ಜಮ್ಮು – ಕಾಶ್ಮೀರದಲ್ಲಿ ಏಕಕಾಲದಲ್ಲಿ ಮೂರು ಸ್ಥಳಗಳಲ್ಲಿ ಅನುಮಾನಾಸ್ಪದ ಡ್ರೋನ್‍ಗಳು ಪತ್ತೆ !

ಭದ್ರತಾ ಪಡೆಗಳ ಗುಂಡುಹಾರಾಟದ ನಂತರ ಹಿಮ್ಮೆಟ್ಟಿದ ಡ್ರೋನ್‍ಗಳು !

ಪಾಕಿಸ್ತಾನದ ಡ್ರೋನ್‍ಗಳು ಭಾರತದಲ್ಲಿ ನುಸುಳಿದಂತೆ, ಭಾರತವೂ ಡ್ರೋನ್‍ಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿ ಏಕೆ ಕಾರ್ಯಾಚರಣೆ ಮಾಡುವುದಿಲ್ಲ ?

( ಪ್ರಾತಿನಿಧಿಕ ಚಿತ್ರ )

ಶ್ರೀನಗರ (ಜಮ್ಮು – ಕಾಶ್ಮೀರ) – ರಾಜ್ಯದಲ್ಲಿ ಡ್ರೋನ್‍ಗಳು (ಮಾನವರಹಿತ ವೈಮಾನಿಕ ವಾಹನಗಳು) ಈಗಲೂ ಕಂಡುಬರುತ್ತವೆ. ಜುಲೈ 29 ರಂದು ರಾತ್ರಿ ಪಾಕಿಸ್ತಾನದ ಡ್ರೋನ್‍ಗಳು ಸಾಂಬಾ ಜಿಲ್ಲೆಯ 3 ಸ್ಥಳಗಳಲ್ಲಿ ಹಾರುತ್ತಿರುವುದು ಕಂಡುಬಂದಿದೆ. ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ ನಂತರ ಡ್ರೋನ್‍ಗಳು ಹಿಮ್ಮೆಟ್ಟಿದವು. ಅಧಿಕಾರಿಗಳು ನೀಡಿದ ಮಾಹಿತಿಗನುಸಾರ, ರಾತ್ರಿ ಎಂಟುವರೆಯಿಂದ ಒಂಬತ್ತುವರೆಯ ಸಮಯದಲ್ಲಿ ಬರಿ-ಬ್ರಾಹ್ಮಣ, ಚಿಲಾದ್ಯಾ ಮತ್ತು ಗಾಗವಾಲ್ ಪ್ರದೇಶಗಳಲ್ಲಿ ಏಕಕಾಲದಲ್ಲಿ ಡ್ರೋನ್‍ಗಳು ಕಂಡು ಬಂದವು. ಈ ಪೈಕಿ ಎರಡು ಡ್ರೋನ್‍ಗಳು ಮಿಲಿಟರಿ ನೆಲೆಯ ಬಳಿ ಮತ್ತು ಒಂದು ಇಂಡೋಯೊ-ಟಿಬೆಟಿಯನ್ ಪೊಲೀಸ್ ಠಾಣೆಯ ಬಳಿ ಕಂಡು ಬಂದವು.