ಭಾಗ್ಯನಗರ(ತೇಲಂಗಾಣಾ)ದಲ್ಲಿ ೧೦ ವರ್ಷದ ಹುಡುಗನ ಲೈಂಗಿಕ ಶೋಷಣೆ ಮಾಡಿದ ಪ್ರಕರಣದಲ್ಲಿ ಮೌಲ್ವಿಯ ಬಂಧನ !

(ಮೌಲ್ವಿ ಎಂದರೆ ಇಸ್ಲಾಂ ವಿದ್ವಾಂಸ)

ಹಿಂದೂ ಸಂತರ ಮೇಲೆ ಸುಳ್ಳು ಆರೋಪಗಳಾದಾಗ ಆ ವಿಷಯವನ್ನು ‘ಬ್ರೇಕಿಂಗ ನ್ಯೂಸ’ ಮಾಡುವ ಪ್ರಸಾರ ಮಾಧ್ಯಮಗಳು ಮೌಲ್ವಿಯ ಕುಕೃತ್ಯವನ್ನು ಮುಚ್ಚಿ ಹಾಕುತ್ತಾರೆ !

ಭಾಗ್ಯನಗರ (ತೇಲಂಗಾಣಾ) – ಇಲ್ಲಿಯ ದಾರೂಲ ಉಲೂಮ ಮದರಸಾದಲ್ಲಿ ೧೦ ವರ್ಷದ ಒಬ್ಬ ಹುಡುಗನ ಮೇಲೆ ಲೈಂಗಿಕ ಅತ್ಯಾಚಾರ ಮಾಡಿರುವ ಪ್ರಕರಣ ಇಲ್ಲಿಯ ಅರಬ್ಬಿ ಭಾಷೆ ಕಲಿಸುವ ೨೫ ವರ್ಷದ ಮೌಲಾನಾ ಶೋಯಬ ಅಖ್ತರನನ್ನು ಬಂಧಿಸಲಾಗಿದೆ. ಮೌಲವಿ ಅಖ್ತರ ಹುಡುಗನಿಗೆ ತೊಂದರೆ ನೀಡಿರುವುದು ತಿಳಿಯುತ್ತಲೇ ನೊಂದ ಹುಡುಗನ ಸಂಬಂಧಿಕರೊಂದಿಗೆ ಸ್ಥಳೀಯ ಜನರು ಮದರಸಾಗೆ ಸುತ್ತುವರೆದರು. ವೈದ್ಯಕೀಯ ಪರೀಕ್ಷಣೆಯ ನಂತರ ಆರೋಪಿಯ ವಿರುದ್ಧ ಕ್ರಮ ಜರುಗಿಸಲಾಯಿತು. ೨ ತಿಂಗಳ ಹಿಂದೆಯೇ ನೊಂದ ಬಾಲಕನು ಮದರಸಾದಲ್ಲಿ ಪ್ರವೇಶ ಪಡೆದಿದ್ದನು. ಫೆಬ್ರುವರಿ ೭ರ ರಾತ್ರಿ ಹುಡುಗನಿಗೆ ಸಹಿಸಲಾಗದಷ್ಟು ತೊಂದರೆಯಾಗುತ್ತಿರುವುದು ಸಂಬಂಧಿಕರ ಗಮನಕ್ಕೆ ಬಂದಿತು. ಈ ವಿಷಯದಲ್ಲಿ ಅವರು ಹುಡುಗನನ್ನು ವಿಚಾರಿಸಿದರು. ಆಗ ಹುಡುಗನು ಮೌಲಾನಾ ಅಖ್ತರನು ಮಾಡುತ್ತಿದ್ದ ಅತ್ಯಾಚಾರದ ವಿಷಯವನ್ನು ತಿಳಿಸಿದನು.

ಈ ಹಿಂದೆ ದೇಶದ ಕೆಲವು ಮದರಸಾಗಳಲ್ಲಿ ಜರುಗಿರುವ ಕೆಲವು ಕುಕೃತ್ಯಗಳು !

ಮದರಸಾಗಳಲ್ಲಿ ಕುಕೃತ್ಯಗಳಂತಹ ಪ್ರಕರಣಗಳು ಆಗಾಗ ಬಯಲಾಗುತ್ತಿರುತ್ತಿವೆ.

೧. ನವೆಂಬರ ೨೦೨೧ ರಲ್ಲಿ ದಾದರಾ ನಗರ ಹವೇಲಿಯ ಸಿಲವಾಸಾದಲ್ಲಿ ಒಬ್ಬ ಮೌಲವಿ(ಇಸ್ಲಾಂನ ಧಾರ್ಮಿಕ ಮುಖಂಡ) ಮೇಲೆ ಮದರಸಾದ ವಸತಿಗೃಹದಲ್ಲಿ ವಾಸಿಸುತ್ತ ಕಲಿಯುತ್ತಿರುವ ಬಾಲಕಿಯು ಬಲಾತ್ಕಾರ ಮಾಡಿರುವುದಾಗಿ ಆರೋಪಿಸಿದ್ದಳು.

೨. ಬಿಹಾರದ ಸೀತಾಮಡಿ ಜಿಲ್ಲೆಯಲ್ಲಿ ಮದರಸಾದಲ್ಲಿರುವ ಮೌಲಾನಾ ತಬರೆಜನು ಮದರಸಾದಲ್ಲಿ ಕಲಿಯುವ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ್ದರಿಂದ ಅವಳು ಗರ್ಭಿಣಿಯಾಗಿದ್ದಳು.

೩. ತುಮಕೂರು ಜಿಲ್ಲೆಯಲ್ಲಿ ಅಪ್ರಾಪ್ತ ಹುಡುಗಿಯ ಮೇಲೆ ಲೈಂಗಿಕ ಶೋಷಣೆ ಮಾಡಿರುವ ಪ್ರಕರಣದಲ್ಲಿ ಮುಫ್ತಿ(ಶರಿಯತ ಕಾನೂನು ಅರಿತಿರುವವನು) ಉಶರ್ರಫನಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ೧೧ ವರ್ಷಗಳ ಸೆರೆಮನೆ ಶಿಕ್ಷೆಯ ತೀರ್ಪು ನೀಡಿದ್ದರು.