ಬಾಲ್ಯ ಕಳೆದುಹೋಯಿತೇ ?

‘ಬಾಲ್ಯ’ – ಜೀವನದ ಸುವರ್ಣಪುಟಗಳು. ಮನಸ್ಸು ಕುಗ್ಗಿದಾಗ ಅನೇಕ ಬಾರಿ ಬಾಲ್ಯದ ಸಿಹಿ ನೆನಪುಗಳು ಮನಸ್ಸಿಗೆ ಉತ್ಸಾಹ ಮತ್ತು ಶಕ್ತಿ ತುಂಬುತ್ತವೆ. ಬಾಲ್ಯದ ಸಂಸ್ಕಾರಗಳು ನಮಗೆ ತಿಳಿಯದೇ ಒಂದು ಒಳ್ಳೆಯ ನಾಗರಿಕನನ್ನಾಗಿ ಮಾಡುತ್ತದೆ. ಬಾಲ್ಯದಲ್ಲಿ ತಿಂದಿರುವ ಪೆಟ್ಟುಗಳು ಮನುಷ್ಯನನ್ನು ಜೀವನದಲ್ಲಿನ ಅನೇಕ ತಪ್ಪುಗಳಿಂದ ಪರಾವೃತ್ತಗೊಳಿಸುತ್ತದೆ; ಆದರೆ ಇಂದಿನ ಮಕ್ಕಳಿಗೆ ಈ ‘ಬಾಲ್ಯ’ವೇ ಕಳೆದುಹೋಗಿದೆ. ಇಂದು ‘ಟ್ಯಾಬಲೆಟ್’ (ಮಧ್ಯಮ ಆಕಾರದ ಗಣಕಯಂತ್ರ)ವು ಬಾಲ್ಯದ ಜಾಗವನ್ನು ಪಡೆದಿದೆ. ವಿದೇಶದಲ್ಲಿರುವ ಈ ಹುಚ್ಚು ಭಾರತಕ್ಕೆ ಬರುವ ಮೊದಲೇ ನಾವು ಎಚ್ಚರಿಕೆಯಿಂದಿರೋಣ. ಈ ಬಗ್ಗೆ ಒಂದು ‘ವಿಡಿಯೋ’ ಪ್ರಸಾರವಾಗುತ್ತಿದೆ. ೧-೨ ವರ್ಷದ ಮಕ್ಕಳ ಕೈಯಲ್ಲಿ ‘ಟ್ಯಾಬಲೆಟ್’ ಕೊಡುವುದೆಂದರೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೊದಲೇ ಅವರ ಆರೋಗ್ಯಕ್ಕೆ ಅಪಾಯಕಾರಿಯಾಗುವ ಬೇಡಿಕೆಯನ್ನು ಒದಗಿಸುವಂತಾಗಿದೆ. ಮಕ್ಕಳ ಕೈಯಿಂದ ‘ಟ್ಯಾಬಲೆಟ್’ ತೆಗೆದುಕೊಂಡಾಗ ಅವರು ಆಕ್ರಮಣಕಾರಿಯಾಗುವುದು, ಅವರು ಮನೆಯ ವಸ್ತುಗಳನ್ನು ಹಾಳು ಮಾಡುವುದು, ತನಗೆ ಅಥವಾ ಇತರರಿಗೆ ತೊಂದರೆಯಾಗುವಂತೆ ನಡೆದುಕೊಳ್ಳುವುದು ಈ ವಿಡಿಯೋದಲ್ಲಿ ಕಾಣಿಸುತ್ತದೆ. ಮಕ್ಕಳು ‘ಟ್ಯಾಬಲೆಟ್’ ಇಲ್ಲದೇ ಊಟ ಮಾಡುವುದು, ಮಲಗುವುದು, ಹೀಗೆ ಅಪರೂಪವಾಗಿದೆ. ಕೆಲಸದಿಂದ ದಣಿದು ಬಂದ ತಾಯಿ-ತಂದೆಯರು ‘ಟ್ಯಾಬಲೆಟ್’ ಕೊಟ್ಟು ಮಕ್ಕಳನ್ನು ಅದರಲ್ಲಿ ತೊಡಗಿಸಿ ಅವರ ಕೆಲಸವನ್ನು ‘ಟ್ಯಾಬಲೆಟ್‌’ದೊಂದಿಗೆ ಹಂಚಿಕೊಳ್ಳುತ್ತಾರೆ !

‘ಟ್ಯಾಬಲೆಟ್’ ಬಳಸುವ ಮಕ್ಕಳು ಕೈ ತಪ್ಪಿ ಹೋಗಿದ್ದಾರೆ. ಎಷ್ಟೋ ಚಿಕ್ಕ ಮಕ್ಕಳ ಕೈಯಲ್ಲಿ ಸಂಚಾರವಾಣಿ ಇಲ್ಲದಿದ್ದರೂ ಮಲಗಿದ್ದಾಗ ಅವರು ಅದನ್ನು ಹಿಡಿದಿದ್ದಾರೆನೋ, ಎನ್ನುವಂತೆ ಅವರ ಬೆರಳುಗಳು ಅಲುಗಾಡುತ್ತಿರುತ್ತವೆ. ‘ಟ್ಯಾಬಲೆಟ್’ ದೊಂದಿಗೆ ಬೆರಳುಗಳ ಸಂಪರ್ಕದಿಂದಾಗಿ ಬರವಣಿಗೆಯ ದೃಷ್ಟಿಯಿಂದ ಮಕ್ಕಳ ಸ್ನಾಯುಗಳ ಚಟುವಟಿಕೆಯಲ್ಲಿ ಅಡಚಣೆಯುಂಟಾಗುತ್ತಿದೆ. ಬರವಣಿಗೆಗಾಗಿ ಅಗತ್ಯವಿರುವ ಶಕ್ತಿ ಮಕ್ಕಳ ಕೈಯಲ್ಲಿ ಇಲ್ಲದಿರುವುದು ಗಮನಕ್ಕೆ ಬಂದಿತು. ಬರವಣಿಗೆ, ಚಿತ್ರವನ್ನು ಬಿಡಿಸುವುದು, ಚಿತ್ರಿಸುವುದು ಇವೆಲ್ಲವೂ ‘ಟ್ಯಾಬಲೆಟ್‌’ನಲ್ಲಿಯೇ ಮಾಡುತ್ತಿರುವುದರಿಂದ ಕೈಗೆ ಆ ದೃಷ್ಟಿಯಿಂದ ಅಭ್ಯಾಸ (ರೂಢಿ)ವಾಗಲಿಲ್ಲ. ಮನುಷ್ಯರಿಗಿಂತ ಯಂತ್ರದೊಂದಿಗೆ ಹೆಚ್ಚು ಸಂಬಂಧ ಬರುವುದರಿಂದ ಈ ಮಕ್ಕಳು ಕೌಟುಂಬಿಕ, ಮಾನಸಿಕ ಮತ್ತು ಸಾಮಾಜಿಕ ಭಾವನೆಗಳಿಂದ ದೂರವಾಗಿದ್ದಾರೆ. ಇದರಿಂದ ವ್ಯಕ್ತಿಯನ್ನು ಗೌರವಿಸಲು, ಏನಾದರೊಂದನ್ನು ಪಡೆಯಲು, ತಾಳ್ಮೆಯಿಂದಿರಲು, ನಿರಾಕರಣೆಯನ್ನು ಜೀರ್ಣಿಸಿಕೊಳ್ಳಲು, ಶಾಂತವಾಗಿರಲು ಅವರಿಗೆ ಕಷ್ಟವಾಗುತ್ತದೆ. ಅಂತರ್ಜಾಲದ ಮೂಲಕ ತಿಳಿಯದ ವಯಸ್ಸಿನಲ್ಲಿ ಅನೇಕ ವಿಷಯಗಳು ತಿಳಿಯುತ್ತಿರುವುದರಿಂದ ಮನಸ್ಸಿನ ಮೇಲೆ ವಿಪರೀತ ಪರಿಣಾಮವಾಗುತ್ತಿದೆ.

ಎಲ್ಲಿಯವರೆಗೆ ಮನುಷ್ಯನು ಯಂತ್ರವನ್ನು ಬಳಸುತ್ತಾನೆಯೋ, ಅಲ್ಲಿಯವರೆಗೆ ಸರಿಯಿರುತ್ತದೆ; ಆದರೆ ಯಾವಾಗ ಯಂತ್ರವು ಮನುಷ್ಯನನ್ನು ಬಳಸುತ್ತದೆಯೊ, ಆಗ ವಿನಾಶ ಉದ್ಭವಿಸುತ್ತದೆ. ಆದ್ದರಿಂದ ಮಕ್ಕಳು ‘ಟ್ಯಾಬಲೆಟ್’ ಅಥವಾ ಸಂಚಾರವಾಣಿಯನ್ನು ಬಳಸುವ ಬಗ್ಗೆ ಪಾಲಕರು ಸೂಕ್ತ ಸಮಯದಲ್ಲಿಯೇ ಎಚ್ಚರಿಕೆಯಿಂದ, ಜಾಗರೂಕತೆಯಿಂದಿರಬೇಕು. ಮಕ್ಕಳ ಅಂದರೆ ಕುಟುಂಬ, ಸಮಾಜ, ರಾಷ್ಟ್ರ, ಧರ್ಮದ ಅಂಧಃಕಾರಮಯ ಭವಿಷ್ಯದೆಡೆಗೆ ಆಗುತ್ತಿರುವ ಮಾರ್ಗಕ್ರಮಣವು ಪ್ರಕಾಶಮಯ ಮಾರ್ಗವನ್ನು ಅನುಸರಿಸಬೇಕು. ಮಕ್ಕಳನ್ನು ನಿಸರ್ಗದೆಡೆಗೆ ಕರೆದೊಯ್ಯುವುದು, ಅವರೊಂದಿಗೆ ಸ್ನೇಹದಿಂದ ಮಾತನಾಡುವುದು, ಅವರಿಗಾಗಿ ಸಾಕಷ್ಟು ಸಮಯವನ್ನು ಕೊಟ್ಟು ಅವರಲ್ಲಿನ ಸುಪ್ತ ಕಲೆಗಳಿಗೆ ಪ್ರೋತ್ಸಾಹನ ನೀಡುವುದು, ಮೈದಾನದ ಆಟದಿಂದ ಶಾರೀರಿಕ ಕ್ಷಮತೆಯನ್ನು ಹೆಚ್ಚಿಸುವುದು, ಧಾರ್ಮಿಕ ಸಂಸ್ಕಾರಗಳ ಆಧಾರದಿಂದ ಅವರ ವಿಚಾರಗಳಿಗೆ ಯೋಗ್ಯ ಮಾರ್ಗವನ್ನು ನೀಡುವುದು, ಹೀಗೆ ಮಾಡಿದರೆ ಮಾತ್ರ ಅವರು ಸುಸಂಸ್ಕಾರಯುತರಾಗಿ ಮುಂದಿನ ಒಳ್ಳೆಯ ಜೀವನದ ಆನಂದವನ್ನು ಪಡೆಯುವರು.

– ಸೌ. ಸ್ನೇಹಾ ತಾಮ್ಹನಕರ, ರತ್ನಾಗಿರಿ.