ಕಠುವಾ (ಜಮ್ಮು – ಕಾಶ್ಮೀರ) ನಲ್ಲಿನ ಅಣೆಕಟ್ಟಿನಲ್ಲಿ ಕುಸಿದು ಬಿದ್ದ ಭಾರತೀಯ ಸೈನ್ಯದ ‘ಧ್ರುವ’ ಹೆಲಿಕಾಪ್ಟರ್!

ಇಬ್ಬರೂ ವಿಮಾನ ಚಾಲಕರು ನಾಪತ್ತೆ

ಜಗತ್ತಿನಲ್ಲಿ ಕೇವಲ ಭಾರತದ ವಾಯುದಳ, ಭೂದಳ ಹಾಗೂ ನೌಕಾದಳದ ವಿಮಾನಗಳು ಹಾಗೂ ಹೆಲಿಕಾಪ್ಟರ್ ಗಳು ಸಂಪತ್ಕಾಲದಲ್ಲಿಯೇ ಕುಸಿದು ಬೀಳುವುದು ಭಾರತಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ!

ಶ್ರೀನಗರ (ಜಮ್ಮು – ಕಾಶ್ಮೀರ) – ಭಾರತೀಯ ಸೈನ್ಯದ ಭಾರತದಲ್ಲಿಯೇ ನಿರ್ಮಾಣವಾದ `ಧ್ರುವ’ ಹೆಲಿಕಾಪ್ಟರ್ ಕಠುವಾ ಜಿಲ್ಲೆಯಲ್ಲಿನ ರಣಜಿತ ಸಾಗರ ಅಣೆಕಟ್ಟಿನಲ್ಲಿ ಬೆಳಗ್ಗೆ ಕುಸಿದುಬಿದ್ದಿತ್ತು. ಇದರಲ್ಲಿ ಇಬ್ಬರು ವಿಮಾನ ಚಾಲಕರಿದ್ದರು. ತರಬೇತಿಗಾಗಿ ಹೆಲಿಕಾಪ್ಟರನ್ನು ಹಾರಾಟ ಮಾಡಿಸಲಾಗಿತ್ತು. ಅಣೆಕಟ್ಟಿನ ಮೇಲೆ ಸುತ್ತು ಹೊಡೆಯುವಾಗ ಅದು ಕುಸಿದುಬಿದ್ದಿತ್ತು. ಘಟನೆಯ ಬಗ್ಗೆ ತಿಳಿಯುತ್ತಲೆ ಎನ್. ಡಿ. ಆರ್. ಎಫ್ ಪಡೆಯು ಘಟನಾ ಸ್ಥಳಕ್ಕೆ ತಲುಪಿ ಸಹಾಯಕಾರ್ಯವನ್ನು ಆರಂಭಿಸಿದೆ. ಹಾಗೆಯೇ ಶೋಧ ಕಾರ್ಯಕ್ಕಾಗಿ ಜಲಾಂತರ್ಗಾಮಿಗಳ ಸಹಾಯವನ್ನು ಪಡೆಯಲಾಗುತ್ತಿದೆ. ಈ ಘಟನೆಯು ಹೇಗೆ ನಡೆಯಿತು ಎಂಬುದರ ಮಾಹಿತಿ ಇನ್ನುವರೆಗೂ ದೊರೆತಿಲ್ಲ.