ದ್ವೇಷದ ಸಂಕೇತವಾಗಿರುವ ವ್ಯಕ್ತಿಗೆ ನಾನು ಉತ್ತರಿಸುವುದಿಲ್ಲ !

ಹಿಜಾಬ್ ಅನ್ನು ವಿರೋಧಿಸಿದ್ದಕ್ಕಾಗಿ ತಸ್ಲೀಮಾ ನಸ್ರೀನ್ ಅವರನ್ನು ಅಸಾದುದ್ದಿನ್ ಓವೈಸಿಯವರಿಂದ ಟೀಕೆ

(ಎಡದಿಂದ) ಅಸಾದುದ್ದಿನ್ ಓವೈಸಿ ಮತ್ತು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್

ಭಾಗ್ಯನಗರ (ತೆಲಂಗಾಣ) – ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಸಂದರ್ಶನವೊಂದರಲ್ಲಿ `ಹಿಜಾಬ್, ಬುರ್ಖಾ ಅಥವಾ ನಿಕಾಬ್ ಇವು ದಬ್ಬಾಳಿಕೆಯ ಸಂಕೇತಗಳಾಗಿವೆ’, ಎಂದು ಹೇಳಿದ್ದರು. ಈ ಬಗ್ಗೆ ಎಂ.ಐ.ಎಂ.ನ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿಯವರು ಟೀಕಿಸುತ್ತಾ, `ನಾನು ದ್ವೇಷದ ಸಂಕೇತವಾಗಿರುವ ವ್ಯಕ್ತಿಗೆ ಉತ್ತರ ನೀಡುವುದಿಲ್ಲ. ನಾನು ಇಂತಹ ವ್ಯಕ್ತಿಗೆ ಉತ್ತರಕೊಡುವದಿಲ್ಲ. ಆಕೆಗೆ ಭಾರತದಲ್ಲಿ ಆಶ್ರಯ ನೀಡಲಾಗಿದೆ. ಭಾರತದ ಭೂಭಾಗದಲ್ಲಿ ಜೀವಿಸುತ್ತದ್ದಾಳೆ. ತನ್ನ ದೇಶದಲ್ಲಿ ತನ್ನನ್ನು ಉಳಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಯ ಬಗ್ಗೆ ನಾನು ಮಾತನಾಡುವದಿಲ್ಲ’, ಎಂದು ಅವರು ಹೇಳಿದರು. ಬಾಂಗ್ಲಾದೇಶದಲ್ಲಿ ಮತಾಂಧರಿಂದ ಕೊಲ್ಲಬೇಕೆಂದು ಫತ್ವಾ ಹೊರಡಿಸಿದ ಹಿನ್ನೆಲೆಯಲ್ಲಿ ತಸ್ಲೀಮಾ ನಸ್ರೀನ್ ಭಾರತದಲ್ಲಿ ಆಶ್ರಯ ಪಡೆದಿದ್ದಾಳೆ. ಆಕೆ ಹಲವು ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದಾಳೆ.

ಅಸಾದುದ್ದೀನ್ ಓವೈಸಿ ತಸ್ಲೀಮಾ ಬಗ್ಗೆ ಮಾತನಾಡುತ್ತಾ,

1. ಉದಾರವಾದಿ ವ್ಯಕ್ತಿ ತಮ್ಮ ಆಯ್ಕೆಯ ಸ್ವಾತಂತ್ರ್ಯದ ಬಗ್ಗೆ ಮಾತ್ರ ಸಂತೋಷಪಡುತ್ತಾರೆ. ಉದಾರವಾದಿಗಳು `ಪ್ರತಿಯೊಬ್ಬ ಮುಸಲ್ಮಾನರು ಅವರಂತೆ ವರ್ತಿಸಬೇಕು’, ಎಂದು ಭಾವಿಸುತ್ತಾರೆ, ಆದರೆ ಬಲಪಂಥೀಯ ಕಟ್ಟರವಾದಿಗಳು ಸಂವಿಧಾನವು ನಮಗೆ(ಮುಸ್ಲಿಮರು) ನೀಡಿರುವ ನಮ್ಮ ಧಾರ್ಮಿಕ ಗುರುತನ್ನು ಬಿಟ್ಟುಕೊಡಬೇಕೆಂದು ಇಚ್ಛೆ ಇದೆ.

2. ಭಾರತೀಯ ಸಂವಿಧಾನವು ನನಗೆ ಆಯ್ಕೆ ಮಾಡಲು, ಆತ್ಮಸಾಕ್ಷಿಯನ್ನು ಹೊಂದಲು ಮತ್ತು ನನ್ನ ಧಾರ್ಮಿಕ ಗುರುತನ್ನು ಮುಂದುವರಿಸಲು ಸ್ವಾತಂತ್ರ್ಯವನ್ನು ನೀಡಿದೆ. ಭಾರತ ಜಾತ್ಯತಿತ ರಾಷ್ಟ್ರವಾಗಿದ್ದು, ಯಾರೇ ಆಗಲಿ ಯಾವುದೇ ವ್ಯಕ್ತಿಗೆ ಧರ್ಮವನ್ನು ಬಿಡಲು ಹೇಳಲು ಸಾಧ್ಯವಿಲ್ಲ. ಭಾರತವು ಬಹು ಸಂಸ್ಕ್ರತಿ, ಬಹು ಧರ್ಮಿಯ ದೇಶವಾಗಿದೆ; ಆದರೆ ಹೇಗೆ ವರ್ತಿಸಬೇಕು ಎಂದು ಯಾರೂ ಹೇಳಲಾರರು ಮತ್ತು ನನ್ನ ಧರ್ಮ ಅಥವಾ ನನ್ನ ಸಂಸ್ಕೃತಿಯನ್ನು ಬಿಡಲು ಯಾರೂ ಹೇಳುವದಿಲ್ಲ ಎಂದು ಹೇಳಿದರು.