ಮಾಡುತ್ತಾಳೆ ಮತ್ತು ಅವರನ್ನು ಸೂಕ್ಷ್ಮದಲ್ಲಿ ಜೊತೆಗೆ ಕರೆದುಕೊಂಡು ಹೋಗುತ್ತಾಳೆ. ಅವಳಿಗೆ ಇಡೀ ದಿನ ಗುರುಗಳ ಜೊತೆಗೆ ಇದ್ದೇನೆ, ಹೀಗೆ ಅನಿಸುತ್ತದೆ.

– ಸೌ. ಮಲ್ಲಿಕಾ ಭಂಡಾರಿ (ಮನಸ್ವಿಯ ಅಜ್ಜಿ), ಉಡುಪಿ (೯.೫.೨೦೨೪)