ಉತ್ತರಪ್ರದೇಶದ ೭ ಸಾವಿರ ೪೪೨ ಮದರಸಾಗಳ ವಿಚಾರಣೆಗಾಗಿ ಸಮಿತಿ ಸ್ಥಾಪನೆ

ಉತ್ತರ ಪ್ರದೇಶದ ಮದರಸಾಗಳ ಆಧುನೀಕರಣದ ಯೋಜನೆಯಲ್ಲಿ ಸಹಭಾಗಿಯಾಗಿರುವ ೭ ಸಾವಿರ ೪೪೨ ಮದರಸಾಗಳ ವಿಚಾರಣೆಗಾಗಿ ಸಮಿತಿ ನೇಮಿಸಲಾಗಿದೆ. ಮೆ ೧೫ ರ ವರೆಗೆ ಸಮಿತಿ ತನ್ನ ವರದಿ ಪ್ರಸ್ತುತ ಪಡಿಸಬೇಕೆಂದು ಹೇಳಲಾಗಿದೆ.

ಮಥುರಾದಲ್ಲಿ ಶ್ರೀಕೃಷ್ಣಜನ್ಮಭೂಮಿಯ ಮೇಲೆ ಶ್ರೀಕೃಷ್ಣ ದೇವಾಲಯದ ಮೇಲಿರುವ ಧ್ವನಿವರ್ಧಕಗಳ ಸದ್ದನ್ನು ಕಡಿಮೆ ಮಾಡಲಾಗುವುದು !

ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯಲ್ಲಿನ ಶ್ರೀಕೃಷ್ಣ ದೇವಾಲಯದ ಮೇಲೆ ಹಾಕಲಾಗುವ ಧ್ವನಿವರ್ಧಕಗಳ ಶಬ್ಧವನ್ನು ಕಡಿಮೆಗೊಳಿಸುವಂತೆ ಸರಕಾರವು ತೀರ್ಮಾನ ತೆಗೆದುಕೊಂಡಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ರಾಜ್ಯದಲ್ಲಿರುವ ಧಾರ್ಮಿಕ ಸ್ಥಳಗಳಲ್ಲಿರುವ ಧ್ವನಿವರ್ಧಕಗಳ ಶಬ್ಧವನ್ನು ನ್ಯೂನ ಮಾಡಲು ಕರೆ ನೀಡಿದ್ದರು.

ಧಾರ್ಮಿಕ ಸ್ಥಳಗಳಲ್ಲಿರುವ ಧ್ವನಿವರ್ಧಕಗಳ ಶಬ್ದವನ್ನು ಆವರಣದ ವರೆಗೆ ಸೀಮಿತಗೊಳಿಸಿ !

ಉತ್ತರಪ್ರದೇಶ ಸರಕಾರವು ಧ್ವನಿವರ್ಧಕಗಳ ವಿಷಯದಲ್ಲಿ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಇದರ ಪ್ರಕಾರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿಯನ್ನು ನೀಡಲಾಗಿದ್ದರೆ, ಧ್ವನಿವರ್ಧಕಗಳ ಶಬ್ದವು ಧಾರ್ಮಿಕ ಕ್ಷೇತ್ರಗಳ ಆವರಣಕ್ಕೆ ಮಾತ್ರ ಸೀಮಿತವಾಗಿರಬೇಕು.

ಅಯೋಧ್ಯೆಯಲ್ಲಿರುವ ದೇವಸ್ಥಾನ, ಮಠಗಳು ಹಾಗೂ ಧಾರ್ಮಿಕ ಸ್ಥಳಗಳು ಭರಿಸಬೇಕಾದ ಕರ ರದ್ದು !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ

ಚೈತ್ರ ನವರಾತ್ರಿಯ 9 ದಿನಗಳ ಕಾಲ ಮಾಂಸದಂಗಡಿಗಳು ಮುಚ್ಚಬೇಕು !

ಉತ್ತರಪ್ರದೇಶ ಸರಕಾರದ ಈ ರೀತಿಯ ಆದೇಶ ನೀಡುತ್ತದೆಯಾದರೆ, ಭಾಜಪ ಸರಕಾರ ಇರುವ ಬೇರೆ ರಾಜ್ಯಗಳು ಹೀಗೆ ಏಕೆ ನೀಡಲು ಸಾಧ್ಯವಾಗುವುದಿಲ್ಲ ?, ಎಂಬ ಪ್ರಶ್ನೆ ಹಿಂದೂ ಭಕ್ತರ ಮನಸ್ಸಿನಲ್ಲಿ ಮೂಡುತ್ತದೆ !

ರಾಷ್ಟ್ರವಾದಕ್ಕೆ ಜನತೆಯ ತೀರ್ಪು ! – ಯೋಗಿ ಆದಿತ್ಯನಾಥ

ಉತ್ತರಪ್ರದೇಶದಲ್ಲಿ ಭಾರಿ ಯಶಸ್ಸಿನ ನಂತರ ಯೋಗಿ ಆದಿತ್ಯನಾಥರು ಭಾಜಪದ ನೇತಾರರು ಹಾಗೂ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು. ಈ ಸಮಯದಲ್ಲಿ ವಿಜಯೋತ್ಸವವನ್ನು ಆಚರಿಸುತ್ತಿರುವ ಕಾರ್ಯಕರ್ತರು ಕೇಸರಿ ಬಣ್ಣವನ್ನು ಎರಚಿದರು

ಉತ್ತರಪ್ರದೇಶದಲ್ಲಿ ಶಿವಸೇನೆಗೆ ಸೋಲು : ಒಂದೇ ಒಂದು ಜಾಗದಲ್ಲಿಯೂ ಗೆಲ್ಲಲು ಸಾಧ್ಯವಾಗಲಿಲ್ಲ !

ಶಿವಸೇನೆಯು ಭಾಜಪವನ್ನು ವಿರೋಧಿಸಲು ಉತ್ತರಪ್ರದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಶಿವಸೇನೆಯಿಂದ ಒಟ್ಟೂ ೬೦ ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

‘ಕಟ್ಟರವಾದಿ ಹಿಂದೂ ಸಾಧುವಿನ ರಾಜಕೀಯ ಬಲ ಹೆಚ್ಚಿತು’(ಅಂತೆ)

ಉತ್ತರಪ್ರದೇಶ ವಿಧಾನಸಭೆಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮುಖಂಡತ್ವದಲ್ಲಿ ಭಾಜಪಗೆ ಬಹುದೊಡ್ಡ ಜಯ ದೊರಕಿರುವುದರಿಂದ ಹಿಂದೂ ದ್ವೇಷಿ ಕೊಲ್ಲಿ ರಾಷ್ಟ್ರಗಳ ‘ಅಲ್-ಜಜೀರಾ’ ಈ ವಾರ್ತಾ ವಾಹಿನಿಗೆ ಅಸೂಯೆ ನಿರ್ಮಾಣವಾಗಿದೆ.

ಅಯೋಧ್ಯೆಯ ಶ್ರೀರಾಮಮಂದಿರದ ಮಾರ್ಗದಲ್ಲಿರುವ ವೃತ್ತಕ್ಕೆ ಲತಾಮಂಗೇಶ್ಕರ್ ಇವರ ಹೆಸರು ನೀಡುವೆವು ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಘೋಷಣೆ

ಲತಾ ಮಂಗೇಶ್ಕರ್ ಇವರು ರಾಮ ಭಕ್ತರಾಗಿದ್ದರು. ಆದ್ದರಿಂದ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀ ರಾಮಮಂದಿರ ನಿರ್ಮಾಣವಾಗುವಾಗ ಲತಾಜಿಯ ಸ್ಮರಣೆ ಆಗಬೇಕೆಂದು ನಮಗೆ ಅನಿಸುತ್ತದೆ. ಅದಕ್ಕಾಗಿ ಶ್ರೀ ರಾಮ ಮಂದಿರಕ್ಕೆ ಹೋಗುವ ಮುಖ್ಯ ಮಾರ್ಗದಲ್ಲಿರುವ ಒಂದು ವೃತ್ತಕ್ಕೆ ಭಾರತ ರತ್ನ ಲತಾ ಮಂಗೇಶ್ಕರ್ ಇವರ ಹೆಸರು ನೀಡಲಾಗುವುದು. ಇದು ನಮ್ಮ ಸರಕಾರದ ಸಂಕಲ್ಪವಾಗಿದೆ, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿಯ ಸಾರ್ವಜನಿಕ ಸಭೆಯಲ್ಲಿ ಘೋಷಣೆ ಮಾಡಿದರು.

‘ಲೇಡಿ ಡಾನ್’ ಹೆಸರಿನ ಟ್ವಿಟರ್ ಖಾತೆಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಭಾಜಪದ ನಾಯಕರನ್ನು ಬಾಂಬ್ ಮೂಲಕ ಹತ್ಯೆ ನಡೆಸುವ ಬೆದರಿಕೆ

‘ಲೇಡಿ ಡಾನ್’ ಹೆಸರಿನ ತೆರೆದಿರುವ ಟ್ರೀಟರ್ ಖಾತೆಯಿಂದ, ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಹಿತ ಭಾಜಪದ ನಾಯಕರ ಎಲ್ಲಾ ವಾಹನಗಳಲ್ಲಿ ಆರ್.ಡಿ.ಎಕ್ಸ್.ಅನ್ನು ಉಪಯೋಗಿಸಿ ಸ್ಪೋಟಿಸಲಾಗುವುದು.