‘ಲೇಡಿ ಡಾನ್’ ಹೆಸರಿನ ಟ್ವಿಟರ್ ಖಾತೆಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಭಾಜಪದ ನಾಯಕರನ್ನು ಬಾಂಬ್ ಮೂಲಕ ಹತ್ಯೆ ನಡೆಸುವ ಬೆದರಿಕೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ‘ಲೇಡಿ ಡಾನ್’ ಹೆಸರಿನ ತೆರೆದಿರುವ ಟ್ರೀಟರ್ ಖಾತೆಯಿಂದ, ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಹಿತ ಭಾಜಪದ ನಾಯಕರ ಎಲ್ಲಾ ವಾಹನಗಳಲ್ಲಿ ಆರ್.ಡಿ.ಎಕ್ಸ್.ಅನ್ನು ಉಪಯೋಗಿಸಿ ಸ್ಪೋಟಿಸಲಾಗುವುದು. ಇದರಲ್ಲಿ ಎಲ್ಲರ ಜೀವ ಹೋಗುವುದು’ ಎಂದು ಬೆದರಿಕೆ ನೀಡಲಾಗಿದೆ. ಈ ವಿಷಯವಾಗಿ ಮೆರಠ ಪೊಲೀಸರು ಟ್ವಿಟರ್‌ಗೆ ಪತ್ರ ಬರೆದು ‘ಲೇಡಿ ಡಾನ್’ ಖಾತೆಯ ಮಾಹಿತಿ ಕೇಳಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ, ಲಕ್ಷ್ಮಣಪುರಿ ರೈಲು ನಿಲ್ದಾಣ ಮತ್ತು ಗೊರಖಪೂರ ಮಠ ಇದನ್ನು ಸಹ ಬಾಂಬ್ ಮೂಲಕ ಧ್ವಂಸಮಾಡುವ ಬೆದರಿಕೆಯನ್ನು ಈ ಟ್ವೀಟ್‌ನಲ್ಲಿ ನೀಡಲಾಗಿದೆ. ಪೊಲೀಸರು ಮಾಹಿತಿ ನೀಡಿದ ನಂತರ ಟ್ವಿಟರ್ ನಿಂದ ಈ ಖಾತೆ ಕೆಲವು ಸಮಯಕ್ಕಾಗಿ ಅಮಾನತ್ತು ಮಾಡಲಾಗಿದೆ.