ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಸಂತ ರಾಮಾನುಜಾಚಾರ್ಯ ಇವರ 216 ಅಡಿ ಎತ್ತರದ ಮೂರ್ತಿಯ ಲೋಕಾರ್ಪಣೆ

400 ಕೋಟಿ ರೂಪಾಯಿ ಬೆಲೆಬಾಳುವ ಅಷ್ಟಧಾತುವಿನಿಂದ ತಯಾರಿಸಿರುವ ಪ್ರಪಂಚದ ಎಲ್ಲಕ್ಕಿಂತ ಎತ್ತರದ ಮೂರ್ತಿ

ಭಾರತದ ಸಂವಿಧಾನವನ್ನು ಹೊಸದಾಗಿ ಬರೆಯುವ ಅವಶ್ಯಕತೆ ! – ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್

ಭಾರತದ ಸಂವಿಧಾನವನ್ನು ಹೊಸದಾಗಿ ಬರೆಯುವ ಅವಶ್ಯಕತೆ ಇದೆ. ದೇಶದ ಎಲ್ಲಾ ನಾಯಕರು ಭೇಟಿ ಮಾಡಿ ಅವರೊಂದಿಗೆ ಈ ವಿಷಯವಾಗಿ ಚರ್ಚಿಸುವ ಮೂಲಕ ಅವರಿಗೆ `ನನ್ನ ಜೊತೆ ಹೋರಾಡುವರೆ ?’, ಎಂದು ಕೇಳುವೆನು ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರು ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹಿಂದೂ ಸಂಘಟನೆಗಳ ವಿರೋಧದ ನಂತರ ಹಾಸ್ಯನಟ ಮುನಾವರ್ ಫಾರೂಕಿಯ ಭಾಗ್ಯನಗರದಲ್ಲಿನ (ತೆಲಂಗಾಣಾ) ಕಾರ್ಯಕ್ರಮ ರದ್ದು !

ಹಿಂದುತ್ವನಿಷ್ಠರ ಸಂಘಟನೆಗಳ ಒಗ್ಗಟ್ಟಿನ ಯಶಸ್ಸು ! ಇದೇ ರೀತಿಯಲ್ಲಿ ಹಿಂದೂಗಳೆಲ್ಲ ಒಗ್ಗೂಡಿದರೆ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸುವ ಧೈರ್ಯ ಯಾರೂ ಮಾಡುವುದಿಲ್ಲ !

‘ನಮಗೆ ಮತವನ್ನು ನೀಡಿದರೆ ೨೦೦ ರೂಪಾಯಿಯ ಮದ್ಯವನ್ನು ೫೦ ರೂಪಾಯಿಗೆ ಕೊಡುತ್ತೇವೆ ! (ಅಂತೆ)

ಭಾಜಪಕ್ಕೆ ಮತವನ್ನು ನೀಡಿದರೆ ೫೦ ರೂಪಾಯಿಯಲ್ಲಿ ಉತ್ತಮ ದರ್ಜೆಯ ಮದ್ಯ ನೀಡುವೆವು ಎಂದು ಭಾಜಪದ ತೆಲಂಗಾಣ ಪ್ರದೇಶಾಧ್ಯಕ್ಷರಾದ ಸೋಮೂ ವೀರರಾಜು ಆಶ್ವಾಸನೆ ನೀಡಿದ್ದಾರೆ.

‘ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ !’(ವಂತೆ)

ನಾನು ಜೀವಂತ ಇರುವ ವರೆಗೂ ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ, ಎಂದು ತೆಲಂಗಾಣಾದ ಕಾಂಗ್ರೆಸ್ ನಾಯಕ ರಶೀದ್ ಖಾನ್ ಇವರು ಬೆದರಿಕೆಯೊಡ್ಡಿದರು.

ವಸಿಮ್ ರಿಝವಿ ಇವರ ಶಿರಚ್ಛೇದ ಮಾಡುವವರಿಗೆ ೫೦ ಲಕ್ಷ ರೂಪಾಯಿ ನೀಡಲಾಗುವುದು !

ಕಾಂಗ್ರೆಸ್‌ನ ನಾಯಕ ಮಹಮ್ಮದ ಫಿರೋಜ್ ಖಾನ್ ಇವರು ‘ಶಿಯಾ ಸೆಂಟ್ರಲ್ ವಕ್ಫ ಬೋರ್ಡ್’ನ ಮಾಜಿ ಅಧ್ಯಕ್ಷ ಹಾಗೂ ಇತ್ತಿಚೆಗೆ ಹಿಂದೂಧರ್ಮ ಸ್ವೀಕರಿಸಿರುವ ಜಿತೇಂದ್ರ ನಾರಾಯಣ ಸಿಂಹ ತ್ಯಾಗಿ (ಪೂರ್ವಾಶ್ರಮದ ವಸಿಮ ರಿಝವಿ) ಇವರ ಶಿರಚ್ಛೇದ ಮಾಡಿ ಆ ತಲೆ ತಂದುಕೊಟ್ಟರೆ ಅವರಿಗೆ ೫೦ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದೆಂದು ಘೋಷಣೆ ಮಾಡಿದರು.

ಸಮಸ್ಯೆ ಬಗೆಹರಿಸಲು ಮೊದಲು ಮಧ್ಯಸ್ಥಿಕೆಯ ಪ್ರಯತ್ನ ಮಾಡಬೇಕು ! – ನ್ಯಾಯಾಧೀಶ ಎಂ.ವಿ. ರಮಣಾ

ಮಧ್ಯಸ್ಥಿಕೆಯ ಮೂಲಕ ಯಾವುದೇ ಸಮಸ್ಯೆಯನ್ನು ಕಡಿಮೆ ಸಮಯದಲ್ಲಿ ಬಗೆಹರಿಸಬೇಕು. ನ್ಯಾಯಾಲಯಕ್ಕೆ ಹೋಗಿ ಅದಕ್ಕಾಗಿ ಅಲೆದಾಡುವ ಸಮಯ ತಪ್ಪಿಸಬೇಕು. ಕೊನೆಯ ಕ್ಷಣದಲ್ಲಿ ನ್ಯಾಯಾಲಯದ ಸಹಾಯ ಪಡೆಯಬೇಕು, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎಂ.ವಿ. ರಮಣಾ ಇವರು ಇಲ್ಲಿ ಒಂದು ಕಾರ್ಯಕ್ರಮದ ಸಮಯದಲ್ಲಿ ಹೇಳಿದರು.

‘ಶ್ರೀ ಶೈಲಂ ಭ್ರ್ರಮರಾಂಬಿಕ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ’ದ ಪರಿಸರದಲ್ಲಿ ಇತರ ಧರ್ಮದವರಿಗೆ ಅಂಗಡಿ ತೆರೆಯಲು ಸಾಧ್ಯವಿಲ್ಲ !

ಆಂಧ್ರಪ್ರದೇಶದ ಶ್ರೀಶೈಲಂ ಅಲ್ಲಿಯ ‘ಶ್ರೀಶೈಲ ಭ್ರ್ರಮರಾಂಬಿಕಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ’ದ ಪರಿಸರದಲ್ಲಿ ಅನ್ಯಧರ್ಮೀಯರ ಅಂಗಡಿ ಖಾಲಿ ಮಾಡಲು ಮತ್ತು ಇನ್ನು ಮುಂದೆ ನಡೆಯುವ ಸಾರ್ವಜನಿಕ ಹರಾಜಿನಲ್ಲಿ ಈ ಸ್ಥಳ ಬೇರೆ ಧರ್ಮಿಯರಿಗೆ ನೀಡಬಾರದು, ಎಂದು ಆಂಧ್ರಪ್ರದೇಶದ ನ್ಯಾಯಾಲಯವು ಇತ್ತೀಚೆಗೆ ಸ್ಪಷ್ಟ ನಿರ್ಣಯ ನೀಡಿದೆ.

ನವರಾತ್ರೋತ್ಸವದ ನಿಮಿತ್ತ ತೆಲಂಗಣಾ ಹಾಗೂ ಆಂಧ್ರಪ್ರದೇಶದಲ್ಲಿನ ಕನ್ಯಕಾ ಪರಮೇಶ್ವರೀ ದೇವಿಯ ದೇವಸ್ಥಾನದಲ್ಲಿ ಕೋಟಿಗಟ್ಟಲೆ ರೂಪಾಯಿ ನೋಟುಗಳಿಂದ ಅಲಂಕಾರ !

ನವರಾತ್ರೋತ್ಸವದ ನಿಮಿತ್ತ ಕನ್ಯಕಾ ಪರಮೇಶ್ವರಿ ದೇವಿಯ ದೇವಾಲಯದಲ್ಲಿ ಕೋಟಿಗಟ್ಟಲೆ ರೂಪಾಯಿ ನೋಟುಗಳ ಅಲಂಕಾರ ಮಾಡಲಾಯಿತು. ಅದಕ್ಕಾಗಿ ಒಟ್ಟು ೪ ಕೋಟಿ ೪೪ ಲಕ್ಷ ೪೪ ಸಾವಿರ ೪೪೪ ರೂಪಾಯಿ ನಗದಿನ ಅಸಲೀ ನೋಟುಗಳನ್ನು ಬಳಸಲಾಗಿದೆ.

ಭಾಗ್ಯನಗರದಲ್ಲಿ ಮುಸಲ್ಮಾನ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ ಹಿಂದೂ ಹುಡುಗನನ್ನು ಥಳಿಸಿದ ಮತಾಂಧರು

ಕಳೆದ 15 ದಿನಗಳಲ್ಲಿ ಮುಸಲ್ಮಾನ ಹುಡುಗಿಯರೊಂದಿಗೆ ಸುತ್ತಾಡುತ್ತಿದ್ದ ಹಿಂದೂ ಹುಡುಗರ ಮೇಲೆ ದಾಳಿ ನಡೆದಂತಹ 5 ಘಟನೆಗಳು ಬೆಳಕಿಗೆ ಬಂದಿದೆ.