ಮುಸ್ಲಿಮರನ್ನು ಕೆರಳಿಸಲು ಓವೈಸಿಯ ಪುನಃ ಪ್ರಯತ್ನ : ಕ್ಷೇತ್ರ ಬಿಡದಿರುವ ಸಲಹೆ !

ಭಾಗ್ಯನಗರ – ‘ಆಲ ಇಂಡಿಯಾ ಮಜಲಿಸ-ಎ-ಇತ್ತೆಹಾದುಲ-ಮುಸ್ಲಮಿನ’ (ಎ.ಐ.ಎಮ್.ಐ.ಎಮ್.) ಈ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸುದ್ದಿನ ಓವೈಸಿ ಇವರ ಒಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ‘ನಾವು ನಿಮ್ಮ ದಬ್ಬಾಳಿಕೆಗೆ ಹೆದರುವದಿಲ್ಲ, ತಾಳ್ಮೆಯಿಂದ ಹೋರಾಟ ಮಾಡುತ್ತೇವೆ, ಜಾಗ ಬಿಡುವದಿಲ್ಲ ನಾವೂ ಅಲ್ಲಾಹನ ಮಾರ್ಗದಲ್ಲಿ ನಡೆಯುತ್ತೇವೆ. ದೇಶದಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಲಾಗುತ್ತಿದೆ’, ಎಂದು ಹೇಳುತ್ತಿರುವುದು ಕಂಡು ಬರುತ್ತಿದೆ. ಜೊತೆಗೆ ಅವರು ಕ್ಷೇತ್ರ ಬಿಟ್ಟು ತೋಲಗದಂತೆ ಮುಸಲ್ಮಾನರಿಗೂ ಸಲಹೆ ನೀಡುತ್ತಿರುವುದು ಕಂಡುಬರುತ್ತಿದೆ.

ಶ್ರೀ ರಾಮನವಮಿಯ ದಿನದಂದು ಹಿಂಸಾಚಾರದ ಸುದ್ದಿಯನ್ನು ಓವೈಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಪೊಲೀಸರು ನಿರ್ದಿಷ್ಟ ಸಮುದಾಯದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಭಾಜಪ ಒಡೆದಾಳುವ ತಂತ್ರ ಅನುಸರಿಸುತ್ತಿದೆ ಎಂದು ಆರೋಪಿಸಿದ್ದರು.