ಬಟ್ಟೆಗಳನ್ನು ಖರೀದಿಸುವಾಗ ಅವು ಆಕರ್ಷಕ ಹಾಗೂ ಸಾತ್ತ್ವಿಕವೂ ಆಗಿರಬೇಕು !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಹಬ್ಬದ ನಿಮಿತ್ತ ನಾವು ಕುಟುಂಬದವರಿಗಾಗಿ ಉತ್ಸಾಹದಿಂದ ಹೊಸ ಬಟ್ಟೆಗಳನ್ನು ಖರೀದಿಸುತ್ತೇವೆ. ಆಗ ಪೇಟೆಯಲ್ಲಿ ವಿವಿಧ ರೀತಿಯ ‘ರೆಡಿಮೇಡ್’ ಬಟ್ಟೆಗಳು (ಹೊಲಿದ ಸಿದ್ಧ ಬಟ್ಟೆಗಳು) ಮಾರಾಟಕ್ಕಾಗಿ ಲಭ್ಯವಿರುತ್ತವೆ. ಅವುಗಳ ಮಂಡಣೆ ಬಹಳ ಆಕರ್ಷಣೀಯವಾಗಿರುತ್ತದೆ. ಈ ಬಟ್ಟೆಗಳು ವಿವಿಧ ರೀತಿಯ ‘ಡಿಜೈನ್’ (ವಿನ್ಯಾಸ) ಮತ್ತು ಬಣ್ಣಗಳಲ್ಲಿ ಲಭ್ಯವಿರುತ್ತವೆ. ಆದ್ದರಿಂದ ಬಟ್ಟೆಗಳನ್ನು ಖರೀದಿಸುವಾಗ ವ್ಯಕ್ತಿಯ ಮನಸ್ಸು ಅವುಗಳತ್ತ ಸಹಜವಾಗಿ ಆಕರ್ಷಿತವಾಗಿ ಆಸಕ್ತಿಗನುಸಾರ ಬಟ್ಟೆಗಳನ್ನು ಖರೀದಿಸಲಾಗುತ್ತದೆ. ಬಟ್ಟೆಗಳಿಂದ ನಮ್ಮ ಮನಸ್ಸು ಮತ್ತು ಬುದ್ಧಿಯ ಮೇಲೆ ಸೂಕ್ಷ್ಮ ಪರಿಣಾಮವಾಗುತ್ತದೆ. ನಮ್ಮ ಕುಟುಂಬದವರಿಗಾಗಿ ಬಟ್ಟೆಗಳನ್ನು ಆರಿಸುವಾಗ ಅವು ಆಕರ್ಷಕ ಹಾಗೂ ಸಾತ್ತ್ವಿಕವಾಗಿರುವುದು ಆವಶ್ಯಕವಾಗಿರುತ್ತದೆ. ಸಾತ್ತ್ವಿಕ ಬಟ್ಟೆಗಳನ್ನು ಧರಿಸಿದರೆ ನಮಗೆ ಅದರಲ್ಲಿನ ಸಾತ್ತ್ವಿಕತೆಯ ಲಾಭವಾಗುತ್ತದೆ. ಸಾತ್ತ್ವಿಕ ಬಟ್ಟೆಗಳನ್ನು ಹೇಗೆ ಗುರುತಿಸಬೇಕು ? ಎಂಬುದನ್ನು ನಾವು ತಿಳಿದುಕೊಳ್ಳೋಣ.

ಸೌ. ಮಧುರಾ ಧನಂಜಯ ಕರ್ವೆ

೧. ಬಟ್ಟೆಯ ವಿಧ, ಬಟ್ಟೆಯ ಬಣ್ಣ, ಬಟ್ಟೆಯ ಮೇಲಿನ ಕಸೂತಿ ಮತ್ತು ಬಟ್ಟೆಯ ಹೊಲಿಗೆಯ ಮೇಲೆ ಆ ಬಟ್ಟೆಗಳ ಸಾತ್ತ್ವಿಕತೆ ಅವಲಂಬಿಸಿರುತ್ತದೆ

ಪ್ರತಿಯೊಂದು ವಸ್ತುವಿನಲ್ಲಿ ಅದರ ಗುಣಧರ್ಮ ಕ್ಕನುಸಾರ ಒಳ್ಳೆಯ ಅಥವಾ ಕೆಟ್ಟ ಸ್ಪಂದನಗಳಿರುತ್ತವೆ. ನಮ್ಮ ಸುತ್ತಮುತ್ತಲೂ ಇರುವ ಮತ್ತು ನಾವು ಬಳಸು ತ್ತಿರುವ ಅನೇಕ ವಸ್ತುಗಳ ಸ್ಪಂದನಗಳು ನಮ್ಮ ಮೇಲೆ ಸತತವಾಗಿ ಪರಿಣಾಮ ಬೀರುತ್ತಿರುವುದರಿಂದ ಆ ವಸ್ತುಗಳು ಸತ್ತ್ವಪ್ರಧಾನವಾಗಿರುವುದು ಆವಶ್ಯಕವಾಗಿರುತ್ತದೆ. ಇತರ ಯಾವುದೇ ವಸ್ತುಗಳಿಗಿಂತ ನಮ್ಮ ಮೈಮೇಲಿನ ಬಟ್ಟೆಗಳ ಸಂಬಂಧ ಬಹಳ ಹತ್ತಿರದ್ದಾಗಿರುತ್ತದೆ. ಬಟ್ಟೆಯ ಸಾತ್ತ್ವಿಕತೆಯು ಬಟ್ಟೆಯ ವಿಧ ಬಟ್ಟೆಯ ಬಣ್ಣ, ಬಟ್ಟೆಯ ಮೇಲಿನ ವಿನ್ಯಾಸ ಮತ್ತು ಬಟ್ಟೆಯ ಹೊಲಿಗೆಯನ್ನು ಅವಲಂಬಿಸಿರುತ್ತದೆ.

೧ ಅ. ಬಟ್ಟೆಯ ವಿಧ : ಪಾಲಿಸ್ಟರ್, ಜಾರ್ಜೆಟ್‌ ಇತ್ಯಾದಿ ಕೃತಕ ದಾರಗಳಿಗಿಂತ ನೂಲು ಅಥವಾ ರೇಶ್ಮೆಯಂತಹ ನೈಸರ್ಗಿಕ ದಾರಗಳಿಂದ ನೇಯ್ದ ಬಟ್ಟೆಗಳು ಸಾತ್ತ್ವಿಕವಾಗಿರುತ್ತವೆ. ವಿವಿಧ ರೀತಿಯ ಬಟ್ಟೆಗಳ ‘ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಉಪಕರಣದಿಂದ ಮಾಡಿದ ಪರೀಕ್ಷಣೆಯಿಂದ ಗಮನಕ್ಕೆ ಬಂದಿರುವುದೇನೆಂದರೆ, ಹತ್ತಿ, ರೇಶ್ಮೆಯಂತಹ ನೈಸರ್ಗಿಕ ದಾರಗಳಿಂದ ತಯಾರಿಸಿದ ಬಟ್ಟೆಗಳಲ್ಲಿ ತುಂಬಾ ಸಕಾರಾತ್ಮಕ ಊರ್ಜೆ ಇದೆ ಮತ್ತು ಕೃತಕ ದಾರಗಳಿಂದ ನೇಯ್ದ ಬಟ್ಟೆಗಳಲ್ಲಿ ತುಂಬಾ ನಕಾರಾತ್ಮಕ ಊರ್ಜೆ ಇದೆ. ಕಪ್ಪು ಬಣ್ಣದ ನೂಲಿನ ಬಟ್ಟೆಯಲ್ಲಿ ಮಾತ್ರ ಸಕಾರಾತ್ಮಕ ಊರ್ಜೆಯೇ ಇರುವುದಿಲ್ಲ ಮತ್ತು ತುಂಬಾ ನಕಾರಾತ್ಮಕ ಊರ್ಜೆ ಇರುವುದು ಕಂಡುಬಂದಿತು. ಇದರಿಂದ ‘ಹಿಂದೂ ಧರ್ಮದಲ್ಲಿ ಕಪ್ಪು ಬಣ್ಣವನ್ನು ಏಕೆ ನಿಷೇಧಿಸಲು ಹೇಳಿದ್ದಾರೆ’, ಎಂಬುದು ಗಮನಕ್ಕೆ ಬರುತ್ತದೆ.

೧ ಆ. ಬಟ್ಟೆಗಳ ಬಣ್ಣ : ಬಿಳಿ, ನೀಲಿ, ಹಳದಿ, ತಿಳಿ ಗುಲಾಬಿ ಇತ್ಯಾದಿ ಬಣ್ಣಗಳು ಸಾತ್ತ್ವಿಕವಾಗಿರುತ್ತವೆ ಮತ್ತು ಕೆಂಪು, ಹಸಿರು ಇತ್ಯಾದಿ ಬಣ್ಣಗಳು ರಾಜಸಿಕ ಮತ್ತು ಕಪ್ಪು ಇತ್ಯಾದಿ ಬಣ್ಣಗಳು ತಾಮಸಿಕವಾಗಿರುತ್ತವೆ, ‘ಯು.ಎ.ಎಸ್‌.’ ಉಪಕರಣದ ಪರೀಕ್ಷಣೆಯಿಂದ ಬಿಳಿ ಬಣ್ಣದಲ್ಲಿ (೧೭ ಮೀಟರ್) ಅತ್ಯಧಿಕ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಅದರ ಕೆಳಗೆ ನೀಲಿ, ಹಳದಿ, ತಿಳಿ ಗುಲಾಬಿ ಮತ್ತು ಹಸಿರು ಈ ಬಣ್ಣಗಳಲ್ಲಿ ಇಳಿಕೆಯ ಕ್ರಮದಲ್ಲಿ (ಅನುಕ್ರಮ ೧೩ ರಿಂದ ೭ ಮೀಟರ್) ಸಕಾರಾತ್ಮಕ ಊರ್ಜೆ ಕಂಡುಬಂದಿತು. ತದ್ವಿರುದ್ಧ ಕಪ್ಪು ಬಣ್ಣದಲ್ಲಿ ಸಕಾರಾತ್ಮಕ ಊರ್ಜೆ ಏನು ಇರದೇ ನಕಾರಾತ್ಮಕ ಊರ್ಜೆ ಕಂಡುಬಂದಿತು.

‘ಸ್ತ್ರೀಯು ಕಪ್ಪು ಮತ್ತು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದ ನಂತರ ಅವಳ ಸೂಕ್ಷ್ಮ-ಊರ್ಜೆಯ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ಅಧ್ಯಯನ ಮಾಡಲು ಅವಳ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಳಲ್ಲಿನ ನಿರೀಕ್ಷಣೆಗಳಿಂದ ಗಮನಕ್ಕೆ ಬಂದಿರುವುದೇನೆಂದರೆ, ಅವಳು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿರುವುದರಿಂದ ಅವಳಲ್ಲಿನ ನಕಾರಾತ್ಮಕ ಊರ್ಜೆ ಹೆಚ್ಚಾಯಿತು. ಅದೇ ಅವಳು ಬಿಳಿ ಬಣ್ಣದ ಬಟ್ಟೆ ಗಳನ್ನು ಧರಿಸಿದ ನಂತರ ಅವಳಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವಳಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು.

೧ ಇ. ಬಟ್ಟೆಗಳ ವಿನ್ಯಾಸ : ಬಟ್ಟೆಗಳ ಮೇಲಿನ ವಿನ್ಯಾಸಗಳಲ್ಲಿ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಹೀಗೆ ೩ ಪ್ರಕಾರಗಳಿರುತ್ತವೆ. ಬಟ್ಟೆಗಳ ಮೇಲಿನ ವಿನ್ಯಾಸಗಳನ್ನು ಆಯ್ಕೆ ಮಾಡುವಾಗ ಅವು ಅರ್ಥಪೂರ್ಣವಾಗಿರಬೇಕು, ಉದಾ. ಚುಕ್ಕಿಗಳು, ಎಲೆಗಳು, ಹೂವುಗಳು ಮತ್ತು ಬಳ್ಳಿಗಳು. ಎಲೆಹೂವುಗಳ ವಿನ್ಯಾಸಗಳನ್ನು ಆಯ್ಕೆ ಮಾಡುವಾಗ ಮೊನಚಾದ ತುದಿಗಳಿರುವ ಎಲೆಹೂವುಗಳು ಇರಬಾರದು. ವಿನ್ಯಾಸಗಳು ಕೋಮಲ (ನಯವಾದ) ಮತ್ತು ಆಕರ್ಷಕವಾಗಿರಬೇಕು. ವಿನ್ಯಾಸಗಳು ತುಂಬಾ ಹತ್ತಿರ ಹತ್ತಿರವಿದ್ದರೆ ಆ ವಿನ್ಯಾಸಗಳಿಂದ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಒಳ್ಳೆಯ ಆಕಾರದ ನಕ್ಷೆಗಳೂ ಒಂದಕ್ಕೊಂದು ಹತ್ತಿರವಿದ್ದರೆ, ತೊಂದರೆದಾಯಕ ಸ್ಪಂದನಗಳು ತಯಾರಾಗುತ್ತವೆ. ವಿನ್ಯಾಸ ಎಷ್ಟು ದೂರದೂರವಾಗಿರುತ್ತವೆಯೋ ಅಷ್ಟು ಅದರಿಂದ ಒಳ್ಳೆಯ ಸ್ಪಂದನಗಳು ಬರುತ್ತವೆ. ‘ಬಟ್ಟೆಗಳ ಮೇಲಿನ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ನಕ್ಷೆಗಳಿಂದ ಪ್ರಕ್ಷೇಪಿಸುವ ಸ್ಪಂದನಗಳಿಂದ ವಾತಾವರಣದ ಮೇಲೆ ಏನು ಪರಿಣಾಮವಾಗುತ್ತದೆ’, ಎಂಬುದನ್ನು ಅಧ್ಯಯನ ಮಾಡಲು ಒಂದು ಪರೀಕ್ಷಣೆಯನ್ನು ಮಾಡಲಾಯಿತು.

ಸಾತ್ತ್ವಿಕ ನಕ್ಷೆ

೧ ಇ ೧. ಸಾತ್ತ್ವಿಕ ವಿನ್ಯಾಸಗಳಿಂದ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದು : ಸಾತ್ತ್ವಿಕ ವಿನ್ಯಾಸದಲ್ಲಿ ನೀಲಿ ಬಣ್ಣದ ಒಂದೇ ರೀತಿಯ ಹಿನ್ನಲೆಯಲ್ಲಿ (ಪ್ಲೇನ್‌ ಬ್ಯಾಗ್ರೌಂಡ್’ ಮೇಲೆ) ಬಿಳಿ ಬಣ್ಣದ ಚಿಕ್ಕ ಮತ್ತು ಒಂದೇ ತರದ ನಯವಾದ ಹೂವುಗಳಿವೆ, ಹಾಗೆಯೇ ಅವುಗಳ ರಚನೆ ಬಿಡಿಬಿಡಿಯಾಗಿದೆ. ಆದ್ದರಿಂದ ಸಾತ್ತ್ವಿಕ ನಕ್ಷೆಗಳಿಂದ ತುಂಬಾ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸಿದವು.

ರಾಜಸಿಕ ನಕ್ಷೆ

೧ ಇ ೨. ರಾಜಸಿಕ ವಿನ್ಯಾಸಗಳಿಂದ ಅಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಮತ್ತು ಹೆಚ್ಚು ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದು : ರಾಜಸಿಕ ವಿನ್ಯಾಸಗಳಲ್ಲಿ ಗುಲಾಬಿ ಬಣ್ಣದ ಸಣ್ಣ-ಪುಟ್ಟ ಆಕಾರದ ಹೂವುಗಳು ಮತ್ತು ಕಂದುಬಣ್ಣದ ಮೊನಚಾದ ಎಲೆಗಳಿವೆ; ಹಾಗೆಯೇ ಅವುಗಳ ರಚನೆ ಬಿಡಿಬಿಡಿಯಾಗಿರದೇ ಒಂದಕ್ಕೊಂದು ತುಂಬಾ ಹತ್ತಿರ ಇವೆ. ಆದ್ದರಿಂದ ರಾಜಸಿಕ ನಕ್ಷೆಯಿಂದ ಅಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಮತ್ತು ಹೆಚ್ಚು ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾದವು.

ತಾಮಸಿಕ ನಕ್ಷೆ

೧ ಇ ೩. ತಾಮಸಿಕ ವಿನ್ಯಾಸಗಳಿಂದ ತುಂಬಾ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುವುದರ ಕಾರಣಗಳು : ಪರೀಕ್ಷಣೆಯಲ್ಲಿನ ತಾಮಸಿಕ ವಿನ್ಯಾಸದಿಂದ ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಚಿಕ್ಕ-ದೊಡ್ಡ ಆಕಾರಗಳಲ್ಲಿನ ತಲೆಬುರುಡೆಗಳ ಆಕೃತಿಗಳಿವೆ. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ’, ಇದು ಅಧ್ಯಾತ್ಮದಲ್ಲಿನ ಒಂದು ತತ್ತ್ವವಾಗಿದೆ. ಇದಕ್ಕನುಸಾರ ನಯವಾದ ತಾಜಾ ಹೂವು ನೋಡಿದ ನಂತರ ಮನಸ್ಸಿಗೆ ಆನಂದವಾಗುತ್ತದೆ; ಬದಲಿಗೆ ತಲೆಬುರುಡೆಯ ಆಕೃತಿಯ ಕಡೆಗೆ ನೋಡಿ ಮನಸ್ಸಿನಲ್ಲಿ ಭಯ ಮೂಡಿ ಅಸ್ವಸ್ಥ ಅನಿಸುತ್ತದೆ. ಹೂವುಗಳಿಂದ ಆನಂದದ ಸ್ಪಂದನಗಳು ಮತ್ತು ತಲೆಬುರುಡೆ ಗಳಿಂದ ತೊಂದರೆದಾಯಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ.

೨. ಸಾತ್ತ್ವಿಕ ಮತ್ತು ಅಸಾತ್ತ್ವಿಕ ಬಟ್ಟೆಗಳನ್ನು ಧರಿಸುವುದರಿಂದ ಸ್ತ್ರೀಯರ ಮೇಲಾಗುವ ಆಧ್ಯಾತ್ಮಿಕ ಪರಿಣಾಮ

ಯು.ಎ.ಎಸ್. ಉಪಕರಣ ದಿಂದ ಪರೀಕ್ಷಿಸುತ್ತಿರುವ ಶ್ರೀ. ಆಶೀಷ ಸಾವಂತ

ಜೀನ್ಸ್‌, ಟೀ-ಶರ್ಟ್ ಇಂತಹ ವಿದೇಶಿ ಪರಂಪರೆಯಿಂದ ಬಂದ ಉಡುಪುಗಳು ಸದ್ಯ ಹಿಂದೂ ಸ್ತ್ರೀಯರ ಜೀವನಶೈಲಿಯ ಅವಿಭಾಜ್ಯ ಘಟಕವಾಗಿವೆ. ಬದಲಾಗಿ ಹಿಂದೂ ಸಂಸ್ಕೃತಿಯ ಅಸ್ಮಿತೆಯನ್ನು ಪ್ರತಿನಿಧಿಸುವ ಪಾರಂಪರಿಕ ಒಂಬತ್ತು ಗಜದ ಸೀರೆಯ ಅಸ್ತಿತ್ವವು ಈಗ ಬಹುತೇಕ ಹಳ್ಳಿಗಳಿಗೇ ಸೀಮಿತವಾಗಿದೆ. ವ್ಯಕ್ತಿಯ ಉಡುಪುಗಳಿಂದ ತಿಳಿಯದೇ ಅವರ ಮನೋವೃತ್ತಿಯ ಮೇಲೆ ಪರಿಣಾಮವಾಗುತ್ತಿರುತ್ತದೆ. ಟೀ-ಶರ್ಟ್ ಜೀನ್ಸ್ ಇಂತಹ ಸದ್ಯದ ಪ್ರಚಲಿತ ರಾಜಸಿಕ-ತಾಮಸಿಕ ಉಡುಪುಗಳಿಂದ ಸ್ತ್ರೀಯರ ವರ್ತನೆ ಅಶ್ಲೀಲ ಮತ್ತು ಭೋಗವಾದಿಯಾಗುತ್ತದೆ, ಆರು ಗಜದ ಮತ್ತು ಒಂಬತ್ತು ಗಜದ ಸಾತ್ತ್ವಿಕ ಉಡುಪಿನಿಂದ ಮಹಿಳೆಯ ವರ್ತನೆಯು ಸಭ್ಯ ಮತ್ತು ಧರ್ಮಾಚರಣಿಯಾಗಿರುತ್ತದೆ. ಧರ್ಮಾ ಚರಣೆಯಿಂದ ಈಶ್ವರನ ಬಗೆಗಿನ ಭಕ್ತಿಭಾವವು ಉತ್ಪನ್ನವಾಗಿ ಈಶ್ವರಪ್ರಾಪ್ತಿಯ ಕಡೆಗೆ ವ್ಯಕ್ತಿಯ ಪ್ರವಾಸವು ಸಾಗುತ್ತದೆ.

ಮುಂದೆ ಕೊಟ್ಟಿರುವ ಕೋಷ್ಟಕದಿಂದ ಗಮನಕ್ಕೆ ಬರುವುದೇನೆಂದರೆ, ಸ್ತ್ರೀಯು ಅಸಾತ್ತ್ವಿಕ ಬಟ್ಟೆಗಳನ್ನು ಧರಿಸಿದಾಗ ಅವಳಲ್ಲಿನ ನಕಾರಾತ್ಮಕ ಊರ್ಜೆ ಹೆಚ್ಚಾಯಿತು. ತದ್ವಿರುದ್ಧ ಅವಳು ಸಾತ್ತ್ವಿಕ ಬಟ್ಟೆಗಳನ್ನು ಧರಿಸಿದ ನಂತರ ಅವಳಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವಳಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು.

೩. ಚಿಕ್ಕ ಮಕ್ಕಳು ಮತ್ತು ಸ್ತ್ರೀ-ಪುರುಷರ ‘ಫ್ಯಾಶನ್‌’ನ ಬಟ್ಟೆಗಳು

ಚಿಕ್ಕ ಮಕ್ಕಳಿಗೆ ಮತ್ತು ಸ್ತ್ರೀ-ಪುರುಷರಿಗಾಗಿ ಪೇಟೆಯಲ್ಲಿ ಹೊಸಹೊಸ ‘ಫ್ಯಾಶನ್‌’ನ ಬಟ್ಟೆಗಳು  (ಫ್ರಾಕ್, ಟೀ-ಶರ್ಟ್‌, ಜೀನ್ಸ್ ಪ್ಯಾಂಟ್, ಶರ್ಟ್‌-ಪ್ಯಾಂಟ್, ಪಂಜಾಬಿ ಉಡುಪು, ಘಾಗರಾ-ಪೋಲಕ, ಸೀರೆ ಇತ್ಯಾದಿ) ಮಾರಾಟಕ್ಕಾಗಿ ಲಭ್ಯವಿರುತ್ತವೆ. ಈ ಬಟ್ಟೆಗಳು ನೋಡಲು ಅತ್ಯಂತ ಆಕರ್ಷಕವಾಗಿರುತ್ತವೆ. ಇದರಲ್ಲಿನ ಕೆಲವು ಆಯ್ಕೆಯ ಬಟ್ಟೆಗಳ ಪರೀಕ್ಷಣೆ ಮಾಡಲಾಯಿತು. ಪರೀಕ್ಷಣೆಯಲ್ಲಿನ ಎಲ್ಲ ಬಟ್ಟೆಗಳಲ್ಲಿ ಅಲ್ಪ ಅಧಿಕ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿತು; ಆದರೆ ಅದರ ಪ್ರಮಾಣ ‘ಜೀನ್ಸ್ ಪ್ಯಾಂಟ್‌’ನಲ್ಲಿ ಅತ್ಯಧಿಕವಿತ್ತು. ಸೀರೆಯಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಮತ್ತು ಅತ್ಯಧಿಕ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು.

ಚಿಕ್ಕ ಮಕ್ಕಳು ಮತ್ತು ಸ್ತ್ರೀಯರ ಉಡುಪುಗಳಲ್ಲಿ ಹೊಲಿಗೆಯ ಪ್ರಮಾಣ ಹೆಚ್ಚಿರುತ್ತದೆ. ಬಟ್ಟೆಗಳಲ್ಲಿ ಎಷ್ಟು ಹೆಚ್ಚು ಹೊಲಿಗೆ ಇರುತ್ತದೆಯೋ ಅಷ್ಟು ಅದರಲ್ಲಿ ಹೆಚ್ಚು ನಕಾರಾತ್ಮಕ ಊರ್ಜೆ ಇರುವ ಸಾಧ್ಯತೆ ಇರುತ್ತದೆ. ಇದರ ವಿರುದ್ಧ ಬಟ್ಟೆಗಳ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಹೊಲಿಗೆ ಇದ್ದರೆ, ಅದರಲ್ಲಿ ನಕಾರಾತ್ಮಕ ಊರ್ಜೆ ಅತ್ಯಲ್ಪವಿರುತ್ತದೆ ಅಥವಾ ಇರುವುದಿಲ್ಲ. ಈ ಪರೀಕ್ಷಣೆಯಿಂದ ಅನುಭವ ಬಂದಿತು.

೪. ಸಾತ್ತ್ವಿಕ ಬಟ್ಟೆಗಳನ್ನು ಹೇಗೆ ಗುರುತಿಸಬೇಕು ?

ಹೆಚ್ಚಿನ ಬಟ್ಟೆಗಳು ನೋಡಲು ಅತ್ಯಂತ ಆಕರ್ಷಕವಾಗಿರುತ್ತವೆ; ಆದರೆ ಅವು ಸಾತ್ತ್ವಿಕವಾಗಿರುತ್ತವೆ ಎಂದೇನಿಲ್ಲ. ಬಟ್ಟೆಗಳಲ್ಲಿನ ಮಾಯಾವಿ ಸ್ಪಂದನಗಳಿಂದ ನಾವು ಅವುಗಳತ್ತ ಸಹಜ ಆಕರ್ಷಿಸಲ್ಪಡುತ್ತೇವೆ. ಆದ್ದರಿಂದ ಬಟ್ಟೆಗಳತ್ತ ಸ್ಥೂಲ ಕಣ್ಣುಗಳಿಂದ ನೋಡುವುದಕ್ಕಿಂತ ಮನಸ್ಸಿಗೆ ಏನು ಅರಿವಾಗುತ್ತದೆ, ಎಂಬುದರ ಅಧ್ಯಯನ ಮಾಡುವುದು ಆವಶ್ಯಕವಾಗಿದೆ.

ಬಟ್ಟೆಗಳ ಕಡೆಗೆ ನೋಡಿ ಮನಸ್ಸು ಪ್ರಸನ್ನವಾಗುವುದು, ಬಟ್ಟೆಯ ಬಣ್ಣ ಅಥವಾ ನಕ್ಷೆಯ ಕಡೆಗೆ ನೋಡಿ ಮನಸ್ಸಿಗೆ ಆನಂದವಾಗುವುದು ಅಥವಾ ಶಾಂತವೆನಿಸುವುದು, ಬಟ್ಟೆಗಳನ್ನು ಸ್ಪರ್ಶ ಮಾಡಿದ ನಂತರ ‘ಮನಸ್ಸಿಗೆ ಒಳ್ಳೆಯ ಸ್ಪಂದನಗಳು ಅರಿವಾಗುವುದು’, ಹೀಗೆ ಅನುಭವ ಬಂದರೆ ‘ಬಟ್ಟೆಗಳು ಸಾತ್ತ್ವಿಕವಾಗಿವೆ’, ಎಂದು ತಿಳಿಯಬೇಕು. ತದ್ವಿರುದ್ಧ ಬಟ್ಟೆಗಳ ಕಡೆಗೆ ನೋಡಿ ಮನಸ್ಸಿಗೆ ಜಡತ್ವ ಅನಿಸಿದರೆ, ಬಟ್ಟೆಗಳ ಬಣ್ಣ ಅಥವಾ ನಕ್ಷೆಯ ಕಡೆಗೆ ನೋಡಬಾರದು ಎಂದೆನಿಸುವುದು ಅಥವಾ ತೊಂದರೆ ದಾಯಕವೆನಿಸುವುದು, ಬಟ್ಟೆಗಳನ್ನು ಸ್ಪರ್ಶ ಮಾಡಿದ ನಂತರ ಮನಸ್ಸಿಗೆ ತೊಂದರೆದಾಯಕ ಸಂವೇದನಗಳ ಅರಿವಾಗುವುದು ಇತ್ಯಾದಿ ಅನುಭವಗಳು ಬಂದಿದ್ದರೆ ಬಟ್ಟೆಗಳು ಅಸಾತ್ತ್ವಿಕವಾಗಿವೆ, ಎಂದು ತಿಳಿಯಬೇಕು ಮತ್ತು ಅವುಗಳನ್ನು ತೆಗೆದುಕೊಳ್ಳಬಾರದು.

೫. ಬಟ್ಟೆಗಳನ್ನು ಖರೀದಿಸಿದ ನಂತರ ಅವುಗಳ ಶುದ್ಧಿಯನ್ನು ಮಾಡಿ ನಂತರವೇ ಅವುಗಳನ್ನು ಉಪಯೋಗಿಸಬೇಕು !

ಈ ಹಿಂದೆ ಬಟ್ಟೆಗಳನ್ನು ಖರೀದಿಸಿದ ನಂತರ ಅವುಗಳನ್ನು ಮೊದಲು ದೇವರ ಮುಂದೆ ಇಡುವ ಪದ್ಧತಿಯಿತ್ತು. ದೇವರಕೋಣೆಯಲ್ಲಿನ ದೇವರಿಂದ ಪ್ರಕ್ಷೇಪಿಸುವ ಚೈತನ್ಯದಿಂದ ಬಟ್ಟೆಗಳು ತುಂಬಿಕೊಳ್ಳುತ್ತವೆ, ಹಾಗೆಯೇ ‘ದೇವರ ಕೃಪೆಯಿಂದ ಬಟ್ಟೆಗಳು ಬಳಸಲು ಸಿಗುತ್ತಿವೆ’, ಎಂಬ ಕೃತಜ್ಞತಾಭಾವವನ್ನೂ ಮೂಡಿಸಲು ಸಹಾಯವಾಗುತ್ತದೆ. ಸದ್ಯ ಪೇಟೆಯಲ್ಲಿನ ರಜ-ತಮಪ್ರಧಾನ ವಾತಾವರಣದಿಂದ ಬಟ್ಟೆಗಳ ಮೇಲೆ ತೊಂದರೆದಾಯಕ ಆವರಣ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಬಟ್ಟೆಗಳ ಶುದ್ಧಿಯನ್ನು ಮಾಡದೇ ಅವುಗಳನ್ನು ಬಳಸಿದರೆ ಅವುಗಳಲ್ಲಿನ  ತೊಂದರೆದಾಯಕ ಸ್ಪಂದನಗಳ ತೊಂದರೆಯಾಗುತ್ತದೆ. ಆದ್ದರಿಂದ ಬಟ್ಟೆಗಳ ಶುದ್ಧಿಯನ್ನು ಮಾಡಿದ ನಂತರವೇ ಅವುಗಳನ್ನು ಬಳಸಬೇಕು.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ವಿ-ಅಂಚೆ : mav.research2014@gmail.com

ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.