ಭಾರತದಲ್ಲಿನ ಏಕೈಕ ಮುಸಲ್ಮಾನ ಪ್ರಾಬಲ್ಯವಿರುವ ರಾಜ್ಯವನ್ನು ಭಾಜಪವು ವಿಭಜಿಸಿತು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿಯವರ ಆರೋಪ

* ಪ್ರಪಂಚದ ಏಕೈಕ ಹಿಂದೂ ಬಹುಸಂಖ್ಯಾತ ದೇಶವನ್ನು ವಿಭಜಿಸಿ 10 ಲಕ್ಷ ಹಿಂದೂಗಳ ಹತ್ಯೆಯನ್ನು ಯಾರು ಮಾಡಿದರು. ಇದನ್ನು ಮೆಹಬೂಬಾ ಮುಫ್ತಿ ಅವರು ಯಾಕೆ ಹೇಳುತ್ತಿಲ್ಲ ?

* ಮುಸಲ್ಮಾನರ ಪ್ರಾಬಲ್ಯವಿರುವ ಕಾಶ್ಮೀರದಿಂದ ನಾಲ್ಕುವರೆ ಲಕ್ಷ ಹಿಂದೂಗಳನ್ನು ಯಾರು ಮತ್ತೆ ಯಾಕೆ ಓಡಿಸಿದರು? ಸಹಸ್ರಾರು ಹಿಂದುಗಳಿಗೆ ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಹೋಗಬೇಕೆಂದು ಮಸೀದಿಯಿಂದ ಯಾರು ಹೇಳಿದರು? ಅವರ ಹತ್ಯೆಯನ್ನು ಯಾರು ಮಾಡಿದರು? ಇದನ್ನು ಮೆಹಬೂಬಾ ಮುಫ್ತಿ ಅವರು ಯಾಕೆ ಹೇಳುವುದಿಲ್ಲ?

* ಮುಸಲ್ಮಾನ ಪ್ರಾಬಲ್ಯ ದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಹೇಗಿದೆ ಎಂಬುದನ್ನು ಇಡೀ ಪ್ರಪಂಚವೇ ನೋಡಿದೆ ಮತ್ತು ಬಹುಸಂಖ್ಯಾತ ಹಿಂದೂ ದೇಶದ ಮುಸಲ್ಮಾನರು ಹೇಗಿದ್ದಾರೆ ಇದನ್ನು ಸಹ ಪ್ರಪಂಚ ನೋಡಿದೆ ಇದನ್ನು ಮೆಹಬೂಬಾ ಮಫ್ತಿಯವರು ಯಾವಾಗಲೂ ನೆನಪಿನಲ್ಲಿ ಇಡಬೇಕು.

ಮೆಹಬೂಬಾ ಮಫ್ತಿ

ಶ್ರೀನಗರ – (ಜಮ್ಮು ಕಾಶ್ಮೀರ್) ಇದು ದುರ್ದೈವದ ಸಂಗತಿಯೆಂದರೆ ಭಾರತದ ಏಕಮಾತ್ರ ಮುಸಲ್ಮಾನ ಪ್ರಾಬಲ್ಯಯುತ ರಾಜ್ಯವನ್ನು ವಿಭಜಿಸಲಾಯಿತು ಮತ್ತು ಅದನ್ನು ಭಾರತದ ಸಂವಿಧಾನವಲ್ಲ. ಅದನ್ನು ಒಂದು ಪಕ್ಷದವರು ಮಾಡಿದ್ದಾರೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಯವರು ತಮ್ನ ಪಕ್ಷದ 22 ನೇ ವಾರ್ಷಿಕ ದಿನದ ಕಾರ್ಯಕ್ರಮದಲ್ಲಿ ಆರೋಪವನ್ನು ಮಾಡಿದರು. ಆ ಸಮಯದಲ್ಲಿ ಅವರು ಜಮ್ಮು-ಕಾಶ್ಮೀರಕ್ಕೆ ಕೊಟ್ಟಿರುವ ವಿಶೇಷ ರಾಜ್ಯದ ಸ್ಥಾನಮಾನವನ್ನು ಬಡ್ಡಿ ಸಹಿತವಾಗಿ ಹಿಂತಿರುಗಿಸಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದಾರೆ. ಮೆಹಬೂಬಾ ಮುಫ್ತಿಯವರು, ‘ನಮ್ಮ ಪಕ್ಷವು ರಾಜ್ಯದಲ್ಲಿ ಶಾಂತಿಗಾಗಿ ಮತ್ತು ಜನರ ಅಧಿಕಾರಕ್ಕಾಗಿ ಯಾವಾಗಲೂ ಹೋರಾಟ ಮಾಡುತ್ತಲಿರುವುದು. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮತ್ತು ಇಲ್ಲಿಯ ರಕ್ತಪಾತವನ್ನು ನಿಲ್ಲಿಸಲು ಪಾಕ ಜೊತೆ ಚರ್ಚೆಯನ್ನು ಮಾಡುವುದು ತಪ್ಪಲ್ಲ, ಎಂದು ಹೇಳಿದರು.