ಜಮ್ಮು-ಕಾಶ್ಮೀರದಲ್ಲಿನ 5 ಜಿಲ್ಲೆಗಳ 7 ಸ್ಥಳಗಳಲ್ಲಿ ಕಾಶ್ಮೀರಿ ಹಿಂದೂಗಳಿಗೋಸ್ಕರ 2 ಸಾವಿರ 744 ಮನೆಗಳನ್ನು ನಿರ್ಮಿಸುವೆವು !

ಉದ್ಯೋಗದ ನಿಮಿತ್ತ 3 ಸಾವಿರ 841 ಕಾಶ್ಮೀರಿ ಹಿಂದೂಗಳು ಕಣಿವೆಗೆ ವಾಪಸ್ಸು !

ಕಾಶ್ಮೀರಿ ಹಿಂದೂಗಳಿಗೋಸ್ಕರ ಮನೆ ಕಟ್ಟಿದರೂ, ‘ಅದನ್ನು ರಕ್ಷಿಸುವವರು ಯಾರು?’ ಎಂಬುದು ಮೂಲ ಪ್ರಶ್ನೆ. ಇಂದು ಕಾಶ್ಮೀರದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ, ಇದು ವಸ್ತುಸ್ಥಿತಿಯಾಗಿದೆ !

( ಸಾಂಕೇತಿಕ ಛಾಯಾಚಿತ್ರ )

ಶ್ರೀನಗರ (ಜಮ್ಮೂ-ಕಾಶ್ಮೀರ) – ಜಮ್ಮೂ-ಕಾಶ್ಮೀರದಲ್ಲಿನ ಉಪ ರಾಜ್ಯಪಾಲರಾದ ಮನೋಜ ಸಿನ್ಹಾರವರ ನೇತೃತ್ವದಡಿಯಲ್ಲಿ ಶಾಸಕೀಯ ಪರಿಷತ್ತು ವರ್ಷ 2015ರಲ್ಲಿ ಪ್ರಧಾನಮಂತ್ರಿ ವಿಕಾಸ ಪ್ಯಾಕೇಜಿನ ಅಂತರ್ಗತ ಕಾಶ್ಮೀರ ಕಣಿವೆಯಿಂದ ಸ್ಥಳಾಂತರಗೊಂಡ ಕಾಶ್ಮೀರಿ ಹಿಂದೂಗಳಿಗೋಸ್ಕರ 2 ಸಾವಿರ 744 ಮನೆಗಳನ್ನು ನಿರ್ಮಿಸಲು 5 ಜಿಲ್ಲೆಗಳಲ್ಲಿನ 7 ಸ್ಥಾನಗಳಲ್ಲಿ ಭೂಮಿಯನ್ನು ಹಸ್ತಾಂತರಗೊಳಿಸಲು ಸಮ್ಮತಿ ನೀಡಲಾಗಿದೆ. ಈ ಮನೆಗಳಿಗೆ 356 ಕೋಟಿ ರೂಪಾಯಿಗಳು ಖರ್ಚಾಗುವುದು ಅಪೇಕ್ಷಿತವಿದೆ. ನಿರ್ಮಾಣವನ್ನು ಒಂದುವರೆ ವರ್ಷಗಳ ಒಳಗೆ ಪೂರ್ಣಗೊಳಿಸಲಾಗುವುದು. ಮತ್ತೊಂದು ಕಡೆ ಕೇಂದ್ರ ಸರಕಾರವು ಸಂಸತ್ತಿನಲ್ಲಿ ಪ್ರಧಾನಮಂತ್ರಿ ಪುನರ್ವಸತಿ ಪ್ಯಾಕೇಜ್‍ನ ಅಂತರ್ಗತವಾಗಿ ಉದ್ಯೋಗ ಪಡೆದುಕೊಳ್ಳಲು 3 ಸಾವಿರ 841 ಕಾಶ್ಮೀರಿ ಹಿಂದೂಗಳು ಕಣಿವೆಗೆ ಮರಳಿದ್ದಾರೆ.