ಕಾಶ್ಮೀರದಲ್ಲಾದ ಚಕಮಕಿಯಲ್ಲಿ ಸೈನ್ಯದ ೧ ಅಧಿಕಾರಿ ಹುತಾತ್ಮ ಹಾಗೂ ೧ ಉಗ್ರಗಾಮಿ ಹತ !

ರಾಜೌರಿಯ ಥಾನಾಮಂಡೀ ಭಾಗದಲ್ಲಿನ ಉಗ್ರಗಾಮಿಗಳೊಂದಿಗೆ ನಡೆದ ಚಕಮಕಿಯಲ್ಲಿ ಸೈನ್ಯದ ಅಧಿಕಾರಿಗಳೊಬ್ಬರು ಹುತಾತ್ಮರಾಗಿದ್ದು ಒಬ್ಬ ಉಗ್ರಗಾಮಿಯು ಹತನಾಗಿದ್ದಾನೆ. ಸುರಕ್ಷಾದಳದವರಿಗೆ ಅಲ್ಲಿ ಉಗ್ರಗಾಮಿಗಳಿರುವುದರ ಮಾಹಿತಿ ಸಿಕ್ಕಿತ್ತು.

ಜಮ್ಮುವಿನಲ್ಲಿನ ಬಿಜೆಪಿ ನಾಯಕನ ಮನೆಯ ಮೇಲಾದ ಗ್ರೆನೆಡ್ ದಾಳಿಯಲ್ಲಿ 3 ವರ್ಷದ ಹುಡುಗನ ಸಾವು

ಜಿಹಾದಿ ಭಯೋತ್ಪಾದಕರು ಬಿಜೆಪಿಯ ನಾಯಕ ಜಸಬಿರ ಸಿಂಹ ಇವರ ಮನೆಯ ಮೇಲೆ ಎಸೆದ ಗ್ರೆನೆಡ್ ನಿಂದ ವೀರ ಸಿಂಹ ಹೆಸರಿನ ಒಂದು 3 ವರ್ಷದ ಹುಡುಗನು ಮೃತಪಟ್ಟಿದ್ದಾನೆ.

ಜಮ್ಮು-ಕಾಶ್ಮೀರದ ೧೪ ಜಿಲ್ಲೆಗಳಲ್ಲಿ ಪಾಕ್‌ ಪ್ರೇಮಿ ಜಮಾತ್‌-ಎ-ಇಸ್ಲಾಮೀಯ ೪೫ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ದಾಳಿ

ರಾಷ್ಟ್ರೀಯ ತನಿಖಾ ದಳ, ಜಮ್ಮೂ-ಕಾಶ್ಮೀರದ ಪೊಲೀಸ್‌ ಹಾಗೂ ಕೇಂದ್ರೀಯ ಮೀಸಲು ಪಡೆಯ ಪೊಲೀಸ ದಳವು ಸೇರಿ ರಾಜ್ಯದ ೧೪ ಜಿಲ್ಲೆಗಳಲ್ಲಿ ಪಾಕ್‌ಪ್ರೇಮಿ ಜಮಾತ್‌-ಎ-ಇಸ್ಲಾಮಿ ಸಂಘಟನೆಗೆ ಸಂಬಂಧಪಟ್ಟ ೪೫ ಸ್ಥಳಗಳ ಮೇಲೆ ದಾಳಿ ನಡೆಸಿದೆ.

ಕಠುವಾ (ಜಮ್ಮು – ಕಾಶ್ಮೀರ) ನಲ್ಲಿನ ಅಣೆಕಟ್ಟಿನಲ್ಲಿ ಕುಸಿದು ಬಿದ್ದ ಭಾರತೀಯ ಸೈನ್ಯದ ‘ಧ್ರುವ’ ಹೆಲಿಕಾಪ್ಟರ್!

ಜಗತ್ತಿನಲ್ಲಿ ಕೇವಲ ಭಾರತದ ವಾಯುದಳ, ಭೂದಳ ಹಾಗೂ ನೌಕಾದಳದ ವಿಮಾನಗಳು ಹಾಗೂ ಹೆಲಿಕಾಪ್ಟರ್ ಗಳು ಸಂಪತ್ಕಾಲದಲ್ಲಿಯೇ ಕುಸಿದು ಬೀಳುವುದು ಭಾರತಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ!

ಜಮ್ಮು-ಕಾಶ್ಮೀರದಲ್ಲಿ ಕಲ್ಲುತೂರಾಟ ಮಾಡುವವರಿಗೆ ಸರಕಾರಿ ಕೆಲಸ ಮತ್ತು ಪಾಸ್‍ಪೋರ್ಟ್ ಸಿಗುವುದಿಲ್ಲ !

ರಾಜ್ಯದಲ್ಲಿ ಕಲ್ಲುತೂರಾಟ ಮಾಡುವವರಿಗೆ ಸರಕಾರಿ ಕೆಲಸ ಸಿಗುವುದಿಲ್ಲ, ಜೊತೆಗೆ ಪಾಸ್‍ಪೋರ್ಟ್ ನೀಡಲಾಗುವುದಿಲ್ಲ, ಎಂದು ಸರಕಾರದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಆದೇಶವನ್ನೂ ಜಾರಿಗೊಳಿಸಲಾಗಿದೆ.

ಭಯೋತ್ಪಾದಕರಿಂದ ದೇವಾಲಯಗಳ ಮೇಲೆ ದಾಳಿ ಮಾಡುವ ಸಂಚು !

ರಾಜ್ಯದ ದೇವಾಲಯಗಳ ಮೇಲೆ ದಾಳಿ ಮಾಡುವ ಸಂಚನ್ನು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ರಾಜ್ಯದ ೧೪ ಸ್ಥಳಗಳಲ್ಲಿ ದಾಳಿ ನಡೆಸಿದೆ. ಕಳೆದ ವಾರದಲ್ಲಿ ಪೊಲೀಸರು ಇಬ್ಬರು ಭಯೋತ್ಪಾದಕರನ್ನು ಸ್ಪೋಟಕ ಸಹಿತ ಬಂಧಿಸಿದ್ದರು.

ಜಮ್ಮು – ಕಾಶ್ಮೀರದಲ್ಲಿ ಏಕಕಾಲದಲ್ಲಿ ಮೂರು ಸ್ಥಳಗಳಲ್ಲಿ ಅನುಮಾನಾಸ್ಪದ ಡ್ರೋನ್‍ಗಳು ಪತ್ತೆ !

ರಾಜ್ಯದಲ್ಲಿ ಡ್ರೋನ್‍ಗಳು (ಮಾನವರಹಿತ ವೈಮಾನಿಕ ವಾಹನಗಳು) ಈಗಲೂ ಕಂಡುಬರುತ್ತವೆ. ಜುಲೈ 29 ರಂದು ರಾತ್ರಿ ಪಾಕಿಸ್ತಾನದ ಡ್ರೋನ್‍ಗಳು ಸಾಂಬಾ ಜಿಲ್ಲೆಯ 3 ಸ್ಥಳಗಳಲ್ಲಿ ಹಾರುತ್ತಿರುವುದು ಕಂಡುಬಂದಿದೆ.

ಜಿಹಾದಿ ಉಗ್ರಗಾಮಿಗಳಿಂದ ಜಮ್ಮುವಿನ ದೇವಾಲಯಗಳ ಮೇಲೆ ಆಕ್ರಮಣ ಮಾಡುವ ಷಡ್ಯಂತ್ರ !

ಜಿಹಾದಿ ಉಗ್ರಗಾಮಿಗಳಿಗೆ ಧರ್ಮ(ಪಂಥ) ಇರುವುದರಿಂದಲೇ ಅವರು ತಮ್ಮ ಧಾರ್ಮಿಕ ಸ್ಥಳಗಳ ಮೇಲಲ್ಲ, ಹಿಂದೂಗಳ ದೇವಾಲಯಗಳ ಮೇಲೆ ಆಕ್ರಮಣ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

ಜಮ್ಮು-ಕಾಶ್ಮೀರದಲ್ಲಿನ 5 ಜಿಲ್ಲೆಗಳ 7 ಸ್ಥಳಗಳಲ್ಲಿ ಕಾಶ್ಮೀರಿ ಹಿಂದೂಗಳಿಗೋಸ್ಕರ 2 ಸಾವಿರ 744 ಮನೆಗಳನ್ನು ನಿರ್ಮಿಸುವೆವು !

ಕಾಶ್ಮೀರಿ ಹಿಂದೂಗಳಿಗೋಸ್ಕರ ಮನೆ ಕಟ್ಟಿದರೂ, ‘ಅದನ್ನು ರಕ್ಷಿಸುವವರು ಯಾರು?’ ಎಂಬುದು ಮೂಲ ಪ್ರಶ್ನೆ. ಇಂದು ಕಾಶ್ಮೀರದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ, ಇದು ವಸ್ತುಸ್ಥಿತಿಯಾಗಿದೆ !

ಭಾರತದಲ್ಲಿನ ಏಕೈಕ ಮುಸಲ್ಮಾನ ಪ್ರಾಬಲ್ಯವಿರುವ ರಾಜ್ಯವನ್ನು ಭಾಜಪವು ವಿಭಜಿಸಿತು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿಯವರ ಆರೋಪ

ಮುಸಲ್ಮಾನ ಪ್ರಾಬಲ್ಯ ದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಹೇಗಿದೆ ಎಂಬುದನ್ನು ಇಡೀ ಪ್ರಪಂಚವೇ ನೋಡಿದೆ ಮತ್ತು ಬಹುಸಂಖ್ಯಾತ ಹಿಂದೂ ದೇಶದ ಮುಸಲ್ಮಾನರು ಹೇಗಿದ್ದಾರೆ ಇದನ್ನು ಸಹ ಪ್ರಪಂಚ ನೋಡಿದೆ ಇದನ್ನು ಮೆಹಬೂಬಾ ಮಫ್ತಿಯವರು ಯಾವಾಗಲೂ ನೆನಪಿನಲ್ಲಿ ಇಡಬೇಕು.