ಜಮ್ಮು-ಕಾಶ್ಮೀರದಲ್ಲಿ ಕಲ್ಲುತೂರಾಟ ಮಾಡುವವರಿಗೆ ಸರಕಾರಿ ಕೆಲಸ ಮತ್ತು ಪಾಸ್‍ಪೋರ್ಟ್ ಸಿಗುವುದಿಲ್ಲ !

ಕೇಂದ್ರ ಸರಕಾರವು ಸಂಪೂರ್ಣ ದೇಶದಲ್ಲಿ ಇಂತಹ ನಿರ್ಧಾರವನ್ನು ಕೈಗೊಳ್ಳಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ.

ಶ್ರೀನಗರ (ಜಮ್ಮು-ಕಾಶ್ಮೀರ) – ರಾಜ್ಯದಲ್ಲಿ ಕಲ್ಲುತೂರಾಟ ಮಾಡುವವರಿಗೆ ಸರಕಾರಿ ಕೆಲಸ ಸಿಗುವುದಿಲ್ಲ, ಜೊತೆಗೆ ಪಾಸ್‍ಪೋರ್ಟ್ ನೀಡಲಾಗುವುದಿಲ್ಲ, ಎಂದು ಸರಕಾರದಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಆದೇಶವನ್ನೂ ಜಾರಿಗೊಳಿಸಲಾಗಿದೆ.