ತೆಲಂಗಾಣಾ ರಾಷ್ಟ್ರ ಸಮಿತಿಯ ನೇತಾರರಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ

ಇಂತಹವರಿಗೆ ಶರಿಯತ್ ಕಾನೂನಿನ ಅನುಸಾರ ಕೈಕಾಲು ಕತ್ತರಿಸುವ ಶಿಕ್ಷೆಯನ್ನು ನೀಡಬೇಕು ಎಂದು ಯಾರಾದರೂ ಮನವಿ ಮಾಡಿದರೆ ಆಶ್ಚರ್ಯವೆನಿಸಬಾರದು !

ಭಾಗ್ಯನಗರ – ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ತೆಲಂಗಾಣಾ ರಾಷ್ಟ್ರ ಸಮಿತಿಯ ನೇತಾರ ಸಾಜಿದ ಖಾನನು ಓರ್ವ ೧೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಘಟನೆಯು ಫೆಬ್ರುವರಿ ೨೭ರಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ೩ ಜನರ ವಿರುದ್ಧ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ಅಪರಾಧ ದಾಖಲಿಸಿದ್ದಾರೆ. ಘಟನೆಯ ನಂತರ ಸಾಜಿದ ಖಾನನು ಪರಾರಿಯಾಗಿದ್ದು, ಪೊಲೀಸರು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಓರ್ವ ಮಹಿಳೆಯೂ ಇದ್ದಾರೆ. ಖಾನನು ನಿರ್ಮಲ ಜಿಲ್ಲೆಯಲ್ಲಿನ ಒಂದು ನಗರಪಾಲಿಕೆಯ ಪರಿಷತ್ತಿನ ಉಪಾಧ್ಯಕ್ಷನಾಗಿದ್ದನು. ಆರೋಪಿ ಮಹಿಳೆಯು ಸಂತ್ರಸ್ತೆಯನ್ನು ಕಾರ್ಯಕ್ರಮಕ್ಕೆ ಒಯ್ಯುವ ನೆಪ ಹೇಳಿ ಭಾಗ್ಯನಗರ (ಹೈದ್ರಾಬಾದ)ಕ್ಕೆ ಕರೆತಂದಳು. ಅಲ್ಲಿ ಆಕೆಯನ್ನು ಹೋಟೆಲಿನಲ್ಲಿ ಇರಿಸಲಾಯಿತು. ಅಲ್ಲಿಯೇ ಖಾನನು ಆಕೆಯ ಮೇಲೆ ಬಲಾತ್ಕಾರ ಮಾಡಿದನು. ಸಂತ್ರಸ್ತೆಯ ಆರೋಗ್ಯವು ಹದಗೆಟ್ಟ ನಂತರ ಈ ಘಟನೆಯು ಬಹಿರಂಗವಾಗಿದೆ. ಬಾಲ ಕಲ್ಯಾಣ ಸಮಿತಿಯು ಈ ಘಟನೆಯ ಮಾಹಿತಿಯನ್ನು ಪೊಲೀಸರಿಗೆ ನೀಡಿದೆ. ಖಾನನನ್ನು ಬಂಧಿಸಲು ಪೊಲೀಸರ ೪ ಗುಂಪುಗಳನ್ನು ಸಿದ್ಧಗೊಳಿಸಲಾಗಿರುವುದಾಗಿ ಪೊಲೀಸ ಅಧೀಕ್ಷರರಾದ ಪ್ರವೀಣ ಕುಮಾರರವರು ಹೇಳಿದ್ದಾರೆ.