ಚೈತ್ರ ನವರಾತ್ರಿಯ 9 ದಿನಗಳ ಕಾಲ ಮಾಂಸದಂಗಡಿಗಳು ಮುಚ್ಚಬೇಕು !

ಉತ್ತರಪ್ರದೇಶ ಸರಕಾರದ ಆದೇಶ

* ಉತ್ತರಪ್ರದೇಶ ಸರಕಾರದ ಈ ರೀತಿಯ ಆದೇಶ ನೀಡುತ್ತದೆಯಾದರೆ, ಭಾಜಪ ಸರಕಾರ ಇರುವ ಬೇರೆ ರಾಜ್ಯಗಳು ಹೀಗೆ ಏಕೆ ನೀಡಲು ಸಾಧ್ಯವಾಗುವುದಿಲ್ಲ ?, ಎಂಬ ಪ್ರಶ್ನೆ ಹಿಂದೂ ಭಕ್ತರ ಮನಸ್ಸಿನಲ್ಲಿ ಮೂಡುತ್ತದೆ ! – ಸಂಪಾದಕರು 

ಲಕ್ಷ್ಮಣಪುರಿ (ಉತ್ತರಪ್ರದೇಶ) – ಏಪ್ರಿಲ್ 2 ರಿಂದ ಆರಂಭವಾಗಿರುವ ಚೈತ್ರ ನವರಾತ್ರಿಯ ಸಮಯದಲ್ಲಿ ಎಂದರೆ ಏಪ್ರಿಲ 10 ವರೆಗೆ ರಾಜ್ಯದಲ್ಲಿ ಮಾಂಸ ಮಾರಾಟದ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರಕಾರ ಆದೇಶ ನೀಡಿದೆ. ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆಯು ತಮ್ಮ ವ್ಯಾಪ್ತಿಗೆ ಬರುವಲ್ಲಿ ಈ 9 ದಿನ ಮಾಂಸ ಮಾರಾಟದ ಒಂದು ಅಂಗಡಿಯು ತೆರೆಯಬಾರದು ಎಂಬುದು ಖಾತ್ರಿ ಪಡಿಸಿಕೊಳ್ಳಬೇಕು, `ಏನಾದರೂ ಅಂಗಡಿ ತೆರೆದರೆ, ಅದರ ಜವಾಬ್ದಾರಿ ಪೊಲೀಸ್ ಠಾಣೆಯ ಮುಖ್ಯಸ್ಥರ ಮೇಲೆ ಇರುವುದು’, ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶ ಜಾರಿ ಆಗುತ್ತದೆ ಅಥವಾ ಇಲ್ಲವೋ ಎಂಬುದರ ನಿಗಾವಹಿಸಲು ಬೇರೆ ಬೇರೆ ದಳಗಳನ್ನು ಸ್ಥಾಪಿಸಲಾಗಿದೆ. ಮಾಂಸದ ಅಂಗಡಿಗಳು ಏನಾದರೂ ತೆರೆದಿದ್ದು ಕಂಡರೆ ಆಗ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು.

( ಸೌಜನ್ಯ : Capital TV Uttar Pradesh )