ಉತ್ತರಪ್ರದೇಶದಲ್ಲಿ ಶಿವಸೇನೆಗೆ ಸೋಲು : ಒಂದೇ ಒಂದು ಜಾಗದಲ್ಲಿಯೂ ಗೆಲ್ಲಲು ಸಾಧ್ಯವಾಗಲಿಲ್ಲ !


ಲಕ್ಷ್ಮಣಪುರಿ (ಉತ್ತರಪ್ರದೇಶ) – ಶಿವಸೇನೆಯು ಭಾಜಪವನ್ನು ವಿರೋಧಿಸಲು ಉತ್ತರಪ್ರದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಶಿವಸೇನೆಯಿಂದ ಒಟ್ಟೂ ೬೦ ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ೧೯ ಜನರ ಅರ್ಜಿಯು ರದ್ದಾಗಿತ್ತು. ಉಳಿದ ೪೧ ಜನರಲ್ಲಿ ಒಬ್ಬರಿಗೂ ಗೆಲ್ಲಲು ಸಾಧ್ಯವಾಗಲಿಲ್ಲ. ಶಿವಸೇನೆಯ ನೇತಾರ ಹಾಗೂ ಮಹಾರಾಷ್ಟ್ರದಲ್ಲಿನ ಪರಿಸರ ಮಂತ್ರಿಗಳಾದ ಆದಿತ್ಯ ಠಾಕರೆ, ನೇತಾರರಾದ ಸಂಜಯ ರಾವುತ, ಮಾಜಿ ಕೇಂದ್ರೀಯ ಮಂತ್ರಿ ಅರವಿಂದ ಸಾವಂತ, ಹಾಗೆಯೇ ಇತರ ನೇತಾರರು ಉತ್ತರಪ್ರದೇಶದಲ್ಲಿ ಪಕ್ಷದ ಪ್ರಚಾರಕ್ಕಾಗಿ ಹೋಗಿದ್ದರು. ಆದಿತ್ಯ ಠಾಕರೆಯವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರ ಗೋರಖಪುರ ಮತಕ್ಷೇತ್ರದಲ್ಲಿಯೂ ಪ್ರಸಾರ ಸಭೆಯನ್ನು ನಡೆಸಿದ್ದರು.