ಸೀತಾಮಾತೆಯ ಸ್ವಯಂವರದ ಕಥೆ ಎಲ್ಲರಿಗೂ ತಿಳಿದಿದೆ. ಸೀತಾಮಾತೆಯ ತಂದೆ ಜನಕ ಮಹಾರಾಜರು ರಾಜಸಭೆಯಲ್ಲಿ ‘ಯಾರು ಭಗವಂತ ಶಿವನ ಧನುಷ್ಯದ ಹೆದೆ (ಬಿಲ್ಲಿನ ದಾರ) ಏರಿಸುವರೋ ಅವರ ಜೊತೆಗೆ ಸೀತೆಯ ವಿವಾಹವಾಗುವುದು.’ ಎಂದು ಘೋಷಿಸಿದ್ದರು. ಆ ಧನುಷ್ಯವನ್ನು ಸಾಕ್ಷಾತ ಭಗವಾನ ಶಂಕರನು ಜನಕ ಮಹಾರಾಜನಿಗೆ ನೀಡಿದ್ದನು. ಸೀತಾಮಾತೆಯ ಸ್ವಯಂವರಕ್ಕೆ ಅನೇಕ ರಾಜರು ಬಂದಿದ್ದರು. ಅದರಲ್ಲಿ ರಾವಣನೂ ಇದ್ದನು; ಆದರೆ ಯಾವುದೇ ರಾಜನಿಗೇ ಶಿವಧನುಷ್ಯವನ್ನು ಎತ್ತಲೂ ಸಾಧ್ಯವಾಗಲಿಲ್ಲ. ಆಗ ಪ್ರಭು ಶ್ರೀರಾಮನು ಈ ಧನುಷ್ಯವನ್ನು ಎತ್ತಿದನು ಮತ್ತು ಹೆದೆ ಏರಿಸುವಾಗ ಅದು ಮುರಿಯಿತು. ಅದರ ನಂತರ ಶ್ರೀರಾಮ ಮತ್ತು ಸೀತಾ ಇವರ ವಿವಾಹವಾಯಿತು. ಸೀತಾ ಮಾತೆಯು ಅಯೋಧ್ಯೆಗೆ ಬಂದಳು; ಆದರೆ ಆ ಧನುಷ್ಯವು ಮುಂದೆ ಏನಾಯಿತು ? ಆ ಧನುಷ್ಯ ಎಲ್ಲಿ ಇದೆ ? ಇದು ಇಲ್ಲಿ ತಿಳಿಸುತ್ತಿದ್ದೇವೆ.
ಧಾರ್ಮಿಕ ಶ್ರದ್ಧೆಯ ಪ್ರಕಾರ ಹೀಗೆ ನಂಬಲಾಗಿದೆ ಏನೆಂದರೆ, ಭಗವಾನ ರಾಮ ಯಾವಾಗ ಶಿವ ಧನುಷ್ಯದ ಹೆದೆ ಏರಿಸುತ್ತಿದ್ದಾಗ, ಧನುಷ್ಯದ ಒಂದು ತುಂಡು ಆಕಾಶದಲ್ಲಿ ಹಾಗೂ ಇನ್ನೊಂದು ತುಂಡು ಪಾತಾಳಕ್ಕೆ ಹೋಯಿತು; ಆದರೆ ಮೂರನೇಯ ತುಂಡು ಅಂದರೆ ಧನುಷ್ಯದ ಮಧ್ಯದ ಭಾಗವು ಪೃಥ್ವಿಯಲ್ಲಿಯೇ ಬಿದ್ದಿತ್ತು. ಪೃಥ್ವಿಯಲ್ಲಿ ಬಿದ್ದ ಧನುಷ್ಯದ ಮಧ್ಯದ ಭಾಗವು ಇಂದು ನೇಪಾಳದಲ್ಲಿದೆ. ಈ ತುಂಡು ಬಿದ್ದಿರುವ ಸ್ಥಳವನ್ನು ಪ್ರಸ್ತುತ ‘ಧನುಷ ಧಾಮ’ ಎಂದು ಗುರುತಿಸುತ್ತಾರೆ. ಈ ದೇವಸ್ಥಾನ ನೇಪಾಳದ ಜನಕಪುರದಿಂದ ೧೯ ಕಿಲೋಮೀಟರ್ ದೂರದಲ್ಲಿದೆ. ಇಂದಿಗೂ ಅನೇಕ ರಾಮಭಕ್ತರು ಮತ್ತು ಶ್ರದ್ಧಾವಂತ ಜನರು ಶಿವ ಧನುಷ್ಯದ ಆ ಮುರಿದ ತುಂಡಿನ ಪೂಜೆ ಮಾಡಲು ಅಲ್ಲಿ ಶ್ರದ್ಧಾಭಕ್ತಿಯಿಂದ ಹೋಗುತ್ತಾರೆ.
(ಆಧಾರ : ಮರಾಠಿ ದೈನಿಕ ‘ಸಕಾಳ’)